Satya Darshana
ಬಿಸಿ ಬಿಸಿ ಸುದ್ದಿ
ಫೋಟೋಬಿಸಿ ಬಿಸಿ ಸುದ್ದಿರಾಜ್ಯ

ನರೇಗಲ್ಲಗೆ ಜಿಲ್ಲಾಧಿಕಾರಿ ಭೇಟಿ 

 

ನರೇಗಲ್ಲ : ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಮಂಗಳವಾರ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಭೇಟಿ ನೀಡಿದರು‌.

ಪ.ಪಂ ಸಭಾಭವನದಲ್ಲಿ ಡೋರ್ ಕ್ಲೋಜ್ ಗೌಪ್ಯ ಸಭೆ ನಡೆಸುವ ಉದ್ದೇಶದಿಂದ ಮಾಧ್ಯಮ ಪ್ರತಿನಿಧಿಗಳನ್ನು ಹೊರಗೆ ಕಳುಹಿಸಿದ ಘಟನೆ ಜರುಗಿದೆ. ಸಭೆ ಮುಗಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತೇನೆ. ದಯವಿಟ್ಟು ಮಾಧ್ಯಮ ಪ್ರತಿನಿಧಿಗಳು ಹೊರಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದರೆ. ಆದರೆ, ಸಭೆ ಮುಗಿದ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಕಾರ್ಯಾಲಯದಿಂದ ಹೊರಗೆ ಹೋಗಿದ್ದಾರೆ.

ನಂತರ ಪಟ್ಟಣದ ಘಟತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಅಲ್ಲಿ ನೆಡೆದ ಕಾಮಗಾರಿಗಳನ್ನು ಪರಿಶೀಲನೆ ಮಾಡಿದರು. ಅಲ್ಲದೇ, ಪಟ್ಟಣದ ಐತಿಹಾಸಿಕ ಹಿರೇಕೆರೆಗೆ ಭೇಟಿ ನೀಡಿದರು. ಈ ವೇಳೆ ನೂತನವಾಗಿ ಮುಖ್ಯಾಧಿಕಾರಿಯಾಗಿ ನೇಮಕರಾದ ಶಿವಾನಂದ ಅಜ್ಜಣ್ಣನವರ ಅವರಿಗೆ ಈ ಐತಿಹಾಸಿಕ ಹಿರೇಕೆರೆಯನ್ನು ಸ್ವಚ್ಛಗೊಳಿಸುವಂತೆ ತಿಳಿಸಿದರು.

ಪ.ಪಂ ಸದಸ್ಯ ದಾವುದಲಿ ಕುದರಿ, ರಾಚಯ್ಯ ಮಾಲಗಿತ್ತಿಮಠ, ಗಜೇಂದ್ರಗಡ ತಹಶೀಲ್ದಾರ ರಜನಿಕಾಂತ್ ಕೆಂಗೇರಿ, ಕಂದಾಯ ನಿರೀಕ್ಷಕೆ ಗೌರಮ್ಮ ಆದಪ್ಪನವರ, ಶರಣಪ್ಪ ನಾವಣಿ, ಎಂ. ಮರಿಗೌಡ್ರ, ವೀರಣ್ಣ ಅಡಗತ್ತಿ, ಬಸವರಾಜ ಗುಳೆರ, ಸಿದ್ದು ಹುಣಸಿಮರದ, ಗ್ರಾಮ ಲೇಕ್ಕಾಧಿಕಾರಿ ಕೆ.ಎನ್. ಪಾಟೀಲ, ಶಂಕ್ರಪ್ಪ ದೊಡ್ಡಣ್ಣನವರ ಸೇರಿದಂತೆ ಇತರರಿದ್ದರು.‌

Related posts

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ * ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸಚಿವರ ಭೇಟಿ: ವಿಶೇಷ ಪೂಜೆ

satyadarshana

ಶಾಸಕರ ಎದುರೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡ ಗ್ರಾಮಸ್ಥರು.. 

satyadarshana

ಜಕ್ಕಲಿ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ ಹಾಗೂ ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಆಕ್ರೋಶ 

satyadarshana

Leave a Comment