ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ದ್
ಹರಪನಹಳ್ಳಿ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಸರ್ಕಾರಿ ರಾಗಿ ಖರೀದಿ ಕೇಂದ್ರದ ಮ್ಯಾನೇಜರ್ ಬಸವರಾಜ ಮತ್ತು ಗ್ರೇಡರ್ ಗೋವಿಂದ್ ನಾಯ್ಕ ರವರು ರೈತರು ಬೆಳೆದ ರಾಗಿಯನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡುವ ವೇಳೆ ರಾಗಿ ಶ್ಯಾಂಪಲ್ ನೋಡಲು ಒಂದು ಕೆ ಜಿ ತೆಗೆಯ ಬದಲು 3 ಕೆ.ಜಿ ರಿಂದ 5 ಕೆಜಿ ಯವರೆಗೆ ರಾಗಿ ಅಕ್ರಮವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಲ್ಯಾಣ ಕರ್ನಾಟಕ ವಿಭಾಗ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರು ಹುಲಿ ಕಟ್ಟಿ ಹನುಮಂತಪ್ಪ ರವರು ಆಕ್ರೋಶ ವ್ಯಕ್ತಪಡಿಸಿದರು
ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ರಾಗಿ ಖರೀದಿ ಪ್ರಕ್ರಿಯೆ ನಡೆಯತ್ತಿದ್ದು ಸರ್ಕಾರಿ ರಾಗಿ ಖರೀದಿ ಕೇಂದ್ರದ ಎಪಿಎಂಸಿ ಮಾರುಕಟ್ಟೆಯ ಕಾರ್ಯ ನಿರ್ವಹಿಸುತ್ತಿದ್ದ ಮ್ಯಾನೇಜರ್ ಬಸವರಾಜ ಮತ್ತು ಗ್ರೇಡರ್ ಗೋವಿಂದ್ ನಾಯ್ಕ ರವರು ರಾಗಿ ಶ್ಯಾಂಪಲ್ ನೋಡಲು ಒಂದು ಕೆ ಜಿ ತೆಗೆಯಬೇಕ್ಕಿದ್ದರಾಗಿ ರೈತರಿಂದ 3 ಕೆ.ಜಿ ರಿಂದ 5 ಕೆಜಿ ಯವರೆಗೆ ರಾಗಿ ಅಕ್ರಮವಾಗಿ ತೆಗೆದು ಕೊಳ್ಳುತ್ತಿದ್ದಾರೆ. ಇದು ನಿಯಮ ಬಾಹಿರವಾಗಿ ರಾಗಿ ಪಡೆದುಕೊಂಡಿರುವುದು ರೈತರಿಗೆ ಮಾಡುತ್ತಿರುವ ದ್ರೋಹ, ವಂಚನೆ,ಭ್ರಷ್ಟಾಚಾರವಾಗಿದೆ. ರೈತರು ಯಾಕೇ ಎಂದು ಪ್ರಶ್ನೆ ಕೇಳಿದರೆ ರಾಗಿ ಕಪ್ಪಾಗಿದೆ. ನೀವು ಬೆಳೆಯೋದು ಹೀಗೆನಾ ಎಂದು ಮ್ಯಾನೇಜರ್ ಬಸವರಾಜ ಮತ್ತು ಗ್ರೇಡರ್ ಗೋವಿಂದ್ ನಾಯ್ಕ ರವರ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ರಾಗಿ ಚೆನ್ನಾಗಿಲ್ಲ ನಿಮ್ಮ ರಾಗಿಲೋಡು ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ, ರೈತರು ತಮ್ಮ ನೋವನ್ನು ಹೊರ ಹಾಕ್ಕಿದ್ದಾರೆ. ರೈತರು ಬೆವರಿನ ಹನಿಗೆ ಸರಿಯಾದ ಬೆಲೆ ಸಿಗುವ ಬದಲು ಈ ರೀತಿಯಾಗಿ ವಂಚನೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದು ಕಲ್ಯಾಣ ಕರ್ನಾಟಕ ವಿಭಾಗ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಉಪಾಧ್ಯಕ್ಷರು ಹುಲಿ ಕಟ್ಟಿ ಹನುಮಂತಪ್ಪ ಹೇಳಿದರು.
