Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೋಟಿ ಕಂಠ ಗಾಯನ.

ಗದಗ:(ಸತ್ಯದರ್ಶನ) ಅ.14:  ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ, ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು ಇವುಗಳ ಕೇಳುವಿಕೆಯು ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ, ಈ ದೃಷ್ಠಿಯಿಂದ ಈ ಗೀತೆಗಳು ಕನ್ನಡದ ಶಕ್ತಿ ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಾತಿನಿಧಿಕವಾಗಿ ಆಯ್ದ 3 ಕನ್ನಡ ಗೀತೆಗಳ ಸಮೂಹ ಗಾಯನವನ್ನು ವಿನೂತನವಾಗಿ “ಲಕ್ಷ ಕಂಠ ಗೀತ ಗಾಯನ” ಶೀರ್ಷಿಕೆಯಡಿ ರಾಜ್ಯಾದ್ಯಂತ ಆಯೋಜಿಸಿ ಯಶಸ್ವಿಗೊಳಿಸಿದ ನಿಟ್ಟಿನಲ್ಲಿ ಈ ವರ್ಷವು ಅಕ್ಟೋಬರ್ 28 ರಂದು “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದೆ.  

ಈ ವಿಶೇಷ ಕಾರ್ಯಕ್ರಮದಲ್ಲಿ ಒಂದು ಕೋಟಿ ಜನರನ್ನು ಭಾಗಿಯಾಗಿಸಲು ಉದ್ದೇಶಿಸಲಾಗಿದೆ.
     ನನ್ನ ನಾಡು ನನ್ನ ಹಾಡು ಸಮೂಹ ಗೀತ ಗಾಯನ: ನಾಡಗೀತೆ,ಹುಯಿಲಗೋಳ ನಾರಾಯಣರಾಯರ  ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು,  ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ , ಡಾ. ಡಿ. ಎಸ್. ಕರ್ಕಿಯವರ ಹಚ್ಚೇವು ಕನ್ನಡದ ದೀಪ , ನಾಡೋಜ ಡಾ.ಚನ್ನವೀರ ಕಣವಿಯವರ ವಿಶ್ವ ವಿನೂತನ ವಿದ್ಯಾ ಚೇತನ, ಡಾ. ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಈ ಗೀತೆಗಳನ್ನು ದಿನಾಂಕ:28.10.2022 ರಂದು ಬೆಳಿಗ್ಗೆ:11  ಗಂಟೆಗೆ ಏಕಕಾಲದಲ್ಲಿ  ಹಾಡುವುದು.
       ಕೋಟಿ ಕಂಠ ಗೀತ ಗಾಯನದ ನೋಂದಣಿ: ಕಾರ್ಯಕ್ರಮದಲ್ಲಿ ಭಾಗವಹಿಸುವವರು ನೋಂದಾಯಿಸಿ ಭಾಗವಹಿಸಿದವರಿಗೆ ಸ್ವಯಂಚಾಲಿತ ಆನ್‍ಲೈನ್ ಪ್ರಮಾಣ ಪತ್ರ ನೀಡಲಾಗುವುದು ನೋಂದಣಿ ಅಭಿಯಾನವನ್ನು ಅಕ್ಟೋಬರ್ 11 ರಿಂದ 28 ರವರೆಗೆ ನೋಂದಣಿ ಮಾಡಬಹುದಾಗಿದೆ. ಆನ್‍ಲೈನ್ ನೋಂದಣಿಗಾಗಿ ಲಿಂಕ್ https:kannadasiri.karnataka.gov.in/kkg/public/ ಆಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಯಲಬುರ್ಗಾ ತಾಲೂಕಿನಲ್ಲಿ ಸರ್ಕಾರದ ನಿಯಮ ಉಲ್ಲಂಘನೆ ಪವನ​ ವಿದ್ಯುತ್ ಯಂತ್ರಗಳ ಅಳವಡಿಕೆ 

satyadarshana

ಕರ್ನಾಟಕ ಪ್ರದೇಶ ಮಾದಿಗರ ಸಂಘದ ಗದಗ ಜಿಲ್ಲಾ ಪದಾಧಿಕಾರಿಗಳ ನೇಮಕ: ಚಿತ್ರದುರ್ಗದಲ್ಲಿ ಆದೇಶ ಪತ್ರ ವಿತರಣೆ

satyadarshana

ವಿದ್ಯಾವಂತರೇ ಸೈಬರ್ ಕ್ರೈಂನಲ್ಲಿ ಬಕ್ರಾ ಆಗುತ್ತಿದ್ದಾರೆ 

satyadarshana

Leave a Comment