Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಕೋಟೆ ನಾಡಿನ ಹಿರಿಯ ಪತ್ರಕರ್ತ ಪಾಂಡುರಂಗ ಶಿಲುವೇರಿ ನೆನಪು ಮಾತ್ರ.

ಗಜೇಂದ್ರಗಡಸತ್ಯ ದರ್ಶನ ( ಮೇ -29).

ಕೋಟೆನಾಡಿನ ಹಿರಿಯ ಪತ್ರಕರ್ತ ಪಾಂಡುರಂಗ ಶೀಲವೇರಿ ಇಂದು ಗಜೇಂದ್ರಗಡದ ನೇಕಾರ ಕಾಲೋನಿಯ(ಗಂಜಿ ಪೇಟೆ) ತಮ್ಮ ಸ್ವಗೃಹದಲ್ಲಿ ಅಸ್ಥoಗತರಾಗಿದ್ದು. ದಿನಾಂಕ 30-05-2023 ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಅಂತ್ಯಸಂಸ್ಕಾರ ನೆರೆವೇರಿಸಲಾಗುವುದು ಎಂದು ಕುಟುಂಬಸ್ಥರು  ಅರಳಿದ ಪ್ರತಿಭೆಯಾಗಿರುವ ಶ್ರೀಯುತ ಪಾಂಡುರಂಗ ಶೀಲವೇರಿ.ನೇಕಾರಿಕೆ, ಹೋಟೆಲ್ ಮಾಣಿಯಾಗಿ, ನಾಟಕ ಕಲಾವಿದನಾಗಿ, ಪುರಸಭೆ ಸದಸ್ಯರಾಗಿ ನಂತರ ಹವ್ಯಾಸಿ ಬರಹಗಾರನಾಗಿ ತಮ್ಮ ಪತ್ರಿಕಾ ವೃತ್ತಿ ಆರಂಭಿಸಿ, ಕಾಲಕಾಲೇಶ್ವರ ಪತ್ರಿಕೆ, ಚಕ್ರವರ್ತಿ, ಹಸಿರು ಕ್ರಾಂತಿ ಹಾಗೂ ತಮ್ಮ ಸಂಪಾದಕೀಯದ “ನಿಗೂಢ ಭಾರತ ” ಮೂಲಕ ತಮ್ಮ ಬರವಣಿಗೆ ಛಾಪು ಮೂಡಿಸಿದ್ದಾರೆ.

ಅನೇಕ ಜನಪರ ಹೋರಾಟಗಳ ಮೂಲಕ ಪ್ರಖ್ಯಾತಿ ಹೊಂದಿದ್ದು. ಸದಾ ಹಾಸ್ಯ ಚಟಾಕಿಯ ಮೂಲಕ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿದ್ದಾರೆ. ಅನೇಕ ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶಕರಾಗಿ ಅವಿಸ್ಮರಣೀಯರಾಗಿದ್ದಾರೆ.

Related posts

ಪೊಲೀಸ್‌ ಠಾಣೆ ಮುಂದೆ ಮತಪಟ್ಟಿ ಸಂಘರ್ಷ, ಇಡೀ ದಿನ ಹೈಡ್ರಾಮಾ..!

satyadarshana

ಅಂತರ್ ವಿಭಾಗೀಯ ವ್ಹಾಲಿಬಾಲ್ ಪಂದ್ಯಾವಳಿ

satyadarshana

ಒಳಮೀಸಲಾತಿ ವರ್ಗೀಕರಣದ ರೋಸ್ಟರ್ ಬಿಂದು ರದ್ದುಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ .

satyadarshana

Leave a Comment