ಸತ್ಯದರ್ಶನ ಸುದ್ದಿ :ಉತ್ತಮ ಪ್ರಯತ್ನ ಯಾವತ್ತೂ ವ್ಯರ್ಥ ವಾಗುವುದಿಲ್ಲ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿದಾಗ ಪ್ರತಿಫಲವಾಗಿಯೇ ನಿಮ್ಮನ್ನು ಹುಡಿಕಿಕೊಂಡು ಬರುತ್ತದೆ. ಯಾವುದೇ ಸಮಾಜ ಕಾರ್ಯವನ್ನು ಮಾಡಲು ನಾವು ಎಂದೂ ಯಾವುದಕ್ಕೂ ಭಯ ಪಡಬಾರದು. ಭಯವು ನಮ್ಮನ್ನಾವರಿಸುವ ಪೂರ್ವದಲ್ಲಿಯೇ ಭಯಕ್ಕೆ ಭಯವನ್ನು ಮೂಡಿಸುವಂತಹ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.
ಅಂದಾಗಲೇ ನಾವು ಏನನ್ನಾದರೂ ಸಾಧಿಸಲು ಸಾಧ್ಯವೇಂದರಿತು, ಅಕ್ಷರ ಸಹ ರೂಡಿಸಿಕೊಂಡಿರುವ ಅಕ್ಷಯ ಬಿದರೂರವರ ತಂದೆಯ ಮಾರ್ಗದರ್ಶನದಂತೆಯೇ, ತಂದೆಯೊಂದಿಗೆ ಸಮಾಜದ ಕಾರ್ಯಗಳಲ್ಲಿ ತೊಡಗಿಸಿಕೊಂಡವರು. ಅಕ್ಷಯ, ಶ್ರೀಶೈಲಪ್ಪ ಮತ್ತು ಶ್ರೀಮತಿ ಮಹೇಶ್ವರಿ ಇವರ ಉದರದಲ್ಲಿ 1992 ರಲ್ಲಿ ಜನಿಸಿದ ಇವರು ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಕೆ.ಎಲ್. ಈ ಶಿಕ್ಷಣ ಸಂಸ್ಥೆಯಿಂದ ಬಿ.ಬಿ.ಎ. ಪದವಿಯನ್ನು ಪಡೆದು ನಂತರ ಸಮಾಜಸೇವೆಯಲ್ಲಿ ತೊಡಗಿಕೊಂಡ ಇವರು, ತಂದೆಯ ಒಡನಾಟದೊಂದಿಗೆ ರಾಜಕೀಯದಲ್ಲೂ ಕಾರ್ಯ ಮಾಡಲಾರಂಭಿಸಿದರು.
ರಾಜಕೀಯ ಧುರೀಣರಾದ ಶ್ರೀಶೈಲಪ್ಪ ಬಿದರೂರವರ ಅಕಾಲಿಕ ಮರಣದಿಂದಾಗಿ ಕುಟುಂಬಕ್ಕೆ ತುಂಬಲಾರದ ನಷ್ಟವಾದರೂ ಭಗವಂತ ಆ ಕಷ್ಟವನ್ನು ಸಹಿಸುವ ಶಕ್ತಿಯನ್ನು ನೀಡಿದ್ದರಿಂದ, ಆತ್ಮವಿಶ್ವಾಸದಿಂದ ಸಮಾಜದ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಂದೆಯ ಆದರ್ಶಗಳ ಆಗರಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಮಾನವರ ಜೀವನವು ಬಹುದೀರ್ಘವಾದುದಾಗಿದೆ. ಇಲ್ಲಿ ಅವಕಾಶಗಳು ವಿಪುಲವಾಗಿರುತ್ತವೆ. ಆ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. ವಿಶಾಲವಾದ ಮನೋಭಾವದಿಂದ ವಿಚಾರಮಾಡುತ್ತ ಬಾಳಬೇಕು. ಕ್ಷುದ್ರವಾದ ಭಾವನೆಗಳಿಂದ ಮನಸ್ಸನ್ನು ಸಂಕುಚಿತಗೊಳಿಸಿಕೊಂಡು