Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿ

ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ನಡೆದ ʼವಿರಾಟ್-2026ʼ ಕಾರ್ಯಕ್ರಮದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳಿಗೆ ಚಾಲನೆ

ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಹಂಬಲ ಅವಶ್ಯಕ

 

 

ವಿದ್ಯೆಯ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬಹುಮುಖ್ಯ

 

 

ಗಜೇಂದ್ರಗಡ: ವಿದ್ಯಾರ್ಥಿಗಳು ಬದುಕಿನಲ್ಲಿ ಸಾಧನೆಯ ಹಂಬಲ ಹೊಂದಿರಬೇಕು. ಜತೆಗೆ ನಿರಂತರವಾಗಿ ಅಧ್ಯಯನ ಶೀಲತೆ ಅಳವಡಿಸಿಕೊಂಡಾಗ ಉನ್ನತ ಹುದ್ದೆಗಳನ್ನು ಪಡೆಯಬಹುದು ಎಂದು ಅನ್ನದಾನೇಶ್ವರ ಪಿಯು ಕಾಲೇಜಿನ ಚೇರಮನ್ನರಾದ ವೀರಯ್ಯ ವಿ. ವಸ್ತ್ರದ ಹೇಳಿದರು.

ಗಜೇಂದ್ರಗಡ ನಗರದ ಪುರ್ತಗೇರಿ ಕ್ರಾಸ್‌ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ʼವಿರಾಟ್-2026ʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಒಂದು ನಿರ್ಧಾರ ಕೈಗೊಂಡಾಗ ಅದನ್ನು ಪೂರ್ಣಗೊಳಿಸದೇ ಹಿಂದೆ ಸರಿಯಬಾರದು. ಅದಕ್ಕೆ ಬೇಕಾದ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕು. ಪಿಯುಸಿಯಲ್ಲಿ ಪರೀಕ್ಷೆಗೆ ತಯಾರಿ ನಡೆಸುವಾಗ ಗುರುಗಳ ಪಾಠ ಆಲಿಸಿ ಅರ್ಥೈಸಿಕೊಂಡು ಸಮರ್ಥವಾಗಿ ಎದುರಿಸಬೇಕು ಎಂದರು.

ಉಪನ್ಯಾಸ ನೀಡಿದ ಗಜೇಂದ್ರಗಡದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಸವಂತಪ್ಪ ಹೊಸಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಳ್ಳುವ ಸಂಕಲ್ಪ ಮಾಡಬೇಕು. ಮಾನಸಿಕ ಸಾಮರ್ಥ್ಯ ಉತ್ತಮವಾಗಿದ್ದು ಪರಿಶ್ರಮ ವಹಿಸಿದರೆ ಏನನ್ನಾದರೂ ಸಾಧಿಸಬಹುದು ಎಂದರು. ಪ್ರತಿಯೊಬ್ಬರು ಮಾಡುವ ಕೆಲಸದಲ್ಲಿ ಶ್ರದ್ಧೆ , ಜಾವಾಬ್ದಾರಿ, ಪ್ರಾಮಾಣಿಕತೆ ಇರಬೇಕು. ಇದಕ್ಕೆ ಇರುವ ಮೂಲ ಗುಣವೆಂದರೆ ದೊಡ್ಡಗುರಿ ಇಟ್ಟುಕೊಳ್ಳಬೇಕು. ಶರೀರಕ್ಕೆ ಶಕ್ತಿ ಬೇಕಾದರೆ, ಮನಸ್ಸು ಹೇಳಿದ್ದನ್ನು ದೇಹ ಮಾಡಿದರೆ ಮಾತ್ರ ಸಾಮಾನ್ಯರು ಅಸಾಮಾನ್ಯ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನರೇಗಲ್‌ನ ಅನ್ನದಾನೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯ ಎಸ್.‌ ಜಿ. ಕೇಶಣ್ಣವರ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಸಂಕಲ್ಪ ಹೊಂದಿರುವುದು ಅತ್ಯಗತ್ಯ. ಇದು ವಿದ್ಯಾರ್ಥಿಗಳಲ್ಲಿ ಸ್ಪಷ್ಟ ಗುರಿಯನ್ನು, ಆತ್ಮವಿಶ್ವಾಸವನ್ನು ಮತ್ತು ಕಠಿಣ ಪರಿಶ್ರಮ ಮಾಡುವ ಛಲವನ್ನು ಬೆಳೆಸುತ್ತದೆ. ಸಣ್ಣ ಕನಸುಗಳ ಬದಲು ದೊಡ್ಡ ಗುರಿಗಳನ್ನು ಇಟ್ಟುಕೊಂಡಾಗ ಮಾತ್ರ, ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸಲು ಸಾಧ್ಯವಾಗುತ್ತದೆ ಎಂದರು.

ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಶೈಕ್ಷಣಿಕ ಸಲಹೆಗಾರ ಬಿ. ಎಸ್. ಗೌಡರ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ನಡೆಸಲು ಕೇವಲ ಅಂಕಗಳಷ್ಟೆ ಸಾಲದು ಅದರೊಂದಿಗೆ ಉತ್ತಮ ಸಂಸ್ಕಾರಗಳಿಂದ ಕೂಡಿದ ಆದರ್ಶ ವ್ಯಕ್ತಿತ್ವ ಕೂಡ ಅಗತ್ಯ ಆದ್ದರಿಂದ ಜ್ಞಾನ ಜತೆ ಸಂಸ್ಕಾರ, ಸಂಸ್ಕೃತಿ ಮರೆಯಬಾರದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ಅನ್ನದಾನೇಶ್ವರ ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್‌ ಗಾರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿ ಕಾಲೇಜುಗಳ ಪ್ರಾಚಾರ್ಯರಾದ ಬಸವಂತಪ್ಪ ಹೊಸಳ್ಳಿ ಮತ್ತು ಎಸ್.‌ ಜಿ. ಕೇಶಣ್ಣವರ ಹಾಗೂ ದ್ವಿತೀಯ ಪಿಯು ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಶೇ 100 ರಷ್ಟು ಫಲಿತಾಂಶ ದಾಖಲಿಸಿದ ಉಪನ್ಯಾಸಕ ಚಂದ್ರು ಎಂ. ರಾಥೋಡ್‌ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ಗಜೇಂದ್ರಗಡ ಅನ್ನದಾನೇಶ್ವರ ಪಿಯು ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಮುದಕಪ್ಪ ತೊಂಡಿಹಾಳ, ಶೈಕ್ಷಣಿಕ ಮೇಲ್ವಿಚಾರಕ ಶಿವಾನಂದ ಮಠದ, ಗಜೇಂದ್ರಗಡದ ಕುಮಾರೇಶ್ವರ ವಾಣಿಜ್ಯ ಪದವಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಎಂ. ಪಿ. ಪಾಟೀಲ, ನರೇಗಲ್ ಅನ್ನದಾನೇಶ್ವರ ಪಿಯು ಕಾಲೇಜಿನ ಚೇರ್ಮನ್ ಎಂ. ಜಿ. ಸೋಮನಕಟ್ಟಿ, ಗಜೇಂದ್ರಗಡದ ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚೇರ್ಮನ್ ಪಿ. ಎನ್. ಚವಡಿ ಇದ್ದರು.

ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಗಣ್ಯರು ಚಾಲನೆ ನೀಡಿದರು

ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಸವಂತಪ್ಪ ಹೊಸಳ್ಳಿ ಉಪನ್ಯಾಸ ನೀಡಿದರು

ಗಜೇಂದ್ರಗಡ ನಗರದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಬಸವಂತಪ್ಪ ಹೊಸಳ್ಳಿ ಅವರನ್ನು ಸನ್ಮಾನಿಸಲಾಯಿತು

Related posts

ಸಮರ್ಪಕ ಕುಡಿವ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ನಿರ್ದೇಶನ

satyadarshana

ಕಲಬುರಗಿ: ಮೇಯರ್​ ಪಟ್ಟಕ್ಕಾಗಿ ಜೆಡಿಎಸ್​ನದ್ದು ಕಾದು ನೋಡುವ ತಂತ್ರ

satyadarshana

ಅನಾರೋಗ್ಯದಿಂದ ಕರ್ತವ್ಯನಿರತ ಬಿಎಸ್ಎಫ್ ಯೋಧ ನಿಧನ.

satyadarshana

Leave a Comment