Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಟ್ರೆಂಡ್ಬಿಸಿ ಬಿಸಿ ಸುದ್ದಿರಾಜ್ಯ

ಪ್ರತಿದಿನದ ಜೀವನದಲ್ಲಿ ರಸಾಯನದ ಅಗತ್ಯತೆ

 

ಯಲಬುರ್ಗಾ :ರಸಾಯನ ಆಯುರ್ವೇದದ ಮೂಲಭೂತ ಚಿಕಿತ್ಸಾ ವಿಧಾನವಾಗಿದ್ಧು, ರಾಸಾಯನ ಔಷಧಿಗಳು ಮತ್ತು ಯೋಗಗಳು ದೀರ್ಘಾಯುಷ್ಯ, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ, ಸ್ಮರಣಾಶಕ್ತಿ- ಬುದ್ಧಿಶಕ್ತಿ ಯನ್ನು ನೀಡಿ, ವರ್ಣ, ಕಾಂತಿ ಯನ್ನು ಹೆಚ್ಚಿಸಿ, ದೇಹ ಹಾಗೂ ಇಂದ್ರಿಯಗಳ ಶಕ್ತಿವರ್ಧನೆ,ಮತ್ತು ತೇಜಸ್ಸನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿವೆ. ಇವು ವೃದ್ಧರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರಿಗೂ ಉಪಯುಕ್ತವಾಗಿವೆ. ಹಾಗೂ ಸಮಗ್ರ ಆರೋಗ್ಯವನ್ನು ಉತ್ತೇಜಿಸುವುದನ್ನು ಉದ್ದೇಶವಾಗಿಟ್ಟುಕೊಂಡಿದೆ. ಇದು ದೇಹದ ಸೂಕ್ಷ್ಮಕೋಶ ಮಟ್ಟದಲ್ಲಿ ಧಾತುಗಳ ಪೋಷಣೆಯನ್ನು ಉತ್ತಮಗೊಳಿಸಿ, ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ಕಾರ್ಯನಿರ್ವಹಿಸುತ್ತದೆ.

ರಸಾಯನ’ ಎಂಬ ಪದವು ಎರಡು ಪದಗಳಿಂದ ನಿರ್ಮಿತವಾಗಿದೆ — ‘ರಸ’ (ಆಹಾರದ ಸಾರಭೂತ ಅಂಶ, ಅಂದರೆ ಆಹಾರ ರಸ) ಮತ್ತು ‘ಆಯನ’ (ಪಡೆಯುವುದು ಅಥವಾ ಸಾಧನೆ ಎಂಬ ಅರ್ಥ). ಆಚಾರ್ಯ ಚರಕರು ರಸಾಯನವನ್ನು ರಸಾದಿ ಧಾತುಗಳ ಅತ್ಯುತ್ತಮ ಗುಣಗಳನ್ನು ಪಡೆಯುವ ಸಾಧನವೆಂದು ವಿವರಿಸಿದ್ದಾರೆ. ಆಯುರ್ವೇದದ ಪ್ರಕಾರ, ‘ರಸಧಾತು’ವಿನ ಗುಣಮಟ್ಟವು ದೇಹದ ಇತರ ಧಾತುಗಳ (ಕೋಶಗಳು) ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ರಸಾಯನ ಔಷಧಿಗಳ ವಿವಿಧ ಅಧ್ಯಯನಗಳು ನಡೆದಿದ್ದು ಈ ದ್ರವ್ಯಗಳಲ್ಲಿ ಈ ಕೆಳಕಂಡ ಅನೇಕ ಪ್ರಯೋಜನಗಳು ಸಾಬಿತ್ತಾಗಿದೆ. ರಾಸಾಯನ ದ್ರವ್ಯಗಳು –

• ರೋಗನಿರೋಧಕ ಶಕ್ತಿಯನ್ನು ಸಮತೋಲನಗೊಳಿಸುತ್ತವೆ. (Immunomodulator)

• ದೇಹವನ್ನು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಮಾಡುತ್ತವೆ.(Adaptogenic)

• ಆಕ್ಸಿಡೇಶನ್ ಹಾನಿಯನ್ನು ತಡೆಯುತ್ತವೆ (Antioxidant)

• ಸ್ಮರಣೆ ಮತ್ತು ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತವೆ (Nootropic)

• ಒತ್ತಡವನ್ನು ನೀವಾರಿಸುತ್ತವೆ.(Antistress)

ಆಯುರ್ವೇದದಲ್ಲಿ ವಯಸ್ಸಿಗನುಸಾರ, ದೇಹ ಪ್ರಕೃತಿಗನುಸಾರ, ದೇಹದಲ್ಲಿರುವ ಧಾತುಗಳನುಸಾರ, ವ್ಯಾಧಿ ಅನುಸಾರ, ಮತ್ತು ಅವರು ಯಾವ ತರಹದ ಲಾಭಗಳನ್ನು ಪಡೆಕೊಳ್ಳಬೇಕು ಅದರನುಸಾರ ರಾಸಾಯನ ಪ್ರಯೋಗಗಳನ್ನು ಹೇಳಿದ್ದಾರೆ.

ರಸಾಯನವನ್ನು ಯಾರು ಬಳಸಬಹುದು?

• ರಸಾಯನ ಸೇವನೆಯನ್ನು ವೃದ್ಧಾಪ್ಯ ಪ್ರಾರಂಭವಾಗುವ ಮೊದಲು ಆರಂಭಿಸಬೇಕು. ಆದರೆ ಯಾವುದೇ ವಯಸ್ಸಿನಲ್ಲಿಯೂ ಇದನ್ನು ಪ್ರಾರಂಭಿಸಬಹುದು.

