Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ನ.1 ರಂದು ಮನೆ ಮೇಲೆ ಕನ್ನಡದ ಬಾವುಟ ಹಾರಿಸಿ:ಎಮ್ ವಾಯ್ ಮುಧೋಳ

 ಗದಗ :ಅ 31. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಗರದಲ್ಲಿ  ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಪ್ರತಿ ಮನೆ ಹಾಗೂ ಅಂಗಡಿಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬೇಕೆಂದು ಪಕ್ಷಾತೀತವಾಗಿ ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ಗಜೇಂದ್ರಗಡ ತಾಲ್ಲೂಕ ಜೆಡಿಎಸ್ ಅಧ್ಯಕ್ಷರಾದ  ಎಮ್ ವಾಯ್ ಮುಧೋಳ (ಸಾಗರ್) ಅವರ ನೇತೃತ್ವದಲ್ಲಿ ಕನ್ನಡ ಬಾವುಟವನ್ನು ಹಂಚಲಾಯಿತು.

ಕನ್ನಡ ರಾಜ್ಯೋತ್ಸವ ದಿನವಾದ ನ. 1 ರಂದು ಜೆಡಿಎಸ್‌ ರಾಜ್ಯಾದ್ಯಂತ ಮನೆ ಮನೆ ಮೇಲೆ ಕನ್ನಡ ಬಾವುಟ ಹರಿಸುವ ಸಂಕಲ್ಪ ಮಾಡಿದ್ದು, ರಾಜ್ಯದ ಜನ ಇದರಲ್ಲಿಪಾಲ್ಗೊಳ್ಳುವಂತೆ ಮನವಿ ಮಾಡಿದೆ.


ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಷು ಕರನಾಚಿ, ಅಬ್ದುಲ್ ರಜಾಕ್ ಸರಕಾವಸ್, ಸಂಗಪ್ಪ ಯಲಬುಣಚಿ, ರವಿ ಮೋಹಿತೆ, ಬಸಣ್ಣ ಪಟ್ಟೇದ, ಮಹಿಳಾ ಮುಖಂಡರಾದ ರೇಖಾ ಜಾಡಬಂಡಿ ಹಾಗೂ ಮಂಜುಳಾ ಛಲವಾದಿ ಅವರು ಉಪಸ್ಥಿತರಿದ್ದರು

Related posts

ಕೊಪ್ಪಳ ಜಿಲ್ಲೆ: ವಿವಿಧೆಡೆ ದಾಳಿ; ದಾಖಲೆ ಇಲ್ಲದ ಹಣ ವಶಕ್ಕೆ.

satyadarshana

ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಬೆಳಗಾವಿ ಅಧಿವೇಶನದಲ್ಲಿ ಬೃಹತ್ ಹೋರಾಟ ಬಂಗ್ಲೆ ಮಲ್ಲಿಕಾರ್ಜುನ್ ಎಚ್ಚರಿಕೆ

satyadarshana

ಭಗ್ನಗೊಂಡಿದ್ದ ಸಂಗೊಳ್ಳಿ ರಾಯಣ್ಣ ಮೂರ್ತಿ‌ ಮರುಪ್ರತಿಷ್ಠಾಪನೆ…

satyadarshana

Leave a Comment