Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ರೈತರಿಗೆ ತಲುಪುತ್ತಿಲ್ಲ ಸರ್ಕಾರದ ಯೋಜನೆಗಳು, ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ,

ಬೆಂಗಳೂರು ,(ಜೂ.6)-ಇದು ಇಲಾಖೆಯ ಕಾರ್ಯ ನಿರ್ವಹಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಇದರಿಂದ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ ಮತ್ತು ರೈತರಿಗೆ ದೊಡ್ಡ ಸಂಖ್ಯೆಯಲ್ಲಿ ಪರಿಣಾಮ ಬೀರಿದೆ.ವಿವಿಧ ವೃಂದಗಳ ಇಲಾಖೆಯ ಮಂಜೂರಾದ ಸಿಬ್ಬಂದಿ ಸಂಖ್ಯೆ 9,007 ಹುದ್ದೆಗಳಾಗಿದ್ದು, ಅದರಲ್ಲಿ 4,020 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಅಂದರೆ ಶೇಕಡಾ 44ರಷ್ಟು ಸಿಬ್ಬಂದಿ ಮಾತ್ರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಪ್ರಸಕ್ತ ವರ್ಷ ಮುಂಗಾರು ಆರಂಭಗೊಂಡಿದ್ದು, ಈ ವರ್ಷ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ರೈತರೇನೋ ಹರ್ಷಗೊಂಡಿದ್ದಾರೆ. ಆದರೆ ರಾಜ್ಯ ಕೃಷಿ ಇಲಾಖೆಯ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಶೇಕಡಾ 50ಕ್ಕಿಂತ ಕಡಿಮೆ ನೌಕರರು ಕೆಲಸ ಮಾಡುತ್ತಿರುವ ಕೃಷಿ ಇಲಾಖೆಯು ತೀವ್ರ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಅವುಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಸಿ ನೌಕರರು ಪ್ರಮುಖರಾಗಿರುತ್ತಾರೆ.

ಹೆಚ್ಚಿನ ಖಾಲಿ ಹುದ್ದೆಗಳು ಈ ಎರಡುಕೇಡರ್‍ಗಳಿಂದ ಬಂದವುಗಳಾಗಿವೆ. ಗ್ರೂಪ್ ಬಿ ಕೇಡರ್‍ನಲ್ಲಿ 4,091 ಮಂಜೂರಾದ ಹುದ್ದೆಗಳಲ್ಲಿ 1,781 ಮಾತ್ರ ಭರ್ತಿಯಾಗಿದೆ.

300 ಜನರನ್ನು ನೇಮಿಸಿಕೊಳ್ಳುವ ರಾಜ್ಯ ಸರ್ಕಾರದ ಕ್ರಮವು ವಾಸ್ತವಿಕವಾಗಿ ಅಗತ್ಯವಿರುವ ಸಾಮಥ್ರ್ಯಕ್ಕಿಂತ ಕಡಿಮೆ ಇರುವುದರಿಂದ ಅಷ್ಟೇನೂ ವ್ಯತ್ಯಾಸವನ್ನುಂಟು ಮಾಡುತ್ತಿಲ್ಲ. ಕರ್ನಾಟಕದಲ್ಲಿ ಸುಮಾರು 750 ರೈತ ಸಂಪರ್ಕ ಕೇಂದ್ರಗಳಿವೆ , ಹೋಬಳಿ ಮಟ್ಟದಲ್ಲಿ ಕನಿಷ್ಠ ಒಂದನ್ನು ಹೊಂದಿದೆ. ಪ್ರತಿ ಆರ್‍ಎಸ್‍ಕೆಯು ಸಹಾಯಕ ಕೃಷಿ ಅಕಾರಿ ಮತ್ತು ಕೃಷಿ ಸಹಾಯಕರನ್ನು ಹೊಂದಿರಬೇಕು, ಅವರು ಹಳ್ಳಿಗಳಲ್ಲಿ ಅಂತಿಮ ಫಲಾನುಭವಿ ತಲುಪುವಲ್ಲಿ ನಿರ್ಣಾಯಕರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ. ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲು 500 ಕೋಟಿ ರೂ. ಮಂಜೂರು ಮಾಡುವ ಮೂಲಕ ರೈತ ಶಕ್ತಿ ಯೋಜನೆಯನ್ನೂ ಘೋಷಿಸಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಮತ್ತು ಸಂಬಂತ ವಲಯಗಳಿಗೆ 33,700 ಕೋಟಿ ರೂಪಾಯಿ, ಕೃಷಿ ಯಂತ್ರೋಪಕರಣಗಳ ಬಳಕೆಗೆ ಉತ್ತೇಜನ ನೀಡಲು 500 ಕೋಟಿ ರೂಪಾಯಿ ಮಂಜೂರು ಮಾಡುವ ಮೂಲಕ ರೈತ ಶಕ್ತಿ ಯೋಜನೆಯನ್ನೂ ಘೋಷಿಸಿದ್ದರು.ಸಣ್ಣ ರೈತರಿಗೆ ಪ್ರತಿ ಎಕರೆಗೆ 250 ರೂಪಾಯಿ ಡೀಸೆಲ್ ಸಬ್ಸಿಡಿಯನ್ನೂ ಸಿಎಂ

Related posts

ಗಜೇಂದ್ರಗಡ ಪ್ರಸಿದ್ಧಿಯ ಶ್ರೀ ಚೌಡೇಶ್ವರಿ ದೇವಿಯ ಮೂರ್ತಿಯೂ ಭಕ್ತರ ಅಂತರಂಗದಲ್ಲಿ ಬೆಳಕು ಮೂಡಿಸುವಂತಹ ಕಾರ್ತಿಕೋತ್ಸವ.

satyadarshana

ಮುರುಘಾ ಮಠ ಪ್ರದಾನ ಮಾಡಿದ್ದ ‘ಬಸವಶ್ರೀ ಪ್ರಶಸ್ತಿ’, 5 ಲಕ್ಷ ರೂ. ನಗದು ವಾಪಸ್‌: ಪತ್ರಕರ್ತ ಪಿ.ಸಾಯಿನಾಥ್;

satyadarshana

ಗೌತಮ ಬುದ್ದ ಏಷಿಯಾದ ಬೆಳಕು: ಕೆ ರಾಘವೇಂದ್ರ ಹಿಟ್ನಾಳ

satyadarshana

Leave a Comment