ತಾಲೂಕಿನ ಎಲ್ಲಾ ರೈತರು ತಾವು ಬೆಳೆದ ರಾಗಿಯನ್ನು ಹರಪನಹಳ್ಳಿ ಎಪಿಎಂಸಿ ಮಾರುಕಟ್ಟೆಗೆ ಆಟೋ, ಟ್ರ್ಯಾಕ್ಟರ್,ಲಾರಿ ಮೂಲಕ ಸರತಿ ಸಾಲಿನಲ್ಲಿ ಎರಡು ಮೂರು ದಿನ ನಿಲ್ಲಿಸಿದರು ಕೂಡ ಆಟೋ, ಟ್ರ್ಯಾಕ್ಟರ್,ಲಾರಿಗಳು ಲೋಡು ಮಾಡಿದ ರಾಗಿ ಚೀಲ 2 ರಿಂದ 4 ಚೀಲ ಕಳ್ಳತನವಾಗುತ್ತಿದೆ. ಮತ್ತು ರಾಗಿ ತೂಕ ಮಾಡುವಾಗ ತೂಕದ ಕಾಟದ ಪಕ್ಕದಲ್ಲಿದ್ದಲ್ಲಿರುವ ಗುಂಡಿಯಲ್ಲಿ ತೂಕ ಮಾಡ್ತ ಮಾಡ್ತ ಹಮಾಲಿಗಳು 2 ರಿಂದ 3 ಚೀಲಗಳು ಆ ಗುಂಡಿಯಲ್ಲಿ ಅಕ್ರಮವಾಗಿ ಹಾಕಿ ಕೊಳ್ಳುತ್ತಾರೆ. ರೈತರು ಕೇಳಿದರೆ ಇದು ನಮ್ಮ ಲೆಕ್ಕಾಚಾರ ನೀವು ಮಾತಾಡುವಂತಿಲ್ಲ ಬಾಯಿ ಮುಚ್ಕೊಂಡು ತೂಕದ ಚೀಟಿ ತೆಗೆದು ಹೋಗ್ತಾ ಇರಬೇಕು ಅಷ್ಟೇ ಎಂದು ಹೇಳ್ಳುತ್ತಾರೆ. ಸಾಮಾನ್ಯವಾಗಿ ಒಬ್ಬ ರೈತ ಹತ್ತು ಕ್ವಿಂಟಲ್ ರಾಗಿ ಚೀಲಗಳು ಎಪಿಎಂಸಿ ತಂದರೆ ತೂಕ ಮಾಡಿ ಕೊಡುವಷ್ಟರಲ್ಲಿ ಕೇವಲ 7 ರಿಂದ 8 ಕ್ವಿಂಟಲ್ ಮಾತ್ರ ರಾಗಿ ತೂಕ ಬರುತ್ತದೆ ಎಂದು ರೈತರು ನೋವಿನಿಂದ ಹೇಳಿ ಕೊಳ್ಳುತ್ತಾರೆ, ಅದ್ದರಿಂದ ಸರ್ಕಾರಿ ನಿಗದಿ ಪಡಿಸಲಾಗಿದೆ ತೂಕ ಕ್ಕಿಂತ ಹೆಚ್ಚಿನ ರಾಗಿ ಪಡೆದನ್ನು ನಿಲ್ಲಿಸಬೇಕಾದ್ರೆ ತಾಲೂಕ್ ಆಡಳಿತಾಧಿಕಾರಿಗಳು ಕೂಡಲೆ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಇಬ್ಬರು ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡು ರೈತರಿಂದ ಅಕ್ರಮವಾಗಿ ಪಡೆದ ರಾಗಿಯನ್ನು ಪ್ರತಿ ಕ್ವಿಂಟಲ್ ಗೆ 3 ಕೆಜಿ ರಾಗಿ ವಾಪಸು ನೀಡಬೇಕು. ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಮತ್ತು ತೂಕ ಮಾಡುವ ಸ್ಥಳದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕು. ರೈತರಿಗೆ ಯಾವುದೇ ರೀತಿಯಲ್ಲಿ ಭ್ರಷ್ಟಚಾರ, ವಂಚನೆಗೆ ಮಾಡದಂತೆ ತಡೆಯಬೇಕು ಎಂದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ.ಮತ್ತು ಮಾನ್ಯ ಜಿಲ್ಲಾಧಿಕಾರಿಗಳು ವಿಜಯನಗರ, ಹೊಸಪೇಟೆ, ಜಿಲ್ಲಾ ಮ್ಯಾನೇಜೆರ್ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಬಳ್ಳಾರಿ/ವಿಜಯನಗರ ಮತ್ತು ಮಾನ್ಯ ಕೆ.ಹೆಚ್. ಮುನಿಯಪ್ಪರವರು ಆಹಾರ ಮತ್ತು ನಾಗರೀಕ ಸರಬರಾಜು ಸಚಿವರು ವಿಧಾನ ಸೌಧ ಬೆಂಗಳೂರು ರವರಿಗೆ ದೂರಿನ ಪ್ರತಿಯನ್ನು ಕಳಿಸಿಕೊಡಲಾಗಿದೆ.
ಎಂದು ಕಲ್ಯಾಣ ಕರ್ನಾಟಕ ವಿಭಾಗ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ
ರಾಜ್ಯ ಉಪಾಧ್ಯಕ್ಷರು ಹುಲಿಕಟ್ಟಿ ಹನುಮಂತಪ್ಪ . ಮಾಂತೇಶ್ ನೀಲಗುಂದ, ಡಿ ಕೆಂಚಪ್ಪ ಹರಪನಹಳ್ಳಿ, ಕೋಡಿಹಳ್ಳಿ ಮಲ್ಲಿಕಾರ್ಜುನ್, ಕಣವಿಹಳ್ಳಿ ಸುರೇಶ್, ಹುಲಿಕಟ್ಟಿ ಮಂಜುನಾಥ್, ಹರಪನಹಳ್ಳಿ ಮಂಜು, ಕುದುರೆ ನಾಗರಾಜ, ಸಂತೋಷ್ ಗುಳೇದ ಹಟ್ಟಿ
CPI-MLಪಕ್ಷದ ತಾಲೂಕು ಕಾರ್ಯದರ್ಶಿ, ಪ್ರಭು ಶೃಂಗಾರ ತೋಟ, ಸಾಮಾಜಿಕ ಕಾರ್ಯಕರ್ತರು, ಅಂಜಿನಪ್ಪ ಬ್ಯಾಡರಗೆರಿ, ಗಂಗಾ ನಾಯ್ಕ ಕಾಳ್ಯನಾಯಕನ ತಾಂಡ, ಮಹಮ್ಮದ್ ರಫೀಕ್ ಇಸ್ಲಾಂಪುರ ರವರು ಸೇರಿ ಮಾನ್ಯ ತಹಶೀಲ್ದಾರ ಬಿ.ವಿ ಗಿರೀಶ್ ಬಾಬುರವರಿಗೆ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ದ್ರೋಹ, ವಂಚನೆಮಾಡುವವರ ವಿರುದ್ದ ಶಿಸ್ತು ಕ್ರಮ ಕೈ ಗೊಳ್ಳಿ ಎಂದು ಮನವಿ ಸಲ್ಲಿಸಿದರು.