• ಹೆಚ್ಚಿನ ಪ್ರಯೋಜನ ಪಡೆಯಲು ದೇಹದ ಶೋಧನೆ (Bio purification/ಶರೀರ ಶುದ್ಧೀಕರಣ) ಮಾಡಿರುವುದು ಉತ್ತಮ.

• ನಿರ್ದಿಷ್ಟ ಲಾಭಕ್ಕಾಗಿ ಆಯ್ಕೆ ಮಾಡಿದ ರಸಾಯನಗಳನ್ನು ಬಳಸಬಹುದು.

• ಅತ್ಯುತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪಡೆಯಲು ಬಯಸುವವರು ರಸಾಯನವನ್ನು ಸೇವಿಸಬೇಕು

ಈ ಕೆಳಗೆ ಕೆಲವೊಂದು ಉದಾಹರಣೆ ಯೊಂದಿಗೆ ಆಯುರ್ವೇದದ ದ್ರವ್ಯ ಯಾವ ರಸಾಯನವಾಗಿ ಕೆಲಸ ಮಾಡುತ್ತೆ ಎಂದು ವಿವರಿಸಲಾಗಿದೆ.

*ಮೇದ್ಯ ರಾಸಾಯಣಗಳು – ಯಷ್ಟಿಮಧು, ಬ್ರಾಹ್ಮೀ, ಶಂಕಪುಶ್ಪಿ.

*ಕಣ್ಣು ದ್ರಿಷ್ಟಿಗೆ ಬಲ ಕೊಡುವ ರಾಸಾಯಣಗಳು – ತ್ರಿಫಲ

*ಸೌಂದರ್ಯವನ್ನು ಹೆಚ್ಚಿಸಿ ವಯಸ್ಥಾಪನ ಮಾಡಲು – ಆಮ್ಲಕಿ (ನೆಲ್ಲಿಕಾಯಿ )

*ದೇಹದ ಬೆಳವಣಿಗೆಗೆ – ಅಶ್ವಗಂಧ, ಶತವಾರಿ, ಬಲ.

ಪ್ರಕೃತಿಗನುಸಾರ – ವಾತ ಪ್ರಕೃತಿಗೆ – ಬಲಾ, ನಾಗಬಲ,ಘೃತ., ಪಿತ್ತ ಪ್ರಕೃತಿಗೆ – ಆಮಲಕಿ, ಶತಾವರಿ., ಕಫ ಪ್ರಕೃತಿಗೆ – ಹಿಪ್ಪಲಿ, ವಚ.

ರಸಾಯನದ ಅವಶ್ಯಕತೆ: ದೇಹದಲ್ಲಿನ ಕೋಶಗಳ (Cells) ಮರಣವು ವಿವಿಧ ಕಾರಣಗಳಿಂದ ಸಂಭವಿಸಬಹುದು. ಇದರಿಂದ ದೈಹಿಕ, ಚಯಾಪಚಯ (Metabolic) ಹಾಗೂ ಮಾನಸಿಕ ಅಸಮತೋಲನಗಳು ಉಂಟಾಗಿ ಅನೇಕ ರೋಗಗಳಿಗೆ ಮೂಲವಾಗುತ್ತದೆ. ರಸಾಯನ ಚಿಕಿತ್ಸೆಯ ಮೂಲಕ ಈ ಹಾನಿಯನ್ನು ತಡೆಯಲು ಅಥವಾ ವಿಳಂಬಗೊಳಿಸಲು ಸಾಧ್ಯವಾಗುತ್ತದೆ.

ರಸಾಯನವು ಆರೋಗ್ಯದ ಸಂರಕ್ಷಣೆ ಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ರಸಾಯನದ ಸಮರ್ಪಕ ಉಪಯೋಗದಿಂದ ಅನೇಕ ರೋಗಗಳ ವ್ಯಾಪ್ತಿಯನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ಇದರ ಮೂಲಕ ಆರೋಗ್ಯ ಸೇವೆಯ ಮೇಲಿನ ಭಾರವೂ ಕಡಿಮೆಯಾಗುತ್ತದೆ. ಇಂದಿನ ಕಾಲದಲ್ಲಿ ರೋಗಗಳ ಚಿಕಿತ್ಸೆಯಿಗಿಂತ ಅವುಗಳನ್ನು ತಡೆಗಟ್ಟುವ (Preventive) ಅಂಶದ ಮೇಲೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.

ಡಾ. ಶಿಲ್ಪಾ. ಮಹದೇವಪ್ಪ. ಬಾಚಲಾಪುರ್.   ತಜ್ಞ ವೈದ್ಯರು,   ಸರ್ಕಾರಿ ಆಯುರ್ವೇದ ಆಸ್ಪತ್ರೆ. ಯಲಬುರ್ಗಾ

 

Related posts

ಕೆರೆ ತುಂಬುವ ಯೋಜನೆಗೂ ಹಾಲಪ್ಪ ಆಚಾರ್ ಗೂ ಸಂಬಂಧ ಇಲ್ಲ: ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ 

satyadarshana

ಕೆರೆ ತುಂಬಿಸುವ ಯೋಜನೆ: ವಿವಿಧ ಗ್ರಾಮಸ್ಥರೊಂದಿಗೆ ಸಭೆ, ಚರ್ಚೆ

satyadarshana

ಪ್ರತಿ ವರ್ಷ ಆಯುಧ ಪೂಜೆಯ ದಿನ ದೇವರಗುಡ್ಡದ ಕಾರ್ಣಿಕೋತ್ಸವ:| ಯುವಕನಿಗೆ ಸಿಎಂ ಪಟ್ಟ, ಬೆಳೆ ಉತ್ತಮ. ಗೊರವಪ್ಪನ ಭವಿಷ್ಯವಾಣಿ

satyadarshana

Leave a Comment