ಸೇವೆಯಿಂದ ದೂರ ಉಳಿಯುವ ಇಂದಿನ ದಿನಮಾನಗಳಲ್ಲಿ ತಂದೆಯ ಆದರ್ಶರ್ಗಳನ್ನು ಪಾಲಿಸಿಕೊಂಡು, ಯಾರು ಏನೇ ಅನ್ನಲಿ ನಾನು ನನ್ನ ನಾಡಿನ ಜನರ ಸೇವೆ ಮಾಡಬೇಕೆಂದು ಈ ಭಾಗದ ಅನೇಕ ನಾಯಕರ ಸಹಚರನಾಗಿ ನಾಡಿನ, ರಾಷ್ಟ್ರೀಯ ನಾಯಕರ ಒಡನಾಡಿಯಾಗಿ ಬೆಳೆದಿರುವ ಶ್ರೀ ಅಕ್ಷಯ ಬಿದರೂರವರು ಎಂದರೆ ತಪ್ಪಾಗಲಾರದು. ಈ ಹಿಂದೆ ಇವರ ತಂದೆಯವರಾದ ಶ್ರೀಶೈಲಪ್ಪ ಬಿದರೂರವರನ್ನು ಕ್ಷೇತ್ರದಲ್ಲಿ ಗೆಲ್ಲಿಸಿದ ಈ ಕ್ಷೇತ್ರದ ಜನರ ಋಣವನ್ನು ತೀರಿಸುವ ಹೊಣೆ ನನ್ನ ಮೇಲಿದೆ. ಅವರ ಋಣವನ್ನು ತೀರಿಸಲು ಅಣಿಗೊಂಡಿದ್ದೇನೆ. ಅದಕ್ಕೆ ನಮ್ಮ ಭಾಗದ ರಾಜಕೀಯ ದುರೀಣರು ಸಾಮಾಜಿಕ ಚಿಂತಕರು, ಸಮಾಜ ಸೇವಕರು ನಿರಂತರ ಪ್ರೋತ್ಸಾಹ, ಪ್ರೇರಣೆ ನೀಡುತ್ತಿದ್ದಾರೆ.
ಕ್ಷೇತ್ರ ಅಭಿವೃದ್ಧಿ ಇತ್ತೀಚಿಗಂತೂ ಸಂಪೂರ್ಣವಾಗಿ ತಟಸ್ಥಗೊಂಡಿದೆ. ರಸ್ತೆ, ಚರಂಡಿ, ವ್ಯವಸ್ಥೆ ಹೇಳತೀರದು. ಕುಡಿಯುವ ನೀರಿಗೆ ನಿರಂತರ ಆಹಾಕಾರ ಎದ್ದಿದೆ. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸುವತ್ತ ನನ್ನ ಪ್ರಯತ್ನ, ಎನ್ನುವುದು ಬಿದುರೂರವ ಚಿಂತನೆಯಾಗಿದೆ.
ಬದುಕಿನೂದ್ದಕ್ಕೂ ಆಸ್ತಿ ಮಾಡದೆ, ನನ್ನ ತಂದೆ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳೊಂದಿಗೆ ಸೇವಾ ಮನೋಭಾವವನ್ನು ಹೊಂದಿ ಬದುಕನ್ನು ನಡೆಸುತ್ತಿದ್ದೇನೆ ಎಂಬ ಆತ್ಮ ವಿಶ್ವಾಸವೇ ಅಕ್ಷಯರವರನ್ನು ನೇತಾರರನ್ನಾಗಿ ನೇಮಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಈ ಬಾರಿ ಆರಂಭಗೊಳ್ಳುವ 2023ರಲ್ಲಿ ಜರಗುವ ಚುನಾವಣೆಗೆ ರೋಣ ಮತಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಎನ್ನುವುದು ಈ ಭಾಗದ ಜನರ ಅಭಿಪ್ರಾಯವಾಗಿದೆ. ಈ ವಿಚಾರ ಕುರಿತು ಶ್ರೀಯುತರು ಯಾವ ನಿರ್ಧಾರ ತೆಗೆದುಕೊಳ್ಳುವರು ಎಂಬುವುದು ಅವರ ನಿಲುವಿನಲ್ಲಿಯೇ ನಿರ್ಧಾರವಾಗುವುದನ್ನು ಸತ್ಯದರ್ಶನ ಪತ್ರಿಕೆ ಆಶಿಸುತ್ತದೆ.
