Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಉತ್ತರ ಕರ್ನಾಟಕದಲ್ಲೊಂದು ಲವ್ ಧೋಕಾ.

ಗದಗ : ಗೃಹಿಣಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಗಂಭೀರವಾಗಿ ಕೇಳಿ ಬಂದಿದೆ.

ಘಟನೆಯ ಬಗ್ಗೆ ಸಂತ್ರಸ್ತೆ ಅಪೂರ್ವ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ವಿದ್ಯಾಭ್ಯಾಸಕ್ಕೆಂದು ಹುಬ್ಬಳ್ಳಿಯಲ್ಲಿ ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಆ ವೇಳೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದ. ಆ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ದ. ಘಟನೆ ಬಗ್ಗೆ ತಾಯಿ ಹಾಗೂ ಮತ್ತಿತರರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದ ಪತಿಯೇ ಮನಬಂದಂತೆ ಕೊಚ್ಚಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಗಂಭೀರವಾಗಿ ಕೇಳಿ ಬಂದಿದೆ.

ಅನಿವಾರ್ಯವಾಗಿ ನಾನು ಮದುವೆಯಾಗುವುದಕ್ಕೆ ಒಪ್ಪಿಕೊಂಡೆ. ಇದಾದ ನಂತರ ವಿಜಯಪುರಕ್ಕೆ ಕರೆದೊಯ್ದು ನನ್ನನ್ನು ಇಜಾಜ್ ವಿವಾಹವಾದ. ಮದುವೆ ಆಗುತ್ತಿದ್ದಂತೆಯೇ ತನ್ನ ಮತ್ತೊಂದು ಮುಖ ತೋರಿಸಲಾರಂಭಿಸಿದ. ತನ್ನ ಧರ್ಮಕ್ಕೆ ಧರ್ಮಾಂತರ ಮಾಡಿಕೊಂಡರಷ್ಟೇ ಸಂಸಾರ ಮಾಡುತ್ತೇನೆ ಅಂದ. ಅನಿವಾರ್ಯವಾಗಿ ನಾನು ಧರ್ಮಾಂತರಗೊಂಡೆ. ಆದರೆ, ಬುರ್ಕಾ ಹಾಕಬೇಕು, ಹಿಜಾಬ್ ಹಾಕಿಕೊಳ್ಳಬೇಕೆಂದು ಪೀಡಿಸುತ್ತಿದ್ದ. ನನ್ನ ಹೆಸರನ್ನು ಅರ್ಫಾ ಬಾನು ಎಂದೂ ಸಹ ಬದಲಾಯಿಸಿದ ಎಂದು ಕಣ್ಣೀರು ಹಾಕಿದ್ದಾರೆ.

ನಿತ್ಯ ಪ್ರಾರ್ಥನೆ ಮಾಡುವಂತೆ ಒತ್ತಾಯಿಸುತ್ತಿದ್ದ, ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದ. ಮಗು ಹುಟ್ಟಿದ ನಂತರ ಅವನಿಗೂ ನಾನ್ ವೆಜ್ ಬಾಯಲ್ಲಿ ಇಟ್ಟು ತಿನ್ನುವಂತೆ ಪೀಡಿಸುತ್ತಿದ್ದ. ನನ್ನನ್ನು ಇಜಾಜ್ ಹಿಪ್ನಟೈಜ್ ಮಾಡಿ ತನ್ನಂತೆ ಕೇಳುವಂತೆ ಮಾಡಿದ್ದ. ಅವರ ಮನೆಯಲ್ಲಿ ನಾನು ಇಜಾಜ್ ಮಾತನ್ನು ಮಾತ್ರ ಕೇಳುತ್ತಿದ್ದೆ. ನಿತ್ಯ ಕಿರುಕುಳ ಕೊಟ್ಟರೂ ಹೇಗೋ ಸಂಸಾರ ದೂಡುತ್ತಿದ್ದೆ. ಆದರೆ ಅವನಿಗೆ ಇನ್ನೊಂದು ಮದುವೆಯಾಗಿರೋದು, ಮೂವರು ಮಕ್ಕಳಿರುವುದು ಗಮನಕ್ಕೆ ಬಂತು ಎಂದು ದುಃಖದಿಂದಲೇ ನೋವು ತೋಡಿಕೊಂಡರು.

ಇದೆಲ್ಲವನ್ನೂ ನೋಡಿದಾಗ ಲವ್ ಜಿಹಾದ್ ದುರುದ್ದೇಶ ಇಟ್ಟುಕೊಂಡಿದ್ದ ಅನಿಸುತ್ತದೆ. ಬೇರೆ ಹೆಣ್ಣುಗಳ ಜೊತೆ ಚೆಲ್ಲಾಟವಾಡುವ ಇಂಥವನಿಗೆ ಕಠಿಣ ಶಿಕ್ಷೆಯಾಗಬೇಕು. ಆತನನ್ನು ಜೈಲಿನಿಂದ ಬಿಟ್ಟರೆ ನನಗೆ, ನನ್ನ ಮಗ ಮತ್ತು ತಾಯಿಗೆ ತೊಂದರೆ ಇದೆ. ಹೀಗಾಗಿ ಅವನನ್ನು ಜೈಲಿನಿಂದ ಹೊರಗೆ ಬಿಡದೆ, ಗಲ್ಲಿಗೇರಿಸಬೇಕೆಂದು ಅಪೂರ್ವ ಕಣ್ಣೀರು ಒತ್ತಾಯಿಸಿದ್ದಾರೆ.

Related posts

ಮಾಜಿ ಶಾಸಕ ರಾಕೃಷ್ಣ ದೊಡ್ಡಮನಿಗೆ ಟಿಕೆಟ್ ಕೈತಪ್ಪುವ ಆತಂಕ..

satyadarshana

ಗಜೇಂದ್ರಗಡ ಜೆಡಿಎಸ್ ಕಚೇರಿಯಲ್ಲಿ ಎಚ್.ಡಿ.ದೇವೇಗೌಡರ ಜನ್ಮದಿನ ಆಚರಣೆ

satyadarshana

ಸಾರ್ವಜನಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ.

satyadarshana

Leave a Comment