Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಯಾದಗಿರಿ ಹಾಸ್ಟೆಲ್‌ನಲ್ಲಿ ಉಪ್ಪಿಟ್ಟು ಸೇವಿಸಿದ್ದ 56 ವಿದ್ಯಾರ್ಥಿಗಳು ಅಸ್ವಸ್ಥ

ಸತ್ಯ ದರ್ಶನ

ಯಾದಗಿರಿ: ಹಾಸ್ಟೆಲ್‌ನಲ್ಲಿ ಉಪ್ಪಿಟ್ಟು ಸೇವಿಸಿದ್ದ 56 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ತಾಲೂಕಿನ ಅಬ್ಬೆತುಮಕೂರಿನ ವಿಶ್ವರಾಧ್ಯ ವಿದ್ಯಾವರ್ಧಕ ವಸತಿ ಶಾಲೆಯಲ್ಲಿ ನಡೆದಿದೆ. ಉಪಹಾರದಲ್ಲಿ ಹಾವಿನ ಕಳೆಬರಹ ಪತ್ತೆ ಆಗಿರೋದು ಕಂಡು ಬಂದಿದೆ . ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ಮಾಡಲಾಗಿತ್ತು . ಉಪಹಾರ ಸೇವಿಸಿದ 56 ವಿದ್ಯಾರ್ಥಿಗಳು ಕೂಡ ಅಸ್ವಸ್ಥಗೊಂಡಿದ್ದಾರೆ . ಹಾವಿನ ಮರಿ ಸತ್ತಿರೋದು ಪತ್ತೆಯಾದ ಬಳಿಕ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ . ಅಸ್ವಸ್ಥಗೊಂಡ 56 ರಿಂದ ಮುದ್ದಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು . ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ . ಇನ್ನು ಘಟನೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಭೇಟಿ

ಇಂದು ಬೆಳಗ್ಗೆ ವಿದ್ಯಾರ್ಥಿಗಳಿಗೆ ಮಾಡಲಾಗಿದ್ದ ಉಪ್ಪಿಟ್ಟಿನಲ್ಲಿ ಹಾವಿನ ಮರಿ ಬಿದ್ದಿದೆ. ಆದರೆ, ಅದನ್ನು ಗಮನಿಸದ ಸಿಬ್ಬಂದಿ ಹಾಗೇ ಮಕ್ಕಳಿಗೆ ಉಪಾಹಾರ ಬಡಿಸಿದ್ದರಿಂದ ಅದನ್ನು ಸೇವಿಸಿದ ಮಕ್ಕಳು ವಾಚಿತಿ, ಬೇಯೊಂದಿಗೆ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಎಲ್ಲರನ್ನೂ ಮುದ್ನಾಳ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಅಗತ್ಯ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಯಾವುದೇ ವಿದ್ಯಾರ್ಥಿಗೆ ಪ್ರಾಣಾಪಾಯವಿಲ್ಲ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂರ್ತಿ, ಟಿಎಚ್‍ಒ ಹನುಮಂತ ರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

Related posts

ಡಿ.ದೇವರಾಜ ಅರಸು ಭವನ ಹಾಗೂ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಲೋಕಾರ್ಪಣೆ

satyadarshana

ಕರ್ನಾಟಕ ಈ ಬಾರಿ ಯಾರಿಗೆ ಅಧಿಕಾರ..?

satyadarshana

ಐಎಂಎ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ; ಸಮಾಜಕ್ಕೆ ಮರಳಿ ಕೊಡುವ ವೈದ್ಯರ ಸೇವೆ ಶ್ಲಾಘನೀಯ ಜಿಲ್ಲಾಧಿಕಾರಿ ಸಿ ಎನ್. ಶ್ರೀಧರ

satyadarshana

Leave a Comment