ನಾಯಕನಾಗುವವನು ಸಮಾಜಮುಖಿ ಕಾರ್ಯಕ್ಕೆ ಸದಾಬದ್ಧನಾಗಿರಬೇಕು. ಜನರನೋವನ್ನು ತನ್ನ ನೋವೆಂದು ಭಾವಿಸಿ ಪರಿಹಾರಕ್ಕೆ ಅಣಿಗೊಳ್ಳಬೇಕು. ಯಾವ ಕೆಲಸವನ್ನು ಚಿಕ್ದದೆಂದು ಭಾವಿಸದೆ ಅಪೇಕ್ಷಿತವರ್ಗಕ್ಕೆ ಆಧರಣೀಯವಾಗಿ ಮಾಡಿಕೊಡುವ ಮನೋಭಾವದವನಾಗಿರಬೇಕು. ಇತ್ತೀಚಿಗೆ ನಮ್ಮ ನಾಡಜನತೆ ಕೇವಲ ಆಕರ್ಷಣೆಗೆ ಅಣಿಗೊಂಡಿದ್ದಾರೆ. ಅವರೆಲ್ಲರಲ್ಲಿಯೂ ನಮ್ಮ ನಾಡಿನ ಸಂಸ್ಕೃತಿ-ಪರಂಪರೆಯನ್ನು ಬೆಳೆಸುವ ಕಾರ್ಯವನ್ನು ಕೈಗೊಂಡು, ಕೆಲ ಸಂಘ-ಸಂಸ್ಥೆಯೊಂದಿಗೆ ಒಗ್ಗೂಡಿ ಕೆಲಸ ಮಾಡುತ್ತಿರುವ ಬಿದರೂರರವರು, ನಾಡ ಪ್ರೇಮಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ನಮ್ಮ ಕ್ಷೇತ್ರದಲ್ಲಿನ ಕೆರೆಗಳ ಪುರುತ್ಥಾನಗೊಳಿಸಿ ಅವುಗಳು ಸಮರ್ಥ ನೀರಿನ ಮೂಲವಾಗಲು ಕೂಡಾ ಶ್ರೀಯುತರು ಶ್ರಮಿಸಿದ್ದಾರೆ.
ನಮ್ಮ ಭಾಗದಲ್ಲಿ ಹೆಚ್ಚು ಕರೆಗಳಿವೆ ಆ ಎಲ್ಲ ಕೆರೆಗಳ್ಲಲಿ ಕೆಲವೊಂದು ಪ್ರಾಕೃತಿಕವಾಗಿ ರಚನೆಗೊಂಡವುಗಳಾದರೆ ಇನ್ನು ಕೆಲವು ಮಾನವ ನಿರ್ಮಿತವಾದವುಗಳಾಗಿವೆ. ನೀರಿನ ತೊಟ್ಟಿಗಳು ತಗ್ಗುಪ್ರದೇಶಗಳಲ್ಲಿ ಸಂಗ್ರಹಗೊಂಡು ಒಂದು ಕೆರೆ-ಹೊಂಡಗಳಲ್ಲಿ ಆವೃತವಾಗುವುದು. ಮಳೆಗಾಲದಲ್ಲಿ ನೀರು ನೇರವಾಗಿ ಬಿದ್ದು ಕೆರೆಗಳಿರುವ ಜಾಗದಲ್ಲಿ ಹರಿದು ನಿಲ್ಲುವಂತಾಗಬೇಕು ಎಂಬ ಸದಾಶಯದೊಂದಿಗೆ ಕೆರೆಗಳ ಊಳೆತ್ತುವ ಕಾರ್ಯವನ್ನು ಸ್ನೇಹಿರೊಂದಿಗೆ ಒಡಗೂಡಿ ನಿರ್ವಹಿಸಿದ ಕೀರ್ತಿ ಬಿದರೂರವರಿಗೆ ಸಲ್ಲುತ್ತದೆ.
ಈ ಕೆರೆಗಳಿಂದಾಗಿ ಅಂತರ್ಜಲವು ಹೆಚ್ಚಾಗಿ ಮಣ್ಣಿನ ಸವಕಳಿಯು ಕಡಿಮೆಯಾಗುವುದರೊಂದಿಗೆ ಹೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನಾಗಿಸಲು ಸಾಧ್ಯವಾಗುತ್ತದೆ. ಇದರಿಂದ ಕೃಷಿ ಕಾರ್ಯದ ಜೊತೆಗೆ ಜಾನುವಾರುಗಳಿಗೂ ಪಶು – ಪಕ್ಷಿಗಳಿಗೂ ಕುಡಿಯಲು ನೀರು ಸಿಗುತ್ತದೆ. ಈ ಕೆರೆಗಳ ಊಳೆತ್ತಿ ಆ ಮಣ್ಣನ್ನು ಹೊಲಗಳಿಗೆ ಸಾಗಿಸಿದರೆ ಫಲವತ್ತಾದ ಗೊಬ್ಬರವಾಗುತ್ತದೆ ಎಂಬ ಅರಿವನ್ನು ಜಾಗೃತಗೊಳಿಸಿದ್ದಾರೆ.
ಹೊಸ ಶಿಕ್ಷಣ ನೀತಿ ಆರಂಭಗೊಂಡಿರುವದು ಸಂತಸದ ಸಂಗತಿ ಆ ಪರ್ಯದಲ್ಲಿ ಕೆರೆಗಳ ಬಗ್ಗೆ ಸೂಕ್ತ ಮಾಹಿತಿಯನ್ನು ಸೇರ್ಪಡಿಸಬೇಕೆಂಬ ವಿಚಾರವನ್ನು ಪುಸ್ತಕ ಕಮೀಟಿಯವರಿಗೆ ತಿಳಿಸಿರುವುದು ಇವರ ಹೆಮ್ಮೆಯ ಕಾರ್ಯದಲ್ಲಿ ಒಂದು ಎಂದರೆ ತಪ್ಪಾಗಲಾರದು.
