Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಪರಿವರ್ತನಾ ಯುಗದ ಪ್ರತಿ ಮೂರ್ತಿಗಳು 

 

ಗಜೇಂದ್ರಗಡ

    ಶಾಂತಿದೂತ, ಅಹಿಂಸಾ ಮೂರ್ತಿ ಮಹಾತ್ಮ ಗಾಂಧೀಜಿ ಹಾಗೂ ಸರಳ ಸಜ್ಜನಿಕೆಯ ರೂವಾರಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ಭಾರತದ ದಾಸ್ಯತ್ವವನ್ನು ಹೋಗಲಾಡಿಸಲು ಮಹಾತ್ಮ ಗಾಂಧೀಜಿ ಶ್ರಮಿಸಿದರೆ ಈ ದೇಶದ ಬಡತನ ನಿವಾರಿಸಲು ಶಾಸ್ತ್ರಿಜಿ ಶ್ರಮಿಸಿದ್ದಾರೆ. ಸಾಮಾನ್ಯರಂತೆ ಬದುಕಿರುವ ಮೋಹನ್ ದಾಸ್ ಕರಮ್ಚಂದ್ ಗಾಂಧಿಯವರು ಹಾಗೂ ಶ್ರವಣಕುಮಾರ ನಾಟಕಗಳನ್ನು ನೋಡುವ ಮೂಲಕ ಅವುಗಳ ಅಗಾಧ ಪ್ರಭಾವಕ್ಕೆ ಒಳಗಾಗಿ ಬದುಕಿನುದ್ದಕ್ಕೂ ಸತ್ಯ, ಅಹಿಂಸೆಗಳನ್ನು ರೂಡಿಸಿಕೊಂಡು ಮಾತಾಪಿತೃ ಭಕ್ತಿಯನ್ನು ಜಾಗೃತಗೊಳಿಸಿಕೊಂಡು ಬದುಕಿ ಮಹಾತ್ಮ ಎನಿಸಿದ್ದಾರೆ. ಈರ್ವರ ಆದರ್ಶಗಳನ್ನು ಪಾಲಿಸಿಕೊಂಡು ಪ್ರಾಮಾಣಿಕವಾಗಿ ನಾವೆಲ್ಲರೂ ಬದುಕಬೇಕಿದೆ ಎಂದು ಪ್ರಾಚಾರ್ಯ ಬಿ.ಕೆ.ಮಾದಿ ಹೇಳಿದರು.

 ಅವರು ಪಟ್ಟಣದ ವಿಘ್ನೇಶ್ವರ ಶಿಕ್ಷಣ ಸಂಸ್ಥೆಯ ಶ್ರೀ ವಿಘ್ನೇಶ್ವರ ಪದವಿ ಪೂರ್ವ ಕಾಲೇಜ್, ಗಂಗೋತ್ರಿ ಪಬ್ಲಿಕ್ ಸ್ಕೂಲ್, ಶ್ರೀಮತಿ ಸುಮಂಗಲ ಮತ್ತಿಕಟ್ಟಿ ಐ.ಟಿ.ಐ ಕಾಲೇಜ್ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಶಾಸ್ತ್ರಿಜಿ ಅವರ ಜಯಂತೋತ್ಸವದಲ್ಲಿ ಮಾತನಾಡುತ್ತಾ ಮಾನವೀಯತೆಯ ದೃಢವಾದ ಬುನಾದಿಯನ್ನು ಹಾಕಿ ಮನುಕುಲದ ಅಶೋತ್ತರಗಳ ಆಗರದ ಸೌಧವನ್ನು ನಿರ್ಮಾಣ ಮಾಡಿದ ಕೀರ್ತಿ ಈರ್ವರು ಮಹಾತ್ಮರಿಗೆ ಸಲ್ಲುತ್ತದೆ ಎಂದರು.

 ಕಾರ್ಯಕ್ರಮದಲ್ಲಿ ಕಾವ್ಯವಾರಿಕಲ್ ಪ್ರಾರ್ಥಿಸಿದರು, ಪ್ರಭಾರಿ ಪ್ರಾಚಾರ್ಯ ಎನ್.ಎಸ್. ಕಲ್ಕೇರಿ ಗಾಂಧೀಜಿಯವರ ರಘುಪತಿ ರಾಘವ ರಾಜಾರಾಮ್ ಪ್ರಾರ್ಥನೆಯನ್ನು ಹೇಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯರಾಧ ಶ್ರೀಮತಿ ಸರಸ್ವತಿ ಎಫ್ ಬುಟ್ಟಣ್ಣವರ್, ಶಿಕ್ಷಕಿಯರಾದ ಸಾವಿತ್ರಿ ಎಸ್ ಕಿರಗಿ, ಸವಿತಾ ಕಡಬಲಕಟ್ಟಿ, ಮಂಜುಳಾ ಚಂಪಲ್ಲೆ, ಉಮಾ ಸಂಗನಾಳ, ಮೇಘಾ ನಾಲ್ವಾತ್ತವಾಡ್, ಕೀರ್ತಿ ಹೆಗ್ಗಣ್ಣವರ್, ನಿರ್ಮಲಾ ಬಡಿಗೇರ್ ಸೇರಿದಂತೆ ಪದವಿ ಪೂರ್ವ ವಿಭಾಗದ ಮತ್ತು ಐಟಿಐ ವಿಭಾಗದ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವುದರ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ವರದಿ ಮಲ್ಲಪ್ಪ

Related posts

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ -ಭ್ರಷ್ಟಾಚರ ನಿಗ್ರಹ ದಳ.ಮೀರಿದ ಸಂಪತ್ತು ಇರೋ ಆರೋಪಗಳು ಕೇಳಿ ಬಂದ ಹಿನ್ನೆಲೆ ದಾಳಿ

satyadarshana

ಒಳಮೀಸಲಾತಿಯ ಒಳಜಗತ್ತು – ಒಳಮೀಸಲಾತಿಯ ಚೆಂಡು  ಉರುಳಿ ಬಂದಿದ್ದು ಎಲ್ಲಿಗೆ ? 

satyadarshana

ಹಣದ ವಿಚಾರಕ್ಕೆ ತಂದೆಯಿಂದಲೇ ಮಗನ ಮೇಲೆ ಬರ್ಬರ ಹಲ್ಲೆ.

satyadarshana

Leave a Comment