Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹಗಲುರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ ಬೆಂಕಿ

 

 ಸತ್ಯ ದರ್ಶನ

ಗದಗ :  ಹಗಲುರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ ವಿದ್ಯುತ್ ಅವಘಡದಿಂದ ಸುಟ್ಟು ಕರಕಲಾದ ಘಟನೆ ರವಿವಾರ ಮಧ್ಯಾಹ್ನಾ ರೋಣ  ತಾಲೂಕಿನ ಬಿ.ಎಸ್.ಬೆಲೇರಿ ಗ್ರಾಮದಲ್ಲಿ ರೈತರ ಕಣ್ಣು ಎದುರೇ ನಡೆದಿದೆ.

ನಾವು ಮೂರು ಜನ ಅಣ್ಣತಮ್ಮಂದಿರು ಕೂಡಿಕೊಂಡ ೮ಎಕರೆ ಹೊಲದಾಗ ಬೆಳೆದ ಕಬ್ಬಿನ ಬೆಳೆಗೆ ಬೆಂಕಿ ಬಿದ್ದು ನಮ್ಮ ಕಣ್ಣುಮುಂದ ಹಾಳಾಗಿ ಹೋತ್ರಿ.ಏನು ಮಾಡೋದು ಒಂದು ವರ್ಷದಿಂದ ಮೂರು ಜನ ಸಹೋದರರು ಹಗಲಿ,ರಾತ್ರಿ ಕಣ್ಣಿಗೆ ಎಣ್ಣಿಬಿಟ್ಟಗೊಂಡು ನೀರು ಹಾಸಿ ಬೆಳೆಸಿದ್ದು,ಕಬ್ಬು‌ ಕಾಟವಿಗೆ ಬಂದಿತ್ರೀ. ಇದರಿಂದ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲರೀ ಎಂದು ರೈತ ಸಹೋದರರು ತಮ್ಮ ಅಳಿಲನ್ನು ಪತ್ರಿಕೆಯೊಂದಿಗೆ ತೊಂಡಿಕೊಂಡರು.

ಬಿ.ಎಸ್.ಬೆಲೇರಿ ಗ್ರಾಮದ ಮುತ್ತಪ್ಪ ಖ್ಯಾಡದ,ಹೂವಪ್ಪ ಖ್ಯಾಡದ,ಹನಮಂತ ಖ್ಯಾಡದ ಎಂಬ ಸಹೋದರರಿಗೆ ಸೇರಿದ್ದ ಜಮೀನಿನಲ್ಲಿ ಬೆಳೆಯಲಾದ 8 ಎಕರೆ ಪ್ರದೇಶದಲ್ಲಿ ಕಬ್ಬಿನ ಬೆಳೆಗೆ ವಿದ್ಯುತ್ ಅವಘಡದಿಂದ ಬೆಂಕಿ‌ ಬಿದ್ದ ಪರಿಣಾಮ ಕಬ್ಬು ಸುಟ್ಟು ಕರಕಲಾಗಿದೆ.

ಪ್ರತಿ ಎಕರೆ ೪೦ ಸಾವಿರ ರೂಪಾಯಿ ಖರ್ಚು ಮಾಡಿ 8 ಎಕರೆ ಪ್ರದೇಶದಲ್ಲಿ ಒಟ್ಟು 3,20,000 ವೆಚ್ಚದಲ್ಲಿ ಬೆಳೆಯಲಾದ ಪ್ರತಿ ಎಕರೆ ಪ್ರದೇಶಕ್ಕೆ 50ಟನ್ ಇಳುವರಿ ಮಟ್ಟಕ್ಕೆ ಬೆಳೆದಿತ್ತು.10,70,000 ಮೌಲ್ಯ ಬೆಳೆ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

Related posts

ಪರೀಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ : ಎಂ.ಸುಂದರೇಶ ಬಾಬು

satyadarshana

ಅಪ್ಪನ ಸಮಾಧಿಯ ಪಕ್ಕದಲ್ಲಿಯೇ ಮಗನ ಅಂತ್ಯಸಂಸ್ಕಾರ * ಕಂಠೀರವ ಸ್ಟುಡಿಯೋ ಆವರಣದಲ್ಲಿ ಪುನೀತ್ ರಾಜ್‌ಕುಮಾರ್ ಅಂತ್ಯಸಂಸ್ಕಾರ

satyadarshana

ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಕಂಪ್ಯೂಟರ್ ಆಪರೇಟರ್.

satyadarshana

Leave a Comment