ಕಾಯಕವೆಂಬ ಕೆರೆಗೆ ತನುವೆಂಬ ಏರಿ ಮನವೆಂಬ ಕಟ್ಟೆಯಕಟ್ಟಿ ದೃಢವೆಂಬ ತೋಟವನಿಕ್ಕಬೇಕಯ್ಯ ಆನಂದವೆಂಬ ಜಲವ ತುಂಬಿ ಸ್ವಾನುಭವವೆಂಬ ಸೋಪಾನವ ಮಾಡಬೇಕಯ್ಯ ಆ ಕೆರೆಯ ಏರಿಯ ಮೇಲೆ ಆಚಾರವೆಂಬ ವೃಕ್ಷವ ಬೆಳೆಸಿ, ಅರಿವೆಂಬ ಹೂವ ಅದ್ವೈತವೆಂಬ ಹಸ್ತದಿಂದ ಅನುಮಪ ಲಿಂಗಕ್ಕೆ ಪೂಜಿಸಬಲ್ಲಡೆ ಆಕಾಶವೆಂಬಾತ ಜನತೆಯ ಸಂಸ್ಕಾರ ಕಾರ್ಯಕ್ಕೆ ಅಣಿಗೊಳ್ಳುವನಯ್ಯ. ಕೆರೆಯೊಂದಿಗೆ ಪ್ರತಿಯೊಬ್ಬರ ಕಾಯಕಕ್ಕೂ ಕೂಡಾ ಸಮರ್ಥ ತಳಪಾಯವನ್ನು ಹಾಕುವಲ್ಲಿ ಬಿದರೂರವರು ಅವಿರತವಾಗಿ ಶ್ರಮಿಸಿದ್ದಾರೆ.
ಊರಿನ ಸುತ್ತವಿರುವ ದಿನ್ನೆಯನ್ನೇ ಏರಿಯಾಗಿ ಬಳಸಿಕೊಳ್ಳಬಹುದೆಂದು ತಿಳಿಸಿ ಆ ದಿಸೆಯಲ್ಲಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಿಯಿಂದ ನಡೆಯುವ ಕಾರ್ಯಗಳಿಗೂ ಸೂಕ್ತ ಮಾರ್ಗದರ್ಶನ ಮಾಡಿದ ಕೀರ್ತಿ ಬಿದರೂರವರದು.
ಕಳೆದ ದಶಕದಿಂದಲೂ ವಿಚಾರಿಸಿದಾಗ ರೋಣ ಮತಕ್ಷೇತ್ರದ ಜನ ಪ್ರತಿನಿಧಿಗಳು ಜನರಿಗೆ ಸೂಕ್ತವಾಗಿ ಸ್ಪಂದಿಸಿಲ್ಲ ಮತ್ತು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಕಾರ್ಯಗಳಿಗೆ ಅಣಿಗೊಂಡಿರುವುದಿಲ್ಲ. ಹೀಗಾಗಿ ಕ್ಷೇತ್ರದ ಜನರು ಕೂಡಾ ಒಬ್ಬ ಕ್ರೀಯಾಶೀಲ ನಾಯಕನ ಕೊರತೆ ಈ ಕ್ಷೇತ್ರಕ್ಕಿದೆ. ಈ ಬಾರಿ ಅದನ್ನು ನಿವಾರಿಸುವಲ್ಲಿ ನಾವು ಜಾಗೃತರಾಗಬೇಕೆನ್ನುವ ನಿಲುವು ಕ್ಷೇತ್ರದ ಜನರ ಮನಸ್ಸಿನಲ್ಲೂ ನೆಲೆಗೊಂಡಿದೆ. ಈ ಅಂಶವೇ ಬಿದರೂರವರಿಗೆ ವರವಾಗುವುದಲ್ಲದೇ ಶ್ರೀಶೈಲಪ್ಪ ಬಿದರೂರವರ ಋಣಭಾರವನ್ನು ಇಳಿಸಿಕೊಳ್ಳಬೇಕೆಂಬ ಚಿಂತನೆಯಲ್ಲಿದ್ದಾರೆ. ಈ ಎರಡು ಅಂಶಗಳು ಅಕ್ಷಯ ಇವರಿಗೆ ವರವಾಗಿ ಮಾರ್ಪಡುವುದರಲ್ಲಿ ಸಂದೇಹವಿಲ್ಲ.
