Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಘೋಷಣೆ ಬೆನ್ನಲ್ಲೇ ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಬಿಜೆಪಿ ಟಿಕೆಟ್​ಗಾಗಿ ಕಸರತ್ತು

ಸುದ್ದಿಮೂಲ ಸತ್ಯದರ್ಶನ
ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಘೋಷಣೆ ಬೆನ್ನಲ್ಲೇ ಸಿ.ಎಂ. ಉದಾಸಿ ಪುತ್ರ ಶಿವಕುಮಾರ್ ಉದಾಸಿ ಬಿಜೆಪಿ ಟಿಕೆಟ್​ಗಾಗಿ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಶಿವಕುಮಾರ್ ಉದಾಸಿ ಅಥವಾ ಅವರ ಪತ್ನಿ ರೇವತಿ ಶಿವಕುಮಾರ್ ಉದಾಸಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಡ ಹಾಕಿದ್ದಾರಂತೆ..
ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರ ತಮ್ಮ ಕುಟುಂಬದ ಹಿಡಿತದಲ್ಲಿಯೇ ಇರಬೇಕೆಂದು ಉದಾಸಿ ಕುಟುಂಬ ಶ್ರಮಿಸುತ್ತಿದೆ ಎನ್ನಲಾಗಿದೆ. ಶಿವಕುಮಾರ್ ಉದಾಸಿ ಹಾಲಿ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆ ಎದುರಾಗುವ ಮುನ್ನವೇ ಹೈಕಮಾಂಡ್ ನಾಯಕರು ಹಾಗೂ ರಾಜ್ಯದ ನಾಯಕರ ಜೊತೆಗೆ ಟಿಕೆಟ್‌ಗಾಗಿ ಶಿವಕುಮಾರ್ ಉದಾಸಿ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ.
ಸದ್ಯ ಅಕ್ಟೋಬರ್ 30 ಕ್ಕೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ- ಚುನಾವಣೆ ನಡೆಯಬೇಕೆಂಬ ಘೋಷಣೆ ಹಿನ್ನೆಲೆ. ಟಿಕೆಟ್‌ಗಾಗಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹೈಕಮಾಂಡ್ ನಾಯಕರು ಸೇರಿದಂತೆ ಎಲ್ಲಾ ಕಡೆಯಿಂದ ಶಿವಕುಮಾರ್ ಉದಾಸಿ ಪ್ರಯತ್ನ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ.

Related posts

ಉತ್ತರ ಕರ್ನಾಟಕದಲ್ಲೊಂದು ಲವ್ ಧೋಕಾ.

satyadarshana

ಕಕಿ೯ಹಳ್ಳಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಪಾಲಕರ ಸಭೆ ಶೈಕ್ಷಣಿಕ ಬೆಳವಣಿಗಗೆ ಪಾಲಕರ ಪಾತ್ರ ಬಹುಮುಖ್ಯ

satyadarshana

ಸೇವೆಯ ಅಕ್ಷಯಪತ್ರೆ ಬಿದರೂರ..

satyadarshana

Leave a Comment