Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ ಎರಡನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ  

ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ 2.ನೇ  ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ 

ಹರಪನಹಳ್ಳಿ,: ತಾಲೂಕಿನ ಕಣಿವಿಹಳ್ಳಿ ಗ್ರಾಮದಲ್ಲಿ ನಡೆದ ಸ್ನೇಹಜೀವಿ ಸಮಾಜಮುಖಿ ಟ್ರಸ್ಟ್ ಹಾಗೂ ಗ್ರಾಮಸ್ಥರು ಮತ್ತು ದೈವಸ್ತರ ವತಿಯಿಂದ ಜಗಜ್ಯೋತಿ ಬಸವೇಶ್ವರರ ಜಯಂತಿ ಪ್ರಯುಕ್ತ 2ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ 13 ನವ ಜೋಡಿಗಳಿಗೆ ಆಶೀರ್ವಾದಿಸಿ ಮಾತನಾಡಿದ ಪರಮಪೂಜ್ಯ ಶ್ರೀ ಶ್ರೀ ಚನ್ನಬಸವ ಶಿವಯೋಗಿ ಮಹಾಸ್ವಾಮಿಗಳು ಗುಡ್ಡದ ವಿರಕ್ತಮಠ ನೀಲಗುಂದ ಇವರು ಸತಿ -ಪತಿ ಹರಿತು ಬಾಳಿದೊಡೆ ಸಂಸಾರ ಸುಗಮಗೋಳ್ಳುತ್ತದೆ ನಿಮ್ಮೆಲ್ಲರ ದಾಂಪತ್ಯ ಜೀವನ ಸುಖಕರವಾಗಿರಲಿ ಹಾಗೇ ಭಕ್ತಿ, ಸಂಸ್ಕಾರ, ಸಾಮಾಜಿಕ ಕಾರ್ಯಕ್ರಮಗಳನ್ನ ನೋಡಬೇಕೆಂದರೆ ಅದು ಕಣಿವಿಹಳ್ಳಿ ಗ್ರಾಮದಲ್ಲಿ ಮಾತ್ರ ಸಾಧ್ಯ ಎಂದು ನುಡಿದರು

ಈ ಸಂದರ್ಭದಲ್ಲಿ ಕೊಟ್ರಯ್ಯ ಸ್ವಾಮಿ ಕಣಿವಿಹಳ್ಳಿ ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕುಡತಿನ ಮಗ್ಗಿ ಗೋಣಿಸ್ವಾಮಿ ಅಧ್ಯಕ್ಷರು ಸಮಾಜಮುಖಿ ಶೇವಾ ಟ್ರಸ್ಟ್ ಕಣಿವಿಹಳ್ಳಿ ಉಪಾಧ್ಯಕ್ಷರಾದ ಪ್ರಸಾದ್.ಎಂ ಹಾಗೂ ವೈ. ಡಿ. ಅಣ್ಣಪ್ಪನವರ ಧರ್ಮಪತ್ನಿ ಗೌರಮ್ಮ ಅಣ್ಣಪ್ಪ. ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರಾದ ನೂರ್ ಅಹಮದ್,ಮತ್ತು ಸ್ನೇಹಜೀವಿ ಸಮಾಜಮುಖಿ ಟ್ರಸ್ಟ್ ನ ಎಲ್ಲಾ ಸರ್ವ ಸದಸ್ಯರು ಮುಖಂಡರು,ದೈವಸ್ಥರು, ಯುವಕರು,ಮಹಿಳೆಯರು, ಮಕ್ಕಳು,ಭಾಗವಹಿಸಿದ್ದರು

Related posts

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ

satyadarshana

ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕ ಪ್ರಮಾಣದಲ್ಲಿ ಲಭ್ಯ

satyadarshana

ರಾಜ್ಯದ ವಿಧಾನ ಪರಿಷತ್‍ನ 25 ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನ

satyadarshana

Leave a Comment