Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಅಂಗನವಾಡಿ, ಆಸ್ಪತ್ರೆಗೆ ಕರ್ನಾಟಕ ರಾಜ್ಯ ಆಹಾರ ಆಯೋಗ ಭೇಟಿ; ಪರಿಶೀಲನೆ ===

ಕೊಪ್ಪಳ :ಮೇ 20 : ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಹೆಚ್.ಕೃಷ್ಣ ಹಾಗೂ ಸದಸ್ಯರಾದ ಮಾರುತಿ ಎಂ.ದೊಡ್ಡಲಿAಗಣ್ಣವರ ಅವರು ಮೇ 20ರಂದು ಕೊಪ್ಪಳ ಜಿಲ್ಲೆಯಲ್ಲಿ ಆಕಸ್ಮಿಕ ಭೇಟಿ ಕೈಗೊಂಡರು.

ಬೆಳಗ್ಗೆ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ಆರಂಭಿಸಿದ ಅಧ್ಯಕ್ಷರು, ಜಿಲ್ಲಾಡಳಿತ ಭವನದಿಂದ ನೇರವಾಗಿ ಕೊಪ್ಪಳ ಸಿಟಿಯ ಗಾಂಧೀನಗರದಲ್ಲಿನ ವಾರ್ಡ್ ನಂಬರ 23ರಲ್ಲಿನ 2ನೇ ಅಂಗನವಾಡಿಗೆ ಕೇಂದ್ರಕ್ಕೆ ತೆರಳಿ ಮೊದಲಿಗೆ ಆಹಾರ ದಾಸ್ತಾನು ಕೊಠಡಿ ಪ್ರವೇಶಿಸಿ ಪರಿಶೀಲನೆ ನಡೆಸಿದರು. ಈ ದಿನ ಮೆನು ಚಾಟ್ ಪ್ರಕಾರ ಮಕ್ಕಳಿಗೆ ಏನು ಕೊಡಬೇಕು? ಎಂದು ಕೇಳಿ, ಸತತ 2 ಗಂಟೆಗಳ ಕಾಲ ನಾನಾ ವಹಿಗಳನ್ನು ಪರಿಶೀಲಿಸಿದರು. ಅಂಗನವಾಡಿಗಳಲ್ಲಿ ದಾಖಲಾದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಸಂಖ್ಯೆ ಬಗ್ಗೆ ಕೇಳಿದರು. ಕಾಲಕಾಲಕ್ಕೆ ಭೇಟಿ ನೀಡ್ತೀರಾ ಎಂದು ಸಿಡಿಪಿಓ ಅವರಿಗೆ ಪ್ರಶ್ನಿಸಿದರು. 6 ತಿಂಗಳಿನಿAದ 3 ವರ್ಷದವರೆಗಿನ ಮಕ್ಕಳಿಗೆ, ಗರ್ಭಿಣಿ ಮತ್ತು ಬಾಣಂತಿಯರ ಮನೆಗೆ ನೀಡುವ ಆಹಾರ ವಿತರಣಾ ಪುಸ್ತಕದಲ್ಲಿನ ವಿವರವನ್ನು ಇದೆ ವೇಳೆ ಪರಿಶೀಲಿಸಿದರು. ಅಂಗನವಾಡಿಯಲ್ಲಿ ಮೊಟ್ಟೆ ಖರೀದಿ ಬಿಲ್ಲುಗಳು ಸಮರ್ಪಕವಾಗಿಲ್ಲ. ಆಹಾರ ವಿತರಣೆ ವಹಿಯಲ್ಲಿ ದಾಖಲಾದ ಗರ್ಭಿಣಿಯರು ಮತ್ತು ಬಾಣಂತಿಯರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ. ಬ್ಯಾಂಕಿನಿAದ ಡ್ರಾ ಮಾಡಿದ ಹಣಕ್ಕೆ ಸರಿಯಾದ ಲೆಕ್ಕಪತ್ರವಿಲ್ಲ ಎಂದು ಆಯೋಗದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಅಧ್ಯಕ್ಷರು, ಮಧ್ಯಾಹ್ನ 1.25ರ ವೇಳೆಗೆ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಗೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿನ ತುರ್ತು ಚಿಕಿತ್ಸಾ ನಿಗಾ ವಾರ್ಡನಲ್ಲಿನ ರೋಗಿಗಳನ್ನು ಮಾತನಾಡಿಸಿ, ಬಾಳೆ ಹಣ್ಣು, ಮೊಟ್ಟೆ ಕೊಟ್ಟಿದ್ದಾರಾ? ಎಂದು ರೋಗಿಗಳಿಗೆ ಕೇಳಿ ಮಾಹಿತಿ ಪಡೆದುಕೊಂಡರು. ಬಳಿಕ ಆಸ್ಪತ್ರೆ ಆವರಣದಲ್ಲಿನ ಅಡುಗೆ ತಯಾರಿಕಾ ಕೇಂದ್ರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆಹಾರ ದಾಸ್ತಾನು ಕೊಠಡಿಯಲ್ಲಿನ ಮಸಾಲ ಸೇರಿದಂತೆ ವಿವಿಧ ಸಾಮಗ್ರಿಗಳ ಮೇಲಿನ ದಿನಾಂಕನ್ನು ಪರೀಕ್ಷಿಸಿದರು. ಅಕ್ಕಿ ಖರೀದಿಗೆ ಸಂಬAಧಿಸಿದAತೆ ಟೆಂಡರ್ ಪಾರ್ಮ ಹಾಗೂ ಬೇರೆ ಬೇರೆ ದಾಖಲಾತಿಗಳನ್ನು ಪರಿಶೀಲಿಸಿದರು.

