Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ರಾಜೂರ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆ:ಹದಗೆಟ್ಟ ಚರಂಡಿ ವ್ಯವಸ್ಥೆ..

ಗಜೇಂದ್ರಗಡ .ಸಮೀಪದ ರಾಜೂರ ಗ್ರಾಮದ ಹಲವು ಬಡಾವಣೆಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಕೊಳಚೆ ನೀರು ರಸ್ತೆಯಲ್ಲಿಯೇ ನಿಲ್ಲುತ್ತಿದ್ದು, ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ಗ್ರಾಮದ ಖಾಲಿ ಜಾಗಗಳಲ್ಲಿ ಕಸ, ತಿಪ್ಪೆ ಹಾಕುತ್ತಿರುವುದರಿಂದ ಸ್ವಚ್ಛತೆ ಇಲ್ಲದಂತಾಗಿದೆ.ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಹಿಂದಿರುವ ಸುಸಜ್ಜಿತ ಮುಖ್ಯ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ರಾಘಪ್ಪ ಸುಂಕದ ಅವರ ಮನೆ ಮುಂದೆ ಚರಂಡಿ ನೀರು ನಿಲ್ಲುತ್ತಿದ್ದು, ಅಲ್ಲಿನ ನಿವಾಸಿಗಳು ಓಡಾಡಲು ಪರದಾಡುವಂತಾಗಿದೆ.
ಗ್ರಾಮ ಪಂಚಾಯಿತಿಯ ಕಸ ತುಂಬುವ ವಾಹನದ ಮೂಲಕ ಗ್ರಾಮದಲ್ಲಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಕಸ ವಿಲೇವಾರಿ ಘಟಕವಿಲ್ಲದ ಕಾರಣ ಗ್ರಾಮದ ಹೊರ ವಲಯದಲ್ಲಿ ಹಾಕಲಾಗುತ್ತಿದೆ. ಅಲ್ಲದೆ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹಲವು ವರ್ಷಗಳಿಂದ ಕೆಟ್ಟು ನಿಂತಿದ್ದು, ಗ್ರಾಮಸ್ಥರು ಖಾಸಗಿ ಘಟಕದಿಂದ ಶುದ್ಧ ಕುಡಿಯುವ ನೀರು ಅವಲಂಬಿಸಿದ್ದಾರೆ. ಕೆಲವರು ನಲ್ಲಿಯ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ.
ಗ್ರಾಮದ ಹೊರ ವಲಯದಲ್ಲಿರುವ ಖಾಲಿ ಜಾಗೆಯಲ್ಲಿ ತಿಪ್ಪೆಗಳನ್ನು ಹಾಕಲಾಗಿದ್ದು, ಜನರು ಕಸ ಇನ್ನಿತರ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಅಲ್ಲಿನ ನಿವಾಸಿಗಳು ದೂಳು, ದುರ್ವಾಸನೆಯಿಂದ ಬೇಸತ್ತಿದ್ದಾರೆ. ಗ್ರಾಮದ ಹೊರ ವಲಯದಲ್ಲಿ ರೈತರಿಗೆ ಅನುಕೂಲವಾಗಲೆಂದು ಹಲವು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ್ದ ಕಣ ನಿರುಪಯುಕ್ತವಾಗಿದ್ದು, ಸುತ್ತಲೂ ಮುಳ್ಳು ಗಿಡಗಳು ಬೆಳೆದು ನಿಂತಿವೆ.
