Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಲಂಚ ಪಡೆಯೋ ವೇಳೆ ACB ಬಲೆಗೆ ಬಿದ್ದ ಪಂಚಾಯತ್ ರಾಜ್ ಇಲಾಖೆ ಮುಖ್ಯ ಎಂಜಿನಿಯರ್

ಸುದ್ದಿಮೂಲ ಸತ್ಯದರ್ಶನ ↔
ಕೊಡಗು: ಪಂಚಾಯತ್ ರಾಜ್ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ಲಂಚ ಸ್ವೀಕಾರ ಮಾಡುತ್ತಿದ್ದ ಮುಖ್ಯ ಎಂಜಿನಿಯರ್ ಶ್ರೀಕಂಠಯ್ಯ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಎಸಿಬಿ ಡಿವೈಎಸ್ಪಿ ತಿಪ್ಪಣ್ಣ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ರಸ್ತೆ ಕಾಮಗಾರಿ ಗುತ್ತಿಗೆ ಕೆಲಸದ ಸಂಬಂಧ ಮುಖ್ಯ ಎಂಜಿನಿಯರ್ ಶ್ರೀಕಂಠಯ್ಯ 1.92 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದರು. ಅಲ್ಲದೇ ಎಂಜಿಯರ್ ತೌಸಿಪ್ ಕೂಡ 75 ಸಾವಿರ ರೂಪಾಯಿ ಲಂಚ ಪಡೆದಿದ್ದರು ಎನ್ನಲಾಗಿದೆ.
ಗುತ್ತಿಗೆದಾರ ನಂದ ಎಂಬುವರಿಂದ ಒಟ್ಟು 2.67 ಲಕ್ಷ ರೂಪಾಯಿಗಳನ್ನು ಅಧಿಕಾರಿಗಳು ಲಂಚವಾಗಿ ಸ್ವೀಕರಿಸುತ್ತಿದ್ದರು. ಈ ವೇಳೆ ಕೊಡಗು ಮತ್ತು ಮೈಸೂರು ವಿಭಾಗದ ಎಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಅಂದಹಾಗೇ, ಹಿಂದೆಯೂ ಅಕ್ರಮ ಹಣ ವರ್ಗಾವಣೆಯಲ್ಲಿ ಇಇ ಶ್ರೀಕಂಠಯ್ಯ ಅಮಾನತುಗೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಲಂಚ ಪಡೆದ ಆರೋಪಿಗಳಿಂದ 4.10 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಯ್ಯ, ಕಿರಿಯ ಇಂಜಿನಿಯರ್‌ ತೌಸೀಫ್, ಸಿಬ್ಬಂದಿ ರಮೇಶ್, ಸಂತೋಷ್, ಕವನ್ ಬಂಧನ ಮಾಡಲಾಗಿದೆ ಎಂದು ಎಸಿಬಿ ಎಸ್​​​ಪಿ ಅರುಣಾಂಶು ಗಿರಿ ಮಾಹಿತಿ ನೀಡಿದ್ದಾರೆ.

 

Related posts

ಅಕಾಲಿಕ, ಅತಿವೃಷ್ಟಿಯಿಂದ ರೈತರಿಗಾಗಿರುವ ಎಲ್ಲ ಬೆಳೆಗಳ ನಷ್ಟದ ಪರಿಹಾರವನ್ನು ಶೀಘ್ರ ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ

satyadarshana

ಆರೋಗ್ಯಕರ ಕೂದಲಿಗಾಗಿ ಆಯುರ್ವೇದ ಪರಿಹಾರಗಳು                          ಸುಂದರವಾದ ಕೂದಲು ವ್ಯಕ್ತಿಯ ನೈಸರ್ಗಿಕ

satyadarshana

ನರೇಗಾ ಉದ್ಯೋಗ ವಾಹಿನಿ ರಥ ಯಾತ್ರೆಗೆ ಚಾಲನೆ.

satyadarshana

Leave a Comment