Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿರಾಜ್ಯ

ಪದ್ಮಶ್ರೀ ಹರೇಕಳ ಹಾಜಬ್ಬ ನಾಡು ಕಂಡ ಓರ್ವ ಅಪೂರ್ವ ಸಾಧಕ..

ಸತ್ಯ ದರ್ಶನ

ಮಂಗಳೂರು. ತಾಲೂಕಿನ ಹರೇಕಳ ಎಂಬ ತೀರಾ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ಹಾಜಬ್ಬ ಅವರು ಬಡತನದಿಂದ ಶಾಲೆಯ ಮೆಟ್ಟಿಲು ಹತ್ತಲಾರದೆ ಜೀವನೋಪಾಯಕ್ಕೆ ಬುಟ್ಟಿಯಲ್ಲಿ ಕಿತ್ತಳೆ ಮಾರುತ್ತಿದ್ದರು. ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎದು ರಿಸಬೇಕಾದ ಸಂಕಷ್ಟದ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದರು. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸ ಬಾರದು. ಅದಕ್ಕೆ ಏನನ್ನಾದರೂ ಮಾಡಬೇಕು ಎಂಬ ಅಚಲ ನಿರ್ಧಾರ ಕೈಗೊಂಡು ಅವಿರತ ಶ್ರಮದಿಂದ ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ನಿರ್ಮಾಣಕ್ಕೆ ಕಾರಣರಾದರು.
ಕಡು ಬಡತನಡಾ ನಡುವೆ ಕಿತ್ತಳೆ ಮಾರಾಟದ ಮಧ್ಯೆ ಶಾಲೆಗಾಗಿ ಕಚೇರಿಗಳಿಗೆೆ ಅಲೆದಾಡಿದರು. 2000ನೇ ಜೂ.17 ರಂದು ಹರೇಕಳ ನ್ಯೂಪಡುಗೆ ಸರಕಾರಿ ಶಾಲೆ ಮಂಜೂರು ಮಾಡುವಲ್ಲಿ ಯಶಸ್ವಿಯಾದರು. ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಪಕ್ಕದ ಬೋರಲುಗುಡ್ಡದ 40 ಸೆಂಟ್ಸ್‌ ಜಾಗ ಖರೀದಿಸಲು ಕಿತ್ತಳೆ ವ್ಯಾಪಾರ ಮಾಡಿ, ತೀರಾ ಕಷ್ಟದಲ್ಲಿ ಉಳಿತಾಯ ಮಾಡಿದ್ದ 25,000 ರೂ. ನೀಡಿದರು. ಇತರ ಹಣವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಗಳನ್ನು ದಾನಿಗಳ ನೆರವಿನೊಂದಿಗೆ ಶಾಲೆಗೆ ಹಾಜಬ್ಬರು ಒದಗಿಸಿದರು. ಅಂದಿನಿಂದ ಇಂದಿನ ತನಕ ತನ್ನನ್ನು ಶಾಲೆಗೆ ಅರ್ಪಿಸಿಕೊಂಡು ಅಕ್ಷರ ಸಂತನಾಗಿ ಜನ ಮಾನಸದಲ್ಲಿ ನೆಲೆಯಾದರು.
ಅನಕ್ಷರಸ್ಥನಾಗಿದ್ದರು ನೂರಾರು ಮಂದಿಗೆ ಶಿಕ್ಷಣ ದೊರಕುವಲ್ಲಿ ಕಾರಣರಾದ ಅಕ್ಷರ ಸಂತನೆಂದೇ ಜನಮಾನಸದಲ್ಲಿ ಮನ್ನಣೆ ಗಳಿಸಿರುವ ಹರೇಕಳ ಹಾಜಬ್ಬ ಅವರು ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ.
ವಿಶೇಷವೆಂದರೆ, ಹಾಜಬ್ಬ ಅವರು ಬರಿಗಾಲಿನಲ್ಲಿ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೆರೆದಿದ್ದ ಎಲ್ಲಾ ಗಣ್ಯರ ಗಮನ ಸೆಳೆದರು.
ಶಿಕ್ಷಣ ಇಲ್ಲದಿದ್ದರೆ ಮನುಷ್ಯ ಎದು ರಿಸಬೇಕಾದ ಸಂಕಷ್ಟದ ಪರಿಸ್ಥಿತಿಯನ್ನು ಸ್ವತಃ ಅನುಭವಿಸಿದರು. ತಾನು ಶಿಕ್ಷಣದಿಂದ ವಂಚಿತನಾದರೂ ಮುಂದಿನ ಪೀಳಿಗೆ ಇಂತಹ ಪರಿಸ್ಥಿತಿ ಎದುರಿಸ ಬಾರದು. ಅದಕ್ಕೆ ಏನನ್ನಾದರೂ ಮಾಡಬೇಕು ಎಂಬ ಅಚಲ ನಿರ್ಧಾರ ಕೈಗೊಂಡರು.ಅದರ ಫಲವಾಗಿ ಕಿತ್ತಳೆಯ ಬುಟ್ಟಿಯಲ್ಲೇ ಮೊಳಕೆಯೊಡೆಯಿತು ತನ್ನೂರಿಗೆ ಒಂದು ಶಾಲೆಯ ಕನಸು. ಬರೇ ಕನಸು ಕಾಣುತ್ತಾ ಕಾಲಕಳೆಯಲಿಲ್ಲ. ಅದನ್ನು ತನ್ನ ಬದುಕಿನ ಗುರಿಯಾಗಿ ಸ್ವೀಕರಿಸಿದರು. ಅವಿರತ ಶ್ರಮದಿಂದ ಇದನ್ನು ನನಸು ಮಾಡುವಲ್ಲಿ ಯಶಸ್ವಿ ಯಾದರು. ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಗೆ ಕಾರಣರಾಗಿ ಜನಮಾನಸದಲ್ಲಿ ಅಕ್ಷರ ಸಂತನಾಗಿ ಬೇರೂರಿದರು.

