Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಬಾಗಲಕೋಟೆ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರ 400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರ

ಸತ್ಯದರ್ಶನ
ಬಾಗಲಕೋಟೆ :-ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ 400 ಕಿಲೋ ವ್ಯಾಟ್‌ನ 1 ವಿದ್ಯುತ್ ಸ್ವೀಕರಣಾ ಕೇಂದ್ರ ಮತ್ತು 110 ಕಿಲೋ ವ್ಯಾಟ್ ಸಾಮಾರ್ಥ್ಯದ 5 ಕೇಂದ್ರ ಸೇರಿದಂತೆ ಒಟ್ಟು 6 ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆಗೆ ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಅನುಮೋದನೆ ನೀಡಿದೆ.
ಲೋಕಾಪೂರದಲ್ಲಿ 400 ಕಿ. ವ್ಯಾ. ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರ ನಿರ್ಮಾಣವಾಗಲಿದ್ದು, ಹೆಬ್ಬಾಳ, ಮುಗಳಖೋಡ, ಮಾಚಕನೂರು, ಮಲ್ಲಾಪೂರ ಮತ್ತು ಮಂಟೂರು ಕ್ರಾಸ್‌ಗಳಲ್ಲಿ 110 ಕಿ. ವ್ಯಾ, ಸಾಮರ್ಥ್ಯದ 5 ವಿದ್ಯುತ್ ವಿತರಣಾ ಕೇಂದ್ರಗಳನ್ನು ಒಟ್ಟು 60.25 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
400 ಕಿ. ವ್ಯಾ. ಸಾಮರ್ಥ್ಯದ ಲೋಕಾಪೂರ ವಿದ್ಯುತ್ ಸ್ವೀಕರಣಾ ಕೇಂದ್ರವನ್ನು ರೂ. 800 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 23 ವಿದ್ಯುತ್ ವಿತರಣಾ ಕೇಂದ್ರಗಳನ್ನು ಅನುಮೋದಿಸಲಾಗಿದ್ದು, ರೂ. 1,320 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಇಂಧನ ಇಲಾಖೆ ತಿಳಿಸಿದೆ.
ಮುಧೋಳ ನಗರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಪೊಲೀಸ್ ವಸತಿ ಗೃಹಗಳ ಪುನರ್ ನಿರ್ಮಾಣ ಕಾರ್ಯವನ್ನು ರಾಜ್ಯ ಪೊಲೀಸ್ ವಸತಿ ನಿಗಮದಿಂದ ಕೈಗೆತ್ತಿಕೊಳ್ಳಲಾಗಿದೆ. 48 ಪೊಲೀಸ್ ವಸತಿ ಗೃಹಗಳನ್ನು ರೂ. 15 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗುವುದೆಂದು ಪೊಲೀಸ್ ಇಲಾಖೆ ತಿಳಿಸಿದೆ. ಇದರಿಂದ ನನಗೆ ಹರ್ಷವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು ಈ ವಿದ್ಯುತ್ ವಿತರಣಾ ಕೇಂದ್ರಗಳು ಮತ್ತು ಸ್ವೀಕರಣಾ ಕೇಂದ್ರಗಳು ಸಹಾಯ ಮಾಡುತ್ತವೆ. ಇದರಿಂದ ನನಗೆ ಹರ್ಷವಾಗಿದೆ ಎಂದು ಜಲಸಂಪನ್ಮೂಲ ಸಚಿವ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ಸಂತಸ ವ್ಯಕ್ತಪಡಿಸಿದ್ದಾರೆ.

Related posts

ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ * ಅಂಜನಾದ್ರಿ ಬೆಟ್ಟಕ್ಕೆ ಕೇಂದ್ರ ಸಚಿವರ ಭೇಟಿ: ವಿಶೇಷ ಪೂಜೆ

satyadarshana

ದಮ್ಮೂರ: ಶ್ರೀ ಭೀಮಾಂಬಿಕಾದೇವಿ ಮಠದಲ್ಲಿ ೩೭೨ ನೇ ಶಿವಾನುಭವ ಗೋಷ್ಠಿ 

satyadarshana

ತನಿಖಾಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು

satyadarshana

Leave a Comment