Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿಸಿನಿಮಾ

ಕೋಟಿಗೊಬ್ಬ-3 ಬಿಡುಗಡೆ ವಿಳಂಬಕ್ಕೆ ಇದೇನಾ ಕಾರಣ: ಥಿಯೇಟರ್ ಗಳಲ್ಲಿ ಅಭಿಮಾನಿಗಳ ಆಕ್ರೋಶ, ಇಂದು ಅಕ್ಟೋಬರ್ 15 ಚಿತ್ರ ಬಿಡುಗಡೆ

ಸುದ್ದಿಜಾ    ಸತ್ಯ-ದರ್ಶನ

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಚಿತ್ರದ ರಿಲೀಸ್ ತಡವಾಗಿದ್ದು, ಕಾರಣಾಂತರಗಳಿಂದ ಇಂದು ತೆರೆಕಾಣಬೇಕಿದ್ದ ಚಿತ್ರ ಇನ್ನೂ ತೆರೆಕಂಡಿಲ್ಲ.

ಕೋವಿಡ್ ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಪ್ರೇಕ್ಷಕರ ಸಾಮರ್ಥ್ಯದೊಂದಿಗೆ ಚಿತ್ರಮಂದಿರೆ ತೆರೆಯಲು ಅನುಮತಿ ದೊರೆತಿದ್ದು, ಇದೇ ಖುಷಿಯಲ್ಲಿ ತಮ್ಮ ನೆಚ್ಚಿನ ನಟ ಚಿತ್ರ ನೋಡಲು ಬಂದಿದ್ದ ಸುದೀಪ್ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದ್ದು. ಚಿತ್ರಮಂದಿರಗಳಲ್ಲಿ ಇನ್ನೂ ಚಿತ್ರ ತೆರೆಕಂಡಿಲ್ಲ. ಅಲ್ಲದೆ ಇಂದು ಚಿತ್ರ ತೆರೆಕಾಣುವುದೇ ಅನುಮಾನ ಎಂಬ ಮಾತುಗಳೂ ಕೇಳಿಬರುತ್ತಿದೆ.

ವಿಳಂಬಕ್ಕೆ ಕಾರಣವೇನು?

ಈ ಹಿಂದೆಯೇ ಕೋಟಿಗೊಬ್ಬ-3 ಚಿತ್ರದ ರಿಲೀಸ್ ಡೇಟ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಆದರೆ ಈಗ ಚಿತ್ರದ ನೆಗೆಟಿವ್ ರೈಟ್ಸ್ ಬಗ್ಗೆ ಚಕಾರವೆತ್ತಿದ್ದು, ಈ ಸಂಬಂಧ ನಿರ್ಮಾಪಕ ಸೂರಪ್ಪ ಬಾಬು ಅವರು ಹೈದರಾಬಾದ್ ನಲ್ಲಿ ಮೊಕ್ಕಾಂ ಹೂಡಿ ನಿರಂತರ ಚರ್ಚೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದರೇ ಚಿತ್ರತಂಡ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಚಿತ್ರ ಬಿಡುಗಡೆಗೆ ಸಿದ್ದವಾಗಿತ್ತೇ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಈಗಾಗಲೇ ಚಿತ್ರಕ್ಕೆ ಸಂಬಂಧಿಸಿದ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕಿದ್ದ ಚಿತ್ರತಂಡ ಅಂತಿಮ ಹಂತದಲ್ಲಿ ಈ ಕೆಲಸಕ್ಕೆ ಮುಂದಾಗಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ

ಥಿಯೇಟರ್ ಗಳ ಮುಂದೆ ಅಭಿಮಾನಿಗಳ ದಂಡ

ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್‍ಗಳಲ್ಲಿ ಚಿತ್ರ ಬಿಡುಗಡೆಾಗುತ್ತದೆ ಎಂದು ಸಾವಿರಾರು ಅಭಿಮಾನಿಗಳು ಥಿಯೇಟರ್ ಗಳತ್ತ ಬಂದಿದ್ದರು. ಬೆಳಗ್ಗೆ 7 ಗಂಟೆಯ ಪ್ರದರ್ಶನಕ್ಕೆ ನಿನ್ನೆಯೇ ಟಿಕೆಟ್‍ಗಳು ಸೋಲ್ಡ್‍ಔಟ್ ಆಗಿದ್ದವು. ಹಾಗಾಗಿ ಅಭಿಮಾನಿಗಳು ಮುಂಜಾನೆಯೇ ಥಿಯೇಟರ್ ಮುಂದೆ ಜಮಾಯಿಸಿದ್ದರು. ತಾಂತ್ರಿಕ ಕಾರಣಗಳಿಂದಾಗಿ ಚಿತ್ರ ಬಿಡುಗಡೆ ಸಾಧ್ಯವಾಗಲಿಲ್ಲ. ಬಳಿಕ 10 ಗಂಟೆಗೆ ಪ್ರದರ್ಶನ ಏರ್ಪಡಿಸುವುದಾಗಿ ಚಿತ್ರ ತಂಡ ಸಮಾಜಾಯಿಷಿ ಮಾಡಿತು. ಆದರೆ ಬಹಳ ನಿರೀಕ್ಷೆಯಿಂದ ಥಿಯೇಟರ್‍ಗೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದ್ದು, ಕೆಲವು ಕಡೆ ಪ್ರತಿಭಟನೆ ನಡೆಸಿದರು

Related posts

ಲಕ್ಷ್ಮೇಶ್ವರದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ

satyadarshana

ಅಹೋರಾತ್ರಿ ಧರಣಿಗೆ ಎಐಸಿಸಿ ಮೆಚ್ಚುಗೆ… ಡಿಕೆಶಿ ಜಾಣತನದ ಹೆಜ್ಜೆಗೆ ಕಾಂಗ್ರೆಸ್ ಹೈಕಮಾಂಡ್ ಶಹಬ್ಬಾಸ್…

satyadarshana

ಮರಕುಂಬಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣ: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

satyadarshana

Leave a Comment