Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಸೂಡಿ ಗ್ರಾಮದ ಜನತೆಗೆ ಶುದ್ಧ ನೀರು ಪೊರೈಸುತ್ತಿದೆ -ಕಡಬಿನ.

ಗಜೇಂದ್ರಗಡ ಆಗಸ್ಟ್ .29: ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೊಂಡಿದೆ ಎಂಬ ವಿಷಯವನ್ನು ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಸೂಡಿ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಕಲುಸಿತ ನೀರು ಪೂರೈಕೆ ಮಾಡಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಸೂಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹುಲಗವ್ವ ಬಸವರಾಜ ಕಡಬಿನ ತಿಳಿಸಿದ್ದಾರೆ..

ಈ ವಿಚಾರವಾಗಿ ಪ್ರಕಟಣೆ ನೀಡಿರುವ ಅವರು, ಸೂಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿರುವ ಸ್ಥಳ ಮತ್ತು ಮನೆಗಳಿಗೆ ಬರುವ ನೀರು ಕಲುಷಿತಗೊಂಡಿದೆ ಶುದ್ಧವಾಗಿಲ್ಲ ಎಂದು ಹೇಳುವದು ತಪ್ಪು ಏಕೆಂದರೆ ಈ ಕುರಿತು ಯಾವುದೇ ಪ್ರಯೋಗ ಮಾಡಿಲ್ಲ ಕಾರಣ ಅಶುದ್ಧತೆ ಬಗ್ಗೆ ನಿಖರತೆ ಇಲ್ಲ. ಹೀಗಿದ್ದಾಗಲೂ ಗ್ರಾಮ ಪಂಚಾಯತ್ ಹೆಸರಿಗೆ ಕಳಂಕ ತರುವಂತಹ ಸುದ್ದಿ ಪ್ರಕಟಗೊಂಡದ್ದು ಗ್ರಾಮ ಪಂಚಾಯತಿಯ ಹೆಸರಿಗೆ ಮಸಿಬಳೆಯುವಂತಹ ಪ್ರಯತ್ನವಿದು ಇನ್ನೊಬ್ಬರ ಮುಖಕ್ಕೆ ಮಸಿ ಹಚ್ಚಬೇಕೆಂದರೆ ಮೊದಲು ಅದು ನಮ್ಮ ಕೈ ಗೆ ಹತ್ತುತ್ತದೆ ಎಂಬ ಅರಿವಿರಬೇಕು, ಅಲ್ಲದೆ ಮಳೆಗಾಲದಲ್ಲಿ ಬಹುತೇಕ ಬೋರವೆಲ್ಲಗಳಿಂದ ಸರಬರಾಜಾಗುವ ನೀರು ಪ್ರಾರಂಭದಲ್ಲಿ ಗೊಡಗು ನೀರು ಬರುವುದಂತೂ ಎಲ್ಲರಿಗೂ ತಿಳಿದ ವಿಷಯ ಇದನ್ನೇ ತಪ್ಪು ಗ್ರಹಿಸಿಕೊಂಡು ಸುದ್ದಿ ಮಾಡುವುದು ತಪ್ಪು ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರನ್ನು ಪೊರೈಸುತ್ತಿದೆ ಈ ಅಂಶ ತಿಳಿಯದೆ ತಪ್ಪಾಗಿ ವರದಿ ಮಾಡುವದು ಸರಿಯಲ್ಲ ಎಂದು ತಿಳಿಸಿದ್ದಾರೆ‌..

Related posts

ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕಾಗಿ ಹೊಸ ಬಸಗಳ ಖರೀದಿಗೆ ಕ್ರಮ. ಸಚಿವ ರಾಮಲಿಂಗಾ ರೆಡ್ಡಿ

satyadarshana

ಗದಗ ಅರಣ್ಯ ವಿಭಾಗದ ವತಿಯಿಂದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಪರಿಸರ ದಿನ ಆಚರಣೆ

satyadarshana

ಜಾನುವಾರುಗಳಿಗೆ ಚರ್ಮಗಂಟು ರೋಗ : ತಪ್ಪದೇ ಲಸಿಕೆ ಹಾಕಿಸಿ

satyadarshana