Satya Darshana
ಬಿಸಿ ಬಿಸಿ ಸುದ್ದಿ
ಕ್ರೀಡೆಬಿಸಿ ಬಿಸಿ ಸುದ್ದಿ

ಭಾರತ ತಂಡಕ್ಕೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ.ವಿವಿಎಸ್ ಲಕ್ಷ್ಮಣ್

ನವದೆಹಲಿ (ಪಿಟಿಐ): ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಹಂಗಾಮಿ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ರಾಹುಲ್ ದ್ರಾವಿಡ್ ಅವರಿಗೆ ಕೋವಿಡ್ ಆಗಿರುವುದರಿಂದ ಟೂರ್ನಿಗೆ ತೆರಳುತ್ತಿಲ್ಲ. ಅವರ ಸ್ಥಾನಕ್ಕೆ ಲಕ್ಷ್ಮಣ್ ಅವರನ್ನು ನೇಮಕ ಮಾಡಲಾಗಿದೆ.

‘ಜಿಂಬಾಬ್ವೆಯಲ್ಲಿ ಈಚೆಗೆ ನಡೆದ ಏಕದಿನ ಸರಣಿಯಲ್ಲಿ ಆಡಿದ ಭಾರತ ತಂಡಕ್ಕೂ ಲಕ್ಷ್ಮಣ್ ಕೋಚ್ ಆಗಿ ತೆರಳಿದ್ದರು. ಇದೀಗ ದ್ರಾವಿಡ್ ಅವರು ಕೋವಿಡ್‌ ನಿಂದಾಗಿ ತಂಡದೊಂದಿಗೆ ತೆರಳುತ್ತಿಲ್ಲ. ಲಕ್ಷ್ಮಣ್ ಅವರನ್ನು ಹಂಗಾಮಿಯಾಗಿ ನೇಮಕ ಮಾಡಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.

‘ದ್ರಾವಿಡ್ ಅವರು ಕೋವಿಡ್‌ನಿಂದ ಚೇತರಿಸಿಕೊಂಡ ನಂತರ ಹಾಗೂ ನೆಗೆಟಿವ್ ವರದಿ ಬಂದ ನಂತರ ದುಬೈಗೆ ತೆರಳುವರು. ತಂಡವನ್ನು ಸೇರಿಕೊಳ್ಳುವರು’ ಎಂದು ಬಿಸಿಸಿಐ ವೈದ್ಯಕೀಯ ಸಮಿತಿ ತಿಳಿಸಿದೆ

Related posts

ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ. ಪ್ರಗತಿ ಪರಿಶೀಲನೆ ನಿಗದಿಪಡಿಸಿದ ಗುರಿ ಸಾಧಿಸಲು ಸೂಚನೆ

satyadarshana

ತನಿಖಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು

satyadarshana

ಕಳಪೆ ಕಾಮಗಾರಿ ತಪಾಸಣೆಗೆ ಆಗ್ರಹ.

satyadarshana

Leave a Comment