ಬೆಳವಣಿಕಿ ಗ್ರಾಮದ ಟಿಪ್ಪು ಸುಲ್ತಾನ್ ಕಮಿಟಿ ಅಂಜುಮನ್ ಕಮಿಟಿ ಯುವಕರು ಹಿರಿಯರು ಹಾಗೂ ಸಮಸ್ತ ಮುಸ್ಲಿಂ ಬಾಂಧವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ.) ಅವರ 1501ನೇ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಉನ್ ನಬಿ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ಕಮಿಟಿ ಆಯೋಜಿಸಿದ್ದ ಈ ಪವಿತ್ರ ಸಭೆಯಲ್ಲಿ ಕಾರ್ಯಕ್ರಮದ ನಿರೂಪಣೆ ಹಾಗೂ ಆರಂಭಿಕ ಸ್ವಾಗತವನ್ನು ಮಹಮ್ಮದ್ ರಫೀಕ್ ಲಕ್ಕುಂಡಿ ಅವರು ನೆರವೇರಿಸಿದರೆ ಹಾಫೀಜ್ ಅಜಮತ್ ಅಲಿ ಅವರು ಸಮಸ್ತ ಸಭೆಯನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ಮೂಡಿಬಂದು ಸಭಿಕರ ಮೆಚ್ಚುಗೆಗೆ ಪಾತ್ರವಾದವು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಸಮುದ್ರದ ಹಜರತ್ ಮೌಲಾನಾ ಸಮೀಯುಲ್ಲಾಹ್ ಸಾಹೇಬ್ ನದ್ವಿ ಅವರು ದಿವ್ಯ ಸಾನಿಧ್ಯ ವಹಿಸಿ ಶುಭನುಡಿಗಳನ್ನಾಡಿದರು. ವೇದಿಕೆಯಲ್ಲಿದ್ದ ಹಿರಿಯರು ಮತ್ತು ಧರ್ಮಗುರುಗಳು ಪ್ರವಾದಿ ಮಹಮ್ಮದ್ (ಸ.ಅ.) ಅವರ ದಿವ್ಯ ಜೀವನ ಚರಿತ್ರೆ ಸರಳತೆ ಕರುಣೆ ಹಾಗೂ ಸನ್ಮಾರ್ಗದ ತತ್ವಗಳನ್ನು ವಿವರಿಸಿದರು. ಸಮಾಜದ ಒಳಿತಿಗಾಗಿ ಪ್ರವಾದಿಯವರ ಉನ್ನತ ಆದರ್ಶಗಳು ಮತ್ತು ನಡವಳಿಕೆಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿ ಶುಭ ಕೋರಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿಯ ಅಧ್ಯಕ್ಷರಾದ ಜನಾಬ್ ಅಬ್ದುಲ್ ಸಾಬ್ ಮುಲ್ಲಾ ಉಪಾಧ್ಯಕ್ಷರಾದ ಜನಾಬ್ ಫಕ್ರು ಸಾಬ್ ಗದಗ ಕಾರ್ಯದರ್ಶಿ ಅಲ್ಲಾಬಕ್ಷಿ ಯಾವಗಲ ಹಾಗೂ ಅಂಜುಮನ್ ಕಮಿಟಿಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಜೊತೆಗೆ ಮಕ್ಕಾ ಮಸೀದಿಯ ಇಮಾಮರಾದ ಜನಾಬ್ ಹಾಫಿಜ್ ಇಮಾಮ್ ಸಾಬ್ ಉಸ್ಮಾನಿ ಅವರು ಉಪಸ್ಥಿತರಿದ್ದು ಆಶೀರ್ವದಿಸಿದರು.
ಯುವ ಮುಖಂಡರಾದ ಫೈರೋಜ್ ಕೋಲಕಾರ ರಫೀಕ್ ಬಾವಿಕಟ್ಟಿ ಅಜಮತ್ ಮುಲ್ಲಾ ಅಹಮ್ಮದ್ ಅಲಿ ಅಲ್ಲಾಬಕ್ಷಿ ಆಫೀಸಾಬ್ ಸೇರಿದಂತೆ ಟಿಪ್ಪು ಸುಲ್ತಾನ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ನಟ್ಟಿ ಓಣಿಯ ಹಿರಿಯರು ಮಹಿಳೆಯರು ಹಾಗೂ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ವರದಿಯ ಅಭಿಷೇಕ ಕೊಪ್ಪದ ಗದಗ್ ಜಿಲ್ಲಾ ವರದಿಗಾರರು
