Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಗಜೇಂದ್ರಗಡ ಜೆಡಿಎಸ್ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮತ್ತು ಶಾಸ್ತ್ರೀಜೀ ಜಯಂತಿ ಆಚರಣೆ.

ಸುದ್ದಿಮೂಲ ಸತ್ಯದರ್ಶನ

ಇಂದು ದಿನಾಂಕ 02.10.2021 ರಂದು ಗಜೇಂದ್ರಗಡ ನಗರದಲ್ಲಿ ಜೆಡಿಎಸ್ ಪಕ್ಷದ ತಾಲ್ಲೂಕ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ 152ನೇ ಜಯಂತಿ ಹಾಗೂ ನಮ್ಮ ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ 117ನೇ ಜಯಂತಿಯನ್ನು ತಾಲೂಕು → ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಕ್ತುಮ್ ಸಾಬ್ ವಾಯ್ ಮುಧೋಳ (ಸಾಗರ್) ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಶ್ರೀ ಲಕ್ಷ್ಮಣ್ ತಳವಾರ, ಶ್ರೀ ಸಂಗಪ್ಪ ಯಲಬುಣಚಿ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು. ಗಾಂಧೀಜಿಯವರ ಕುರಿತು ◊ಮಾತನಾಡಿದರು

ಬ್ರಿಟೀಷ್ ಭಾರತದಲ್ಲಿ ಗಾಂಧಿ ಯಾವ ವಿಚಾರಗಳನ್ನೆಲ್ಲಾ ಎದುರಿಸಿ ಬಂದೂಕಿಗೆ ಸಮನಾಗಿ ಸತ್ಯವನ್ನು ಮುಂದಿರಿಸಿ ಹೋರಾಟ ನಡೆಸಿದ್ದರೋ ಅವೆಲ್ಲವೂ ಇಂದು ಪರೋಕ್ಷವಾಗಿ ಮತ್ತೆ ದೇಶದೊಳಗೆ ಕಾಲಿಟ್ಟಿವೆ. ಆ ಮೂಲಕ ಬಾಪು ನಂತರದ ಭಾರತದಲ್ಲಿ ಮತ್ತೆ ಭಾರತ ತನ್ನ ಸ್ವರಾಜ್ಯವನ್ನು ಕಳೆದುಕೊಂಡು ನವ ವಶಾಹತುಶಾಹಿಗೆ ಒಳಪಟ್ಟಿದೆ. ಹೀಗೆ ಭಾರತೀಯರಾದ ನಾವು ಗಾಂಧಿಯನ್ನು ಕೊಂದು ಉಳಿಸಿಕೊಂಡದ್ದು ಮತ್ತದೇ ದಾಸ್ಯ, ಭಾರತೀಯರಿಗೆ ಇದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ.

ಜಗತ್ತಿನಲ್ಲಿ ಕೊಂದು ಉಳಿಸಿಕೊಳ್ಳುವ ಧರ್ಮವಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವುದೇ ಹಿಂದುತ್ವ ಎಂದು ಸಾರಿದ್ದ, ತನ್ನ ಬದುಕಿನುದ್ದಕ್ಕೂ ಸತ್ಯ ಅಹಿಂಸೆಯೇ ಮೂಲಧ್ಯೇಯ ಎಂದು ನಂಬಿ ಬದುಕಿದ್ದ, ವಿಶ್ವಕ್ಕೆ ಶಾಂತಿಯನ್ನು ಪ್ರೀತಿಯನ್ನು ಹಂಚಿ ಉಂಡಿದ್ದ ಮಹಾತ್ಮ ಗಾಂಧೀಗೆ ಭಾರತೀಯರು ಕೊನೆಗೆ ನೀಡಿದ್ದು ಕೇವಲ ನೋವನ್ನಷ್ಟೆ.

ಪ್ರಸ್ತುತ ಭಾರತ ಭಾರತವಾಗಿ ಉಳಿದಿಲ್ಲ. ಇಡೀ ಭಾರತ ಖಂಡ ತನ್ನ ತನವನ್ನು, ಸಂಸ್ಕೃತಿಯನ್ನು ಕಳೆದುಕೊಂಡಿದೆ. ಕೋಮು ಸೌಹಾರ್ದತೆ ಕಣ್ಮರೆಯಾಗಿದೆ. ಬಹುರಾಷ್ಟ್ರೀಯ ಕಂಪೆನಿಗಳ ದುರಾಸೆಗೆ ತಲೆಕೊಟ್ಟಿರುವ ಭಾರತದ ಗ್ರಾಮಗಳು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿವೆ. ಇಂದು ಇಡೀ ಭಾರತದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಹ ಗಾಂಧೀ ಕನಸಿನ ಭಾರತೀಯತೆ ಸಿಗುವುದಿಲ್ಲವೇನೋ..? ಈಗ ಹೇಳಿ ಮಹಾತ್ಮಾ ಗಾಂಧೀಯನ್ನು ಕೊಂದು ನಾವು ಪಡೆದದ್ದಾದರೂ ಏನು.

Related posts

ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಕೊಡಮಾಡುವ 20.22ನೇ ಸಾಲಿನ ಬಿ ಕೆ ಮಾದಿ ಪತ್ರಕರ್ತರತ್ನ ಪ್ರಶಸ್ತಿಗೆ ಆಯ್ಕೆ

satyadarshana

ಅರ್ಜಿ ಆಹ್ವಾನ

satyadarshana

ಗಜೇಂದ್ರಗಡ ತಾಲೂಕ ಕುರಬರ ಸಂಘದ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಅಂದಪ್ಪ ಬಿಚ್ಚೂರ, ಕಾರ್ಯದರ್ಶಿಯಾಗಿ ಕೆ.ಎಸ್.ಕೊಡತಗೇರಿ ನೇಮಕ

satyadarshana

Leave a Comment