Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಆರ್‌ಬಿಐ ನಿರ್ಮಾಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪಾತ್ರ ದೊಡ್ಡದು..

 

ಭಾರತದ ಆರ್ಥಿಕತೆಗೆ ಬುನಾದಿ ಹಾಕಿಕೊಟ್ಟ ಸಂವಿಧಾನ ಶಿಲ್ಪಿ..

ಆರ್‌ಬಿಐ ನಿರ್ಮಾಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪಾತ್ರ ದೊಡ್ಡದು

  ಬಹಳ ಜನರಿಗೆ ಈ ವಿಷಯ ಗೊತ್ತಿರುವುದಿಲ್ಲ, ಅದೇನೆಂದರೆ ಅಂಬೇಡ್ಕರ್ ಅವರು ತಮ್ಮ ವೃತ್ತಿ ಜೀವನವನ್ನ ಎಕನಾಮಿಸ್ಟ್ ಆಗಿ ಪ್ರಾರಂಭಿಸುತ್ತಾರೆ. ಅಂದಿನ ರಾಷ್ಟೀಯ ಮತ್ತು ಅಂತರರಾಷ್ಟ್ರೀಯ ಚರ್ಚೆಗಳಲ್ಲಿ ಇವರ ಹೆಸರಿಲ್ಲದೆ ಮುಕ್ತಾಯ ಕಾಣುತ್ತಿರಲಿಲ್ಲ ಎನ್ನುವಷ್ಟರ ಮಟ್ಟಿಗೆ ತಿಳಿದುಕೊಂಡವರಾಗಿದ್ದರು. ಅಂದಿನ ದಿನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಎಕಾನಮಿ ಬಗ್ಗೆ ಅಧ್ಯಯನ ಮಾಡಿದ ವ್ಯಕ್ತಿ ಅಂಬೇಡ್ಕರ್ ಎನ್ನುವುದು ನಿರ್ವಿವಾದ. ಬಾಬಾ ಸಾಹೇಬ್ ಅವರು ಒಂದಲ್ಲ ಎರಡೆರೆಡು ಯೂನಿವೆರ್ಸಿಟಿಗಳಿಂದ ಡಾಕ್ಟರೇಟ್ ಪದವಿಯನ್ನ ಪಡೆದವರು. ಅಮೆರಿಕಾದ ಕೊಲಂಬಿಯಾ ಯೂನಿವೆರ್ಸಿಟಿಯಲ್ಲಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಎಕನಾಮಿಕ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನ ಪಡೆದಿದ್ದಾರೆ. ಹೀಗಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ, ಬದಲಾಗಿ ಉನ್ನತ ಮಟ್ಟದ ಅರ್ಥಶಾಸ್ತ್ರಜ್ಞರಾಗಿದ್ದರು. ಅವರ ಆರ್ಥಿಕ ದೃಷ್ಟಿಕೋನವು ರಾಜ್ಯ ಸಮಾಜವಾದ (State Socialism), ಕೈಗಾರಿಕೀಕರಣ, ಕೃಷಿ ಸುಧಾರಣೆ ಮತ್ತು ಕಾರ್ಮಿಕರ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿತ್ತು. ದೇಶದ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತಿರುವ ತಮ್ಮ ಕಲ್ಪನೆಯ ಆರ್‌ಬಿಐ ರಚಿಸಿ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ನೀಡಿದರು

  ಭಾರತದ ಆರ್ಥಿಕ ಇತಿಹಾಸದಲ್ಲಿ ಕೆಲವು ಪ್ರಮುಖ ತಿರುವುಗಳು ದೇಶದ ಆರ್ಥಿಕ ದೃಢತೆಯನ್ನು ರೂಪಿಸಲು ಕಾರಣವಾಯಿತು. ಅಂತಹ ಮಹತ್ವದ ಘಟನೆಯಲ್ಲೊಂದು. ಭಾರತದ ಆರ್ಥಿಕ ಇತಿಹಾಸದಲ್ಲಿ “Royal Commission on Indian Currency and Finance” ಒಂದು ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ. ಈ ಆಯೋಗವನ್ನು ಸಾಮಾನ್ಯವಾಗಿ Hilton Young Commission ಎಂದು ಕರೆಯಲಾಗುತ್ತದೆ. ಇದರ ಅಧ್ಯಕ್ಷರಾಗಿದ್ದವರು Hilton Young. 1926ರಲ್ಲಿ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ನಾಣ್ಯ (Currency) ಮತ್ತು ಹಣಕಾಸು (Finance) ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಲು ಈ ಆಯೋಗವನ್ನು ರಚಿಸಿತು. ಆ ಕಾಲಘಟ್ಟದಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿಲ್ಲ. ನಾಣ್ಯ ವ್ಯವಸ್ಥೆಯಲ್ಲಿ ಏರುಪೇರುಗಳು ಹೆಚ್ಚಾಗಿದ್ದವು ಮತ್ತು ರೂಪಾಯಿ ಮೌಲ್ಯದಲ್ಲಿ ನಿರಂತರ ಬದಲಾವಣೆಗಳು ಕಂಡುಬರುತ್ತಿದ್ದವು. ಬ್ಯಾಂಕಿಂಗ್ ವ್ಯವಸ್ಥೆಯು ಸಂಘಟಿತವಾಗಿರದೆ, ಸಮರ್ಪಕ ನಿಯಂತ್ರಣದ ಕೊರತೆಯಿಂದ ಅನೇಕ ಸಮಸ್ಯೆಗಳು ಎದುರಾಗಿದ್ದವು. ಹಣದುಬ್ಬರ (Inflation), ವಿನಿಮಯ ದರದ ಅಸ್ಥಿರತೆ (Exchange Rate Instability) ಮತ್ತು ಆರ್ಥಿಕ ನಿರ್ವಹಣೆಯ ಕೊರತೆ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಿದ್ದವು1920–25 ರಲ್ಲಿ ರೂಪಾಯಿ Sterling Pound ವಿರುದ್ಧ ಸುಮಾರು 18% ಕುಸಿತ ಕಂಡಿತ್ತು. ಈ ಅಸ್ಥಿರತೆಯ ಪರಿಣಾಮವಾಗಿ ಆರ್ಥಿಕ ಬೆಳವಣಿಗೆ ತಡೆಗೊಳ್ಳುತ್ತಿತ್ತು.. ಈ ಸಮಸ್ಯೆಗಳನ್ನು ಪರಿಹರಿಸಲು ಬ್ರಿಟಿಷ್ ಸರ್ಕಾರವು ತಜ್ಞ ಸಮಿತಿಯ ಅಗತ್ಯವಿದೆ ಎಂದು ಭಾವಿಸಿ ಈ ಆಯೋಗವನ್ನು ನೇಮಿಸಿತು.

Hilton Young Commissionನ ಮುಖ್ಯ ಉದ್ದೇಶಗಳು ದೇಶದಲ್ಲಿ ಹಣಕಾಸು ಸ್ಥಿರತೆ ಸಾಧಿಸುವುದು, ನಾಣ್ಯ ವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ಬ್ಯಾಂಕಿಂಗ್ ಕ್ಷೇತ್ರವನ್ನು ಸಂಘಟಿತಗೊಳಿಸುವುದಾಗಿತ್ತು. ಆಯೋಗವು ಭಾರತದ ಆರ್ಥಿಕ ಸ್ಥಿತಿಯನ್ನು ಆಳವಾಗಿ ಅಧ್ಯಯನ ಮಾಡಿ ಹಲವು ಮಹತ್ವದ ಶಿಫಾರಸುಗಳನ್ನು ನೀಡಿತು. ಇದರಲ್ಲಿ ಅತ್ಯಂತ ಪ್ರಮುಖವಾದುದು ಭಾರತದಲ್ಲಿ ಒಂದು ಕೇಂದ್ರ ಬ್ಯಾಂಕ್ ಸ್ಥಾಪನೆ.

ಆಯೋಗದ ಪ್ರಕಾರ, ದೇಶದ ಹಣಕಾಸು ವ್ಯವಸ್ಥೆಯನ್ನು ಸಮರ್ಪಕವಾಗಿ ನಿಯಂತ್ರಿಸಲು, ಹಣದುಬ್ಬರವನ್ನು ತಡೆಯಲು ಮತ್ತು ನಾಣ್ಯ ಚಲನವಲನವನ್ನು ನಿಯಂತ್ರಿಸಲು ಒಂದು ಸ್ವತಂತ್ರ ಕೇಂದ್ರ ಬ್ಯಾಂಕ್ ಅಗತ್ಯವಿತ್ತು. ಈ ಕೇಂದ್ರ ಬ್ಯಾಂಕ್ ಸರ್ಕಾರದ ಬ್ಯಾಂಕರ್ ಆಗಿ, ಬ್ಯಾಂಕ್‌ಗಳ ಬ್ಯಾಂಕ್ ಆಗಿ ಮತ್ತು ನಾಣ್ಯ ನಿಯಂತ್ರಕನಾಗಿ ಕಾರ್ಯನಿರ್ವಹಿಸಬೇಕು ಎಂದು ಶಿಫಾರಸು ಮಾಡಿತು. ಜೊತೆಗೆ, ವಿನಿಮಯ ದರವನ್ನು ಸ್ಥಿರಗೊಳಿಸುವುದು ಮತ್ತು ವಿದೇಶಿ ವಿನಿಮಯವನ್ನು ನಿಯಂತ್ರಿಸುವುದು ಕೂಡ ಮುಖ್ಯ ಸಲಹೆಗಳಾಗಿದ್ದವು.

ಈ ಆಯೋಗದ ಕಾರ್ಯದಲ್ಲಿ ಮಹತ್ವದ ಬೌದ್ಧಿಕ ಪ್ರಭಾವ ಬೀರಿದ ವ್ಯಕ್ತಿ B. R. Ambedkar ಆಗಿದ್ದಾರೆ. ಡಾ. ಅಂಬೇಡ್ಕರ್ ಅವರು ಕೇವಲ ಸಮಾಜ ಸುಧಾರಕರಷ್ಟೇ ಅಲ್ಲ, ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಡಾ. ಅಂಬೇಡ್ಕರ್ ಅವರು “The Problem of the Rupee: Its Origin and Its Solution” ಎಂಬ ಪ್ರಸಿದ್ಧ ಗ್ರಂಥವನ್ನು ರಚಿಸಿದರು. ಈ ಕೃತಿಯಲ್ಲಿ ಅವರು ಭಾರತದ ನಾಣ್ಯ ವ್ಯವಸ್ಥೆಯ ದೋಷಗಳನ್ನು ವಿಶ್ಲೇಷಿಸಿ, ಅದಕ್ಕೆ ಸೂಕ್ತ ಪರಿಹಾರಗಳನ್ನು ಸೂಚಿಸಿದರು ನಾಣ್ಯ ನೀತಿ ತತ್ವಗಳು: ರೂಪಾಯಿ ಸ್ಥಿರತೆ ಮತ್ತು inflation ನಿಯಂತ್ರಣ ಕುರಿತು Commission ವರದಿಗೆ ಮಾರ್ಗದರ್ಶನ. ಬ್ಯಾಂಕಿಂಗ್ ಸುಧಾರಣೆ: ಬ್ಯಾಂಕಿಂಗ್ ಕ್ಷೇತ್ರದ ಸಂಘಟಿತ ನಿರ್ವಹಣೆ ಮತ್ತು ಹಣಕಾಸಿನ ಮೇಲ್ವಿಚಾರಣೆಗೆ ತತ್ವ ನಿರೂಪಣೆ. ಕೇಂದ್ರ ಬ್ಯಾಂಕ್ ಸ್ಥಾಪನೆಗೆ ಮಾರ್ಗದರ್ಶನ: RBI ಸ್ವತಂತ್ರ, ಪ್ರಭಾವಿ ಮತ್ತು ಕಾರ್ಯನಿರ್ವಹಣೆಯಲ್ಲಿರಬೇಕೆಂಬ ದೃಷ್ಟಿಕೋನಕ್ಕೆ ಶಕ್ತಿ ನೀಡಿದರು. ಆರ್ಥಿಕ ತತ್ತ್ವಗಳ ಪ್ರಾಯೋಗಿಕತೆ: ಆಯೋಗ ವರದಿಯಲ್ಲಿ, ಅಂಬೇಡ್ಕರ್ ಶಿಫಾರಸು ಮಾಡಿದ ಆರ್ಥಿಕ ತತ್ವಗಳನ್ನು ಅಳವಡಿಸುವುದಕ್ಕೆ ಪ್ರೇರಣೆ.

Hilton Young Commission ತನ್ನ ವರದಿ ತಯಾರಿಸುವಾಗ ಅಂಬೇಡ್ಕರ್ ಅವರ ಆರ್ಥಿಕ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡಿತ್ತು. ರೂಪಾಯಿ ಮೌಲ್ಯವನ್ನು ಸ್ಥಿರಗೊಳಿಸುವುದು ಮತ್ತು ನಾಣ್ಯ ನಿಯಂತ್ರಣದ ಅಗತ್ಯತೆ ಕುರಿತು ಅವರ ಅಭಿಪ್ರಾಯಗಳು ಆಯೋಗದ ಶಿಫಾರಸುಗಳಲ್ಲಿ ಪ್ರತಿಬಿಂಬಿತವಾಗಿದ್ದವು. ವಿಶೇಷವಾಗಿ, ಕೇಂದ್ರ ಬ್ಯಾಂಕ್ ಸ್ಥಾಪನೆ ಕುರಿತ ಆಲೋಚನೆಗೆ ಅವರ ಆರ್ಥಿಕ ದೃಷ್ಟಿಕೋನ ಪ್ರಭಾವ ಬೀರಿದೆ ಎಂದು ಪರಿಗಣಿಸಲಾಗುತ್ತದೆ.

ಈ ಶಿಫಾರಸುಗಳ ಆಧಾರದ ಮೇಲೆ ನಂತರ Reserve Bank of India (RBI) ಅನ್ನು 1935ರ ಏಪ್ರಿಲ್ 1ರಂದು ಸ್ಥಾಪಿಸಲಾಯಿತು. RBI ಸ್ಥಾಪನೆಯು ಭಾರತದಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯ ಆರಂಭಕ್ಕೆ ಕಾರಣವಾಯಿತು. ಇದು ದೇಶದ ನಾಣ್ಯ ವ್ಯವಸ್ಥೆಯನ್ನು ನಿಯಂತ್ರಿಸುವುದು, ಹಣದುಬ್ಬರವನ್ನು ತಡೆಯುವುದು, ಬ್ಯಾಂಕ್‌ಗಳ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಸರ್ಕಾರದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

RBI ಸ್ಥಾಪನೆಯ ನಂತರ ಭಾರತದಲ್ಲಿ ಆರ್ಥಿಕ ಸ್ಥಿರತೆ ಹೆಚ್ಚಾಯಿತು. ಬ್ಯಾಂಕಿಂಗ್ ಕ್ಷೇತ್ರವು ಹೆಚ್ಚು ಸಂಘಟಿತವಾಯಿತು ಮತ್ತು ಜನರಲ್ಲಿ ಬ್ಯಾಂಕ್‌ಗಳ ಮೇಲಿನ ವಿಶ್ವಾಸ ಹೆಚ್ಚಾಯಿತು. ಹಣಕಾಸು ವ್ಯವಸ್ಥೆಯಲ್ಲಿ ಶಿಸ್ತಿನೊಂದಿಗೆ ನಿಯಂತ್ರಣ ಸ್ಥಾಪನೆಯಾಗಿ, ದೇಶದ ಆರ್ಥಿಕ ಬೆಳವಣಿಗೆಗೆ ದೃಢವಾದ ನೆಲೆ ನಿರ್ಮಾಣವಾಯಿತು.

ಭಾರತದ ಆರ್ಥಿಕ ವ್ಯವಸ್ಥೆಯ ಹೃದಯವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯೇ Reserve Bank of India (RBI). 1935 ರಲ್ಲಿ ಸ್ಥಾಪಿತವಾದ RBI ದೇಶದ ನಾಣ್ಯ, ಹಣಕಾಸು, ಬ್ಯಾಂಕಿಂಗ್ ಮತ್ತು ವಿದೇಶಿ ವಿನಿಮಯ ವ್ಯವಸ್ಥೆಯನ್ನು ನಿಯಂತ್ರಿಸುವ ಪ್ರಧಾನ ಸಂಸ್ಥೆ. RBI ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಹಣಕಾಸು ವ್ಯವಹಾರಗಳನ್ನು ನಿಭಾಯಿಸುವುದಲ್ಲದೆ, ದೇಶದ ಹಣಕಾಸಿನ ಸ್ಥಿರತೆ ಕಾಪಾಡುತ್ತದೆ.

