Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜಿಪಂ ಸಿಇಓ ಸೂಚನೆ: ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ

ಕೊಪ್ಪಳ. ಡಿಸೆಂಬರ್ 14 : ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಕಂಪ್ಯೂಟರ್ ತರಬೇತಿ ನೀಡಲು ಕ್ರಮವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಿವಿಧ ವಸತಿ ನಿಲಯಗಳಲ್ಲಿ ಗಣಕಯಂತ್ರ ತರಬೇತಿ ಆರಂಭಗೊAಡಿದೆ.

ಕೊಪ್ಪಳ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ನಡೆಯುವ 11 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ ಹಾಗೂ ಮೆಟ್ರಿಕ್ ನಂತರದ ಎರಡು ವಸತಿ ನಿಲಯಗಳಲ್ಲಿನ ಬಾಲಕರು ಹಾಗೂ ಬಾಲಕಿಯರಿಗೆ ಕಂಪ್ಯೂಟರ್ ಜ್ಞಾನ ಸಹ ಅತ್ಯವಶ್ಯವಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಇದಕ್ಕೆ ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಸಿಇಓ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರಿಂದ ಇದಕ್ಕೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ ಕೋಕರೆ ಅವರು ತಿಳಿಸಿದ್ದಾರೆ.

ಸಿಇಓ ಅವರು ನೀಡಿದ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಗಣಕಯಂತ್ರ ಶಿಕ್ಷಕರಿಂದ ವಾರದಲ್ಲಿ 3 ದಿನ ಸಂಜೆ 6 ಗಂಟೆಯಿAದ 8 ಗಂಟೆವರೆಗೆ ವಿದ್ಯಾರ್ಥಿಗಳಿಗೆ ಗಣಕಯಂತ್ರ ಕೌಶಲ ಅಭಿವೃದ್ಧಿಗಾಗಿ ಕಂಪ್ಯೂಟರ್ ಬೇಸಿಕ್ ತರಬೇತಿ, ಎಂಎಸ್ ಆಫೀಸ್, ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್, ಇಂಟರನೆಟ್ ಬಳಕೆ ಹಾಗೂ ಮಾಹಿತಿ ತಂತ್ರಜ್ಞಾನದ ಕುರಿತು ತರಬೇತಿ ನೀಡಲಾಗುತ್ತಿದೆ.

Related posts

ಶಾಲಾ ವಾರ್ಷಿಕೋತ್ಸವಗಳು ವಿಧ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತವೆ: ಶಾಸಕ ಕಳಕಪ್ಪ ಬಂಡಿ

satyadarshana

ಸೂಡಿ ಗ್ರಾಮದ ಜನತೆಗೆ ಶುದ್ಧ ನೀರು ಪೊರೈಸುತ್ತಿದೆ -ಕಡಬಿನ.

satyadarshana

ಹಗಲುರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ ಬೆಂಕಿ

satyadarshana

Leave a Comment