Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ಸಾಮಾಜಿಕ ನ್ಯಾಯದ ಸಮರ್ಥ ಶಕ್ತಿ ಡಾ. ಬಿ.ಆರ್. ಅಂಬೇಡ್ಕರ್

 

ಗದಗ: ಸಮಾಜದಲ್ಲಿ ಅತ್ಯಂತ ಹಿಂದುಳಿದವರು ಹಾಗೂ ಶೋಷಿತರ ಧ್ವನಿಯಾಗಿ ಸಮಾನತೆ ಹರಿಕಾರ ಎನಿಸಿ ಭಾರತದ ಬೃಹತ್ ಸಂವಿಧಾನದ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿರುವ ಶೋಷಿತ ಧ್ವನಿಯ ಧೀಮಂತ ಶಕ್ತಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಡಾ. ಬಿ ಕೆ ಮಾದಿ ಹೇಳಿದರು ಗಜೇಂದ್ರಗಡದ ವಿಘ್ನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದೆ 135ನೇ ಜಯಂತಿ ಉತ್ಸವ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ

ದಲಿತ ಎಂಬ ಪದವು ಜಾತಿ ಸೂಚಕವಾಗಿರದೆ ಸಮಾಜದಲ್ಲಿನ ಶೈಕ್ಷಣಿಕ ಸಾಮಾಜಿಕ, ಆರ್ಥಿಕ, ರಾಜಕೀಯ ಸಾಂಸ್ಕೃತಿಕ ಯಾವುದೇ ಕ್ಷೇತ್ರದಲ್ಲಾಗಲಿ ಹಿಂದುಳಿದಿದ್ದರೆ ಅಂತವರು ದಲಿತರು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ತಮ್ಮ ಜೀವನವನ್ನೇ ಸವಿಸಿದ ಮಹಾಪುರುಷ ಬಾಬಾ ಸಾಹೇಬ್ ಅಂಬೇಡ್ಕರ್

ಪ್ರತಿಯೊಬ್ಬರು ಶೋಷಣೆಯಿಂದ ದೂರವಿರಲು ಶಿಕ್ಷಣ ಎಂಬ ಅಸ್ತ್ರ ಅವಶ್ಯ ಅದಕ್ಕಾಗಿ ಅಮೆರಿಕದಿಂದ ಹಿಂದಿರುಗುವಾಗ ