Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

2026ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಕೊಪ್ಪಳ ಏಪ್ರಿಲ್ 30 : ಜಿಲ್ಲಾಡಳಿತ ಭವನದ ಆಡಿಟೋರಿಂ ಹಾಲನಲ್ಲಿ ಏಪ್ರೀಲ್ 30ರಂದು ನಡೆದ ಸಮಾರಂಭದಲ್ಲಿ, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯ ಒದಗಿಸುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2026ನೇ ಸಾಲಿನ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ಹೆಡ್‌ಕಾನ್‌ಸ್ಟೇಬಲ್ ಹುಸೇನ್ ಬಾಷಾ, ಕುಷ್ಟಗಿಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ರಾಘವೇಂದ್ರ ಕ.ಹೊಸಳ್ಳಿ, ಕರಮುಡಿಯ ಗ್ರಾಮಾಡಳಿತ ಅಧಿಕಾರಿ ಬಾಲನಗೌಡ್ರ ದೇವರಾಜ್, ಹನುಮನಾಳ ಸಮುದಾಯ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಾರದಾದೇವಿ ತಿಮ್ಮನಟ್ಟಿ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪರಿಚಾರಕ ನೀಲಪ್ಪ ಹಡಪದ, ನವಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೀರಣ್ಣ ನಾಕರಳ್ಳಿ, ಮುಸಲಾಪುರ ಗ್ರಾಮ ಆಡಳಿತಾಧಿಕಾರಿ ಕುಮಾರ ಗದ್ದಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಹಿರಿಯ ವಾಹನ ಚಾಲಕ ಅಲ್ಲಾಭಕ್ಷ, ಹೊಸಕೇರಾ ಪಶು ಚಿಕಿತ್ಸಾಲಯದ ಪರಿಚಾರಕ ಸುಕುಮುನೆಪ್ಪ, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ಜಯಲಕ್ಷಿö್ಮÃ ನವಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ ಇಟ್ನಾಳ, ಜಿಲ್ಲಾ ಪಂಚಾಯತ್ ಸಿಇಓ ವರ್ಣಿತ್ ನೇಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಆರ್.ಜುಮ್ಮನ್ನವರ ಹಾಗೂ ಇನ್ನೀತರರು ಪ್ರಶಸ್ತಿ ಪ್ರದಾನ ಮಾಡಿದರು.

Related posts

ಮುಪ್ಪಿನ ಬಸವಲಿಂಗದೇವರ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವ ಹಾಗೂ ಲಕ್ಷದೀಪೋತ್ಸವ ಸಮಾರಂಭಕ್ಕೆ ಆಗಮಿಸಿದ ವಿಧಾನಪರಿಷತ್ ಸಭಾಪತಿ . ಬಸವರಾಜ ಹೊರಟ್ಟಿ

satyadarshana

ತುಂಬಾ ನಿರೀಕ್ಷೆಯಿಂದ ಕಾಯ್ತಿರೋ ಜೇಮ್ಸ್ ವರ್ಲ್ಡ್​ವೈಡ್​ ದಾಖಲೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶಗಳಲ್ಲಿ ಜೇಮ್ಸ್ ಅಬ್ಬರಿಸುತ್ತಿದ್ದಾನೆ.

satyadarshana

ಅನ್ನಭಾಗ್ಯ: ನಗದು ವರ್ಗಾವಣೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ವಹಿಸಿ

satyadarshana

Leave a Comment