Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕ್ಷುಲ್ಲಕ ಕಾರಣಕ್ಕೆ ಗಲಾಟೆ, ವ್ಯಕ್ತಿ ಮೇಲೆ ಹಲ್ಯೆ.

 

ಗದಗ:   ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ವಾರ್ಡ್ ನಂಬರ್ 4 ರ ಎಸ್ ಟಿ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಜಾತಿಗಳ ಜನರ ನಡುವೆ ಗಲಾಟೆ ಸಂಭವಿಸಿದೆ.

      ಸೂಡಿ ಗ್ರಾಮ ಪಂಚಾಯಿತಿಯ ಎಸ್ಟಿ ಕಾಲೋನಿಯಲ್ಲಿ ಗಟಾರ ನಿರ್ಮಾಣ ಕಾಮಗಾರಿಯನ್ನು ಮಾಡಬೇಕಾಗಿತ್ತು. ಆದರೆ ಇಲ್ಲಿ ಭಜಂತ್ರಿ ಎಂಬುವವರು ಸರಕಾರಿ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದರಿಂದ ಮುಂದಿನ ಮನೆಯ ಮುಂದೆ ಸಂಪೂರ್ಣ ನೀರು ನಿಂತು ಮನೆಯ ಮುಂದೆ ಚಿಕ್ಕ ಕೊಳ ನಿರ್ಮಾಣವಾಗಿದ್ದರಿಂದ ತೊಂದರೆಗೊಳಗಾದ ಶರಣಪ್ಪ ಮಾದರ್ ಇನ್ನಿತರರು ಬಜಂತ್ರಿಯವರಿಗೆ ತಿಳಿ ಹೇಳಲು ಹೋದಾಗ ಶರಣಪ್ಪ ಮತ್ತು ಇನ್ನಿತರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

     ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶರಣಪ್ಪ ಮಾದರಗೆ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಗ್ರಾಮಪಂಚಾಯತಿಯ pdo ಇಟಗಿ ಮಠ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ನಾನು ರಜೆ ಮೇಲೆ ಇದ್ದೇನೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಅವೈಜ್ಞಾನಿಕ ಕಾಮಗಾರಿಗಳಿಗೆ ಆಸ್ಪದ ಕೊಟ್ಟು ಜನರ ನಡುವೆ ಜಗಳಗಳನ್ನು ತಂದಿಡುವ ಆಡಳಿತ ಮಂಡಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ.

Related posts

“ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ”  

satyadarshana

ಪದ್ಮಶ್ರೀ ಹರೇಕಳ ಹಾಜಬ್ಬ ನಾಡು ಕಂಡ ಓರ್ವ ಅಪೂರ್ವ ಸಾಧಕ..

satyadarshana

ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ: ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಆತಂಕ -ಸಾಮಾನ್ಯ ಜನರ ರಕ್ಷಣೆ ಹೇಗೆ ಸಾಧ್ಯ

satyadarshana