RBI ಕಾರ್ಯಗಳನ್ನು ಮುಖ್ಯವಾಗಿ ನಾಲ್ಕು ವಿಭಾಗಗಳಲ್ಲಿ ವಿಂಗಡಿಸಬಹುದು. ಮೊದಲು, ಹಣಕಾಸು ನಿಯಂತ್ರಣ ಸಂಸ್ಥೆ (Monetary Authority) ಆಗಿ, RBI ದೇಶದ ಹಣದ ಸರಬರಾಜು, Repo Rate, Reverse Repo Rate ಮತ್ತು Cash Reserve Ratio (CRR) ನ್ನು ನಿರ್ಧರಿಸಿ ಹಣದುಬ್ಬರವನ್ನು ನಿಯಂತ್ರಿಸುತ್ತದೆ. ಎರಡನೆಯದಾಗಿ, RBI ನಾಣ್ಯ ಜಾರಿಗೊಳ್ಳುವ ಪ್ರಾಧಿಕಾರ (Issuer of Currency) ಆಗಿ, ನೋಟುಗಳ ಮೌಲ್ಯವನ್ನು ಸ್ಥಿರಗೊಳಿಸುತ್ತದೆ.

ಮೂರನೆಯದು, RBI ಸರ್ಕಾರದ ಬ್ಯಾಂಕರ್ (Banker to the Government) ಆಗಿ ಕಾರ್ಯನಿರ್ವಹಿಸುತ್ತದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ short-term liquidity ಒದಗಿಸುವುದು, ಬಾಂಡ್ ಮತ್ತು Treasury Bills issue ಮಾಡುವುದು, ಮತ್ತು ಸರ್ಕಾರದ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುತ್ತದೆ. ನಾಲ್ಕನೆಯದು, RBI ಬ್ಯಾಂಕಿಂಗ್ ಮೇಲ್ವಿಚಾರಣೆ (Regulator of Banks) ನಡೆಸಿ, ಎಲ್ಲಾ Scheduled Banks, Cooperative Banks ಮತ್ತು NBFCs ಮೇಲೆ licensing, auditing ಮತ್ತು prudential norms ಅನುಸರಿಸಲಿದೆ.

ಇದೆಲ್ಲದ ಜೊತೆಗೆ, RBI ಆರ್ಥಿಕ ಅಭಿವೃದ್ಧಿ ಕಾರ್ಯಗಳು ಮತ್ತು ವಿದೇಶಿ ವಿನಿಮಯ ನಿರ್ವಹಣೆ (Forex Management) ಮೂಲಕ ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. Small-scale industries, rural credit, financial inclusion schemes, digital banking, ಮತ್ತು Forex reserves management ಇದರ ಪ್ರಮುಖ ಕಾರ್ಯಗಳಾಗಿವೆ.

RBI ದೇಶದ ಆರ್ಥಿಕ ಸ್ಥಿರತೆ, ನಾಣ್ಯ ಸ್ಥಿರತೆ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸಂಘಟಿತ ವ್ಯವಸ್ಥೆ ರೂಪಿಸಲು ಅತ್ಯಂತ ಮಹತ್ವಪೂರ್ಣ ಸಂಸ್ಥೆಯಾಗಿದ್ದು, ಭಾರತದ ಆರ್ಥಿಕ ಇತಿಹಾಸದಲ್ಲಿ ಅಪ್ರತಿಮ ಪಾತ್ರ ವಹಿಸಿದೆ.

ಲೇಖಕರು: ಡಾ. ಶ್ರೀಧರ್ ಹಾದಿಮನಿ, ಉಪನ್ಯಾಸಕರು, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ

Related posts

ಕೋಟಿಗೊಬ್ಬ-3 ಬಿಡುಗಡೆ ವಿಳಂಬಕ್ಕೆ ಇದೇನಾ ಕಾರಣ: ಥಿಯೇಟರ್ ಗಳಲ್ಲಿ ಅಭಿಮಾನಿಗಳ ಆಕ್ರೋಶ, ಇಂದು ಅಕ್ಟೋಬರ್ 15 ಚಿತ್ರ ಬಿಡುಗಡೆ

satyadarshana

ಮರೆಯಲಾಗದ ಮಾಣಿಕ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರವರು…

satyadarshana

ಗಜೇಂದ್ರಗಡ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಚೆಣೆ…

satyadarshana

Leave a Comment