Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಚೆಣೆ…

ಸತ್ಯದರ್ಶನ

 ಗದಗ: ಆಧುನಿಕತೆಯ ಬರಾಟೆಯಲ್ಲಿ ಜನಜಂಗುಳಿ ಹೆಚ್ಚಿದಂತೆ ಅಪರಾಧಗಳ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಗ್ರಾಮೀಣ ಪ್ರದೇಶದಿಂದ ಬರುವ ರೈತಾಪಿ ವರ್ಗ ತಮ್ಮ ವಾಹನ ಇಲ್ಲವೇ ಕಾಳು-ಕಡಿ ಅವುಗಳ ಮಾರಟದಿಂದ ಬಂದ ಹಣ ಇತ್ಯಾದಿಗಳು ಹರಿವಿಲ್ಲದೆ ಕಳ್ಳತನವಾಗುವ ಸಾದ್ಯತೆ ಇರುತ್ತದೆ. ಇಂತಹ ಅಪರಾಧಗಳನ್ನು ತಡೆಹಿಡಿಯಬೇಕೆನ್ನುವ ನಿಟ್ಟಿನಲ್ಲಿ ಅಪರಾಧ ತಡೆ ಮಾಸಚರಣೆ ಹಮ್ಮಿಕೊಂಡಿದ್ದು ಸರ್ವರೂ ಜಾಗೃತ ಮನೋಭಾವದಿಂದ ನಡೆದುಕೊಂಡಾಗ ಇಂತಹ ಮಾಸಚರಣೆಗೆ ಬೆಲೆ ಬರುತ್ತದೆ. ಈ ದಿಸೆಯಲ್ಲಿ ಗಜೇಂದ್ರಗಡ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಚೆಣೆಯಲ್ಲಿ ಗಜೇಂದ್ರಗಡದ ಬಸ್ ನಿಲ್ದಾಣದ ಜನಜಂಗುಳಿಯಲ್ಲಿ, ಆಟೋಚಾಲಕರ ಸಂಘದ ಅಡಿಯಲ್ಲಿ, ಎಪಿಎಂಸಿ ಯಾರ್ಡಿನ ರೈತ ಸಮೂಹದಲ್ಲಿ ಈ ಮಾಸಚರಣೆ ಅಂಗವಾಗಿ ಅಪರಾಧ ತಡೆ ಕುರಿತು ಜಾಗೃತಿಯನ್ನು ಮೂಡಿಸಲಾಯಿತು.

   ಗಜೇಂದ್ರಗಡ ಪೋಲಿಸ್ ಠಾಣೆಯ ಪಿಎಸ್ಐ ಸಂಗಳದ ಮಾತನಾಡಿ ಕರ್ತವ್ಯ ಜಾಗೃತಿಯನ್ನು ಮರೆತು ಶೋಷಣೆಗೆ ಗುರಿಯಾಗಿ ಅನ್ಯರು ತಪ್ಪನ್ನೆಸಗುವ ಮನೋಭಾವ ಇವೆಲ್ಲಾ ಅಪರಾಧಗಳು. ಇಂತಹ ಮೋಸಕ್ಕೆ ಬಲಿಯಾಗದ ಹಾಗೆ ಸಾರ್ವಜನಿಕರನ್ನು ಜಾಗೃತಗೊಳಿಸುವುದೇ ಅಪರಾಧ ತಡೆ ಮಾಸಚರಣೆಯಾಗಿದೆ. ಇಂತಹ ಮಾಹಿತಿಯನ್ನು ತಿಳಿದು ಸರ್ವರು ಜಾಗೃತರಾಗುವಂತೆ ಕರೆ ಕೊಟ್ಟರು.

   ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಸರ್ವ ಸಿಬ್ಬಂದಿಯವರು ಉಪಸ್ಥಿತರಿದ್ದರು.

Related posts

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ

satyadarshana

ಬಸವ ಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಶ್ರೀಮತಿ ಸುಜಾತ ಪಾಟೀಲ ಆಯ್ಕೆ

satyadarshana

ಡಿಬೇಟ್ : ಜೆಡಿಎಸ್, ಕಾಂಗ್ರೆಸ್‌ ಮೈತ್ರಿ ಬಗ್ಗೆ ನಿಮ್ಮ ಅಭಿಪ್ರಾಯವೇನು

cradmin

Leave a Comment