Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಅಕಾಲಿಕ, ಅತಿವೃಷ್ಟಿಯಿಂದ ರೈತರಿಗಾಗಿರುವ ಎಲ್ಲ ಬೆಳೆಗಳ ನಷ್ಟದ ಪರಿಹಾರವನ್ನು ಶೀಘ್ರ ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ

 

 ಸತ್ಯದರ್ಶನ

  ಗದಗ : ಲಕ್ಷ್ಮೇಶ್ವರ .ಅಕಾಲಿಕ, ಅತಿವೃಷ್ಟಿಯಿಂದ ರೈತರಿಗಾಗಿರುವ ಎಲ್ಲ ಬೆಳೆಗಳ ನಷ್ಟದ ಪರಿಹಾರವನ್ನು ಆದಷ್ಟು ಶೀಘ್ರ ರೈತರ ಖಾತೆಗಳಿಗೆ ಜಮೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಬಾಲೆಹೊಸೂರು ಗ್ರಾಮ ಘಟಕದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

   ಸಂಘದ ಅಧ್ಯಕ್ಷ ಲೋಕೇಶ್‌ ಜಾಲವಾಡಗಿ ಮಾತನಾಡಿ, ಅತಿವೃಷ್ಟಿಯಿಂದ ರೈತರ ಹೊಲದಲ್ಲಿ ಬೆಳೆದು ನಿಂತ ಮುಂಗಾರಿನ ಫಸಲು ನೆಲಕ್ಕೆ ಬಿದ್ದು ಹಾಳಾಗಿದೆ. ಹಿಂಗಾರಿನ ಸಣ್ಣ ಬೆಳೆ ಮಳೆಯ ಹೊಡೆತಕ್ಕೆ ಸಿಲುಕಿದೆ. ಪ್ರತಿವರ್ಷ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ರೈತರು ಹಾನಿ ಅನುಭವಿಸುವುದು ತಪ್ಪದಂತಾಗಿದೆ. ಶೇಂಗಾ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗೆ ಮಾತ್ರ ಪರಿಹಾರ ಕೊಡುವರೆಂಬ ಆತಂಕದಲ್ಲಿ ರೈತರಿದ್ದಾರೆ. ಆದ್ದರಿಂದ ಗೋವಿನಜೋಳ,

ತೊಗರಿ ಸೇರಿ ಎಲ್ಲ ಬೆಳೆಗಳ ಹಾನಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

  ಕಳೆದ ಎರಡು ವರ್ಷಗಳ ಹಿಂದೆಯೇ ಬಾಲೆಹೊಸೂರ ಗ್ರಾಮದ ಅನೇಕ ರೈತರ ಜಮೀನುಗಳಿಗೆ ವರದಾ ನದಿಯ ನೀರು ಹರಿದು ಬೆಳೆಹಾನಿಯಾದದ ಬಗ್ಗೆ ಪರಿಹಾರ ಗಗನ ಕುಸುಮವಾಗಿದೆ. ಬೆಳೆಹಾನಿಯ ಜತೆಗೆ ಮನೆ ಬಿದ್ದು ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೂ ಸರಕಾರ ಕೂಡಲೇ ಸ್ಪಂದಿಸುವುದು ಅವಶ್ಯವಾಗಿದೆ.

  ರೈತರ ಜಮೀನುಗಳಿಗೆ ಕೃಷಿ ಇಲಾಖೆ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ಸಮೀಕ್ಷೆ ಪೂರ್ಣಗೊಳಿಸಿದರೆ ರೈತರು ಜಮೀನು ಹಸನು ಮಾಡಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.

  ತಹಶೀಲ್ದಾರ್‌ ಕಚೇರಿಯ ಶಿರಸ್ತೆದಾರ ರೇಣುಕಾ ಮನವಿ ಸ್ವೀಕರಿಸಿದರು. ರೈತ ಸಂಘದ ಕಾರ್ಯದರ್ಶಿ ಕೇಶವ ಕಟ್ಟಿಮನಿ, ಸಂಘದ ಸದಸ್ಯರಾದ ಮಂಜುನಾಥ ಸುಣಗಾರ, ವೆಂಕಟೇಶ ಕಾಗನೂರ, ಹನುಮಂತಪ್ಪ ನಾವ್ಹಿ, ಬಸವರಡ್ಡಿ ಚನ್ನಳ್ಳಿ, ತಿರಕಪ್ಪ ಶಿಗ್ಲಿ, ಮಲ್ಲೇಶಪ್ಪ ತಿರಕಣ್ಣವರ, ಪ್ರಸನ್ನ ಲೋಹಾರ, ಹೊನಕೇರಪ್ಪ ಒಂಟಿ, ದರಿಯಪ್ಪ ಪಶುಪತಿಹಾಳ ಇತರರಿದ್ದರು

Related posts

ಹೆಬ್ಬಾಳ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ಗ್ರಾಮಸ್ಥರಿಂದ ಅಭೂತಪೂರ್ವ ಸ್ವಾಗತ.

satyadarshana

ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಯುದ್ದದ ಪರಿಸ್ಥಿತಿಯನ್ನು ಜನರು ಹೇಗೆ ಎದುರಿಸಬೇಕು ಎಂದು ಜಾಗೃತಿ ಮೂಡಿಸುವುದಾಕ್ಕಾಗಿ ಅಣುಕು ಪ್ರದರ್ಶನ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್

satyadarshana

ಬಾಗಲಕೋಟೆ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರ 400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರ

satyadarshana

Leave a Comment