ಗ್ರಾಮದಲ್ಲಿ ಮನೆ ಹಾಗೂ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವಾಗ ಕಚ್ಚಾ ಸಾಮಗ್ರಿಗಳನ್ನು ರಸ್ತೆ ಮೇಲೆ ಹಾಕುತ್ತಿದ್ದಾರೆ. ಕಾಮಗಾರಿ ಮುಗಿದರೂ ಕಲ್ಲು, ಮಣ್ಣು ಇನ್ನಿತರ ತ್ಯಾಜ್ಯ ಸ್ವಚ್ಛಗೊಳಿಸದ ಕಾರಣ ಗ್ರಾಮದ ಪ್ರಮುಖ ರಸ್ತೆಗಳು ಹಾಗೂ ಓಣಿಗಳಲ್ಲಿನ ಸಿಸಿ ರಸ್ತೆ ಮೇಲೆ ಮಣ್ಣಿನ ದಿಬ್ಬಗಳು ನಿರ್ಮಾಣವಾಗಿದ್ದು, ಸಾರ್ವಜನಿಕರಿಗೆ ಓಡಾಡಲು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. –ರಾಘವೇಂದ್ರ ಎನ್.‌ ಪುರೋಹಿತ ಎ ಇಇ ಪಂಚಾಯತ್‌ ರಾಜ್ ಎಂಜಿನಿಯರಿಂಗ್ ವಿಭಾಗರಾಜೂರ ಗ್ರಾಮದಲ್ಲಿ ಸಿಸಿ ರಸ್ತೆಗಳು ಹಾಗೂ ಚರಂಡಿ ನಿರ್ಮಾಣಕ್ಕೆ ಟೆಂಡರ್‌ ಆಗಿದೆ. ಈಗಾಗಲೇ ಕಾಮಗಾರಿ ಆರಂಭವಾಗಬೇಕಿತ್ತು.
ಈ ಕುರಿತು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು ಮಾರ್ಚ್‌ ಬಳಿಕ ಕಾಮಗಾರಿ ಆರಂಭವಾಗಲಿದೆ.ಎಸ್.ಎಸ್.ತೊಂಡಿಹಾಳ ಎಸ್.ಎಸ್.ತೊಂಡಿಹಾಳ ಪಿಡಿಒ ರಾಜೂರ ಗ್ರಾಮ ಪಂಚಾಯಿತಿಗ್ರಾಮದಲ್ಲಿ ಈಗಾಗಲೇ ನಮ್ಮ ಪಂಚಾಯಿತಿ ವಾಹನದಿಂದ ಕಸ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಗ್ರಾಮದ ಚರಂಡಿಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಹಪ್ಪಳದ ಅವರ ಹಿಟ್ಟಿನ ಗಿರಣಿಯಿಂದ ಸುಣ್ಣದ ಬಟ್ಟಿವರೆಗೆ ಹಾಗೂ ಭೀಮಾಂಭಿಕಾ ಬಡಾವಣೆಯಲ್ಲಿ ಭೀಮಾಂಭಿಕಾ ದೇವಸ್ಥಾನದಿಂದ ಮುಜಾವರ ಅವರ ಮನೆವರೆಗಿನ ಸಿಸಿ ರಸ್ತೆ ಸಂಪೂರ್ಣ ಹಾಳಾಗಿದೆ. ಸಿಸಿ ರಸ್ತೆ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್ಯ ಇಲಾಖೆಯಿಂದ ಸುಮಾರು ₹80 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ರಾಮಲಿಂಗೇಶ್ವರ ದೇವಸ್ಥಾನದಿಂದ ಬಾಲಕರ ವಸತಿ ಶಾಲೆವರೆಗಿನ ಮುಖ್ಯರಸ್ತೆ ಪಕ್ಕದ ಮುಖ್ಯ ಕಾಲುವೆವರೆಗೆ ಸಿಸಿ ಚರಂಡಿ ನಿರ್ಮಾಣಕ್ಕೆ ಟೆಂಡರ್‌ ಆಗಿದೆ. ಅಲ್ಲದೆ ಹಲವು ತಿಂಗಳ ಹಿಂದೆ ಶಾಸಕರು ಕಾಮಗಾರಿಗೆ ಭೂಮಿಪೂಜೆಯನ್ನೂ ಮಾಡಿದ್ದರು. ಆದರೆ ಕಾಮಗಾರಿ ಆರಂಭವಾಗಿಲ್ಲ.ನಿರ್ಮಾಣವಾಗದ ಸಿಸಿ ರಸ್ತೆಗಳು

Related posts

ಜ.17 ರಂದು ಕೊಪ್ಪಳದಲ್ಲಿ ಜನಪರ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ

satyadarshana

satyadarshana

ಸ್ಪಂದನಾ ಅಂತಿಮ ದರ್ಶನ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಗಣ್ಯರು.

satyadarshana

Leave a Comment