Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಬಳೂಟಗಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಕಾರ್ಯಕ್ರಮ.

ಯಲಬುರ್ಗಾ: ತಾಲ್ಲೂಕಿನ ಬಳೂಟಗಿ ಗ್ರಾಮದಲ್ಲಿ ಆರ್ಥಿಕ ಸಾಕ್ಷರತೆ ಮತ್ತು ಡಿಜಿಟಲ್ ಬ್ಯಾಂಕಿಂಗ್ ಜಾಗೃತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಯಲಬುರ್ಗಾ ಶಾಖೆಯ ವ್ಯವಸ್ಥಾಪಕ ಬಿ.ಜಿ.ವಡಗೇರಿ ಮಾತನಾಡಿ,’ಪ್ರತಿಯೊಂದು ವ್ಯವಹಾರ ಬ್ಯಾಂಕ್‌ ಮೂಲಕವೇ ನಡೆಯುತ್ತಿದೆ

ಅಲ್ಲದೇ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯಿಂದಾಗಿ ಪ್ರತಿಯೊಂದು ಸೇವೆಯು ನಮ್ಮ ಬೆರಳ ತುದಿಯಲ್ಲಿ ನಡೆಯುತ್ತಿವೆ. ಇಂಥ ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ನಿರೀಕ್ಷೆ ಮೀರಿ ಪ್ರಗತಿ ಕಂಡಿದೆ. ಇದರಿಂದ ಸಾಕಷ್ಟು ಗ್ರಾಹಕರಿಗೆ ತ್ವರಿತವಾಗಿ ಸೇವೆ ಲಭ್ಯವಾಗುತ್ತಿದೆ. ಅಲ್ಲದೇ ಅನಗತ್ಯ ತೊಂದರೆಗಳಿಗೆ ಅವಕಾಶ ಇಲ್ಲದಾಗಿದೆ. ಆದರೆ ವ್ಯವಹರಿಸುವಾಗಿ ಹೆಚ್ಚಿನ ಜಾಗೃತಿ ವಹಿಸಿರುವುದು ಮುಖ್ಯವಾಗಿರುತ್ತದೆ ಎಂದರು. ಆರ್ಥಿಕ ಸಾಕ್ಷರತೆಯ ಸಮಾಲೋಚಕ ಬಿ.ಪಂಪನಗೌಡ ಮಾತನಾಡಿದರು.

ಕೊಪ್ಪಳದ ಎಸ್‍ಬಿಐ ಬ್ಯಾಂಕ್‌ನ ವ್ಯವಸ್ಥಾಪಕ ಅವ್ಯಪ್ಪ ಮಾಲಗಿತ್ತಿ, ಸಹಾಯಕ ವ್ಯವಸ್ಥಾಪಕ ಶಿವರಾಜ ಹಾದಿಮನಿ, ದೊಡ್ಡಬಸಪ್ಪ ಸೇರಿ ಅನೇಕರು ಇದ್ದರು.

Related posts

ಭವಿಷ್ಯಕ್ಕಾಗಿ ಪರಿಸರ ಕಾಳಜಿ ಮುಖ್ಯ’….. ವನಸಿರಿ ಅಮರೇಗೌಡ ಮಲ್ಲಾಪುರ

satyadarshana

ಉದ್ಯಮಶೀಲತಾಭಿವೃದ್ಧಿ ಪ್ರೇರಣಾ ತರಬೇತಿ ಕಾರ್ಯಕ್ರಮ ಉದ್ಘಾಟನೆ » ಪ್ರಶಾಂತ ವರಗಪ್ಪನವರ

satyadarshana

ಬಕ್ರಿದ್ ಸೌಹಾರ್ದಯುತವಾಗಿ ಆಚರಣೆಯಾಗಲಿ: ಡಾ.ಸುರೇಶ ಬಿ ಇಟ್ನಾಳ ಮನವಿ

satyadarshana

Leave a Comment