ಬಳಿಕ ಚಿಕ್ಕಮಕ್ಕಳ ವಿಭಾಗದಲ್ಲಿನ ಸ್ಟೋರ ರೂಮಗೆ ಭೇಟಿ ನೀಡಿ ಅಲ್ಲಿನ ಅಡುಗೆ ಸಾಮಗ್ರಿಗಳನ್ನು ಪರಿಶೀಲಿಸಿದರು. ಬಳಿಕ ವೈದ್ಯಕೀಯ ಅಧೀಕ್ಷಕರ ಕಚೇರಿಯಲ್ಲಿ ಸಭೆ ನಡೆಸಿ ಆಸ್ಪತ್ರೆಯಲ್ಲಿನ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿನ ರೋಗಿಗಳಿಗೆ ಗುಣಮಟ್ಟದ ಆಹಾರ ಪೂರೈಕೆಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆAಡೆAಟ್ ಅವರ ಮೇಲೆ ಕ್ರಮ ಜರುಗಿಸಲು ಮತ್ತು ಆಸ್ಪತ್ರೆಗೆ ಆಹಾರ ಸಾಮಗ್ರಿ ಪೂರೈಸುವ ಈಗಿನ ಗುತ್ತಿಗೆದಾರರನ್ನು ಬದಲಿಸಲು ಕ್ರಮ ವಹಿಸಬೇಕು ಎಂದು ವೈದ್ಯಕೀಯ ಅಧೀಕ್ಷಕರಾದ ಡಾ.ಮಂಜುನಾಥ ಪಿ ಸಾಲ್ಮನಿ ಅವರಿಗೆ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ಲಿಂಗರಾಜ್, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶನ ಡಾ.ವೈಜನಾಥ ಇಟಗಿ, ವೈದ್ಯಾಧಿಕಾರಿ ಡಾ.ಅಲಕಾನಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅಮರೇಶ ಹಾವಿನ, ಸಿಡಿಪಿಓ ರೋಹಿಣಿ ಕೊಟಗಾರ, ಜಿಲ್ಲಾ ನಿರೂಪಣಾಧಿಕಾರಿ ನಟರಾಜ ಹಾಗೂ ಇತರರು ಇದ್ದರು.

Related posts

ವಸತಿ ಶಾಲೆಗಳ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಿರಲಿ – ಸಚಿವ ಶಿವರಾಜ ತಂಗಡಗಿ

satyadarshana

ಮಕ್ಕಳು ಬರೆದಿರುವ ಪ್ರಕಟಿತ ಸಾಹಿತ್ಯ ಕೃತಿಗಳ ಸ್ಪರ್ಧೆ

satyadarshana

ಒಳಮೀಸಲಾತಿಯ ಒಳಜಗತ್ತು – ಒಳಮೀಸಲಾತಿಯ ಚೆಂಡು  ಉರುಳಿ ಬಂದಿದ್ದು ಎಲ್ಲಿಗೆ ? 

satyadarshana

Leave a Comment