Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಅಹೋರಾತ್ರಿ ಧರಣಿಗೆ ಎಐಸಿಸಿ ಮೆಚ್ಚುಗೆ… ಡಿಕೆಶಿ ಜಾಣತನದ ಹೆಜ್ಜೆಗೆ ಕಾಂಗ್ರೆಸ್ ಹೈಕಮಾಂಡ್ ಶಹಬ್ಬಾಸ್…

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಶಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಾಣತನದ ನಡೆದ ಎಐಸಿಸಿ ಶಹಬ್ಬಾಸ್ ಎಂದಿದೆ.

ವಿಧಾನ ಮಂಡಲದ ಅಧಿವೇಶನ ಕಾಂಗ್ರೆಸ್ ನ ಅಹೋರಾತ್ರಿ ಧರಣಿಯಿಂದಾಗಿ ರಾಷ್ಟ್ರದ ಗಮನ ಸೆಳೆದಿದೆ. ಜೊತೆಗೆ ಹಿಜಾಬ್ ವಿಚಾರದ ನಡುವೆಯೂ ಈಶ್ವರಪ್ಪ ವಿಚಾರದ ಕುರಿತು ಗಮನ ಸೆಳೆದಿದ್ದಕ್ಕೆ ರಾಜ್ಯ ಕಾಂಗ್ರೆಸ್ ಗೆ ಎಐಸಿಸಿ ಎ ಗ್ರೇಡ್ ನೀಡಿದೆ.

ಡಿಕೆ ಶಿವಕುಮಾರ್ ಅವರ ಜಾಣತನದ ನಡೆಯಿಂದಾಗಿ ಈಶ್ವರಪ್ಪ ಅವರು ರಾಷ್ಟ್ರಧ್ವಜದ ಕುರಿತು ನೀಡಿದ ಹೇಳಿಕೆಯನ್ನು ಹೈಲೈಟ್ ಮಾಡಲಾಗಿದ್ದು, ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಲಾಗುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡದಿದ್ದರೂ ಪರವಾಗಿಲ್ಲ, ಆದರೆ ಈಶ್ವರಪ್ಪ ವಿಚಾರವನ್ನು ಸಡಿಲಿಸಬೇಡಿ ಸದನದ ಒಳಗೆ ಮತ್ತು ಹೊರಗೆ ಈ ವಿಚಾರವನ್ನು ಪ್ರಸ್ತಾಪಿಸಿ ಎಂದು ಎಐಸಿಸಿ ಸೂಚನೆ ನೀಡಿದೆ.

Related posts

ರಾಜಕಾರಣಿಗಳಿಗೆ ಅಧಿಕಾರ ಮುಖ್ಯವಲ್ಲ, ಜನರ ಸೇವೆಗೆ ಆದ್ಯತೆ ನೀಡಿ ಸಚಿವ ಸಿ.‌ಸಿ.‌ಪಾಟೀಲ   

satyadarshana

ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಲು ಕ್ರಮವಹಿಸಿ : ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ

satyadarshana

ರಾಜ್ಯದ ಎಲ್ಲ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ಸೇನಾನಿ ವೀರ ಯೋಧ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಹಾಕಲು ಆದೇಶ

satyadarshana

Leave a Comment