ಅಕ್ಷರ ಪ್ರೀತಿಯ ಅನಾವರಣ

ಸರಕಾರಿ ಶಾಲೆಯನ್ನು ತನ್ನ ಶಾಲೆಯಂತೆ ಪ್ರೀತಿಸುತ್ತಾ ಬಂದಿರುವ ಹಾಜಬ್ಬ ಅವರು ಶಾಲೆಯನ್ನು ಹಿರಿಯ ಪ್ರಾಥಮಿಕದವರೆಗೆ ವಿಸ್ತರಿಸಲು ಪಣತೊಟ್ಟರು. ಹಾಜಬ್ಬರ ಅವಿರತ ಶ್ರಮದಿಂದ ಇದೀಗ ಕಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ ಮಟ್ಟಕ್ಕೆ ತಲುಪಿದೆ. ಇದನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸು ಹಾಜಬ್ಬರದ್ದು. ಅದಕ್ಕಾಗಿ ನಿರಂತರ ಶ್ರಮಿಸುತ್ತಿರುವ ಹಾಜಬ್ಬರ ಅಕ್ಷರ ಪ್ರೀತಿ ಅನನ್ಯವಾದುದು. ಕ್ಷೀಣಿಸುತ್ತಿರುವ ಆರೋಗ್ಯ, ಪತ್ನಿಯ ಅನಾರೋಗ್ಯ, ಬಡತನ ಅವರ ಅಕ್ಷರ ಪ್ರೀತಿಗೆ ಎಂದೂ ತಡೆಯಾಗಿಲ್ಲ.

Related posts

ಕಳಪೆ ಕಾಮಗಾರಿ ತಪಾಸಣೆಗೆ ಆಗ್ರಹ.

satyadarshana

ಸಂಪಾದಕರ ಸಂಘದ ಕೊಪ್ಪಳ ಘಟಕಕ್ಕೆ ನೂತನ ಸಾರಥಿಗಳು ಅಧ್ಯಕ್ಷರಾಗಿ ಶ್ರೀನಿವಾಸ, ಕಾರ್ಯದರ್ಶೀಯಾಗಿ ಖಲೀಲ್ ಉಡೇವು ಆಯ್ಕೆ

satyadarshana

ಪಿಎಸ್​ಐ ಮನೆಗೆ ಚೋರರು ಕನ್ನ..

satyadarshana

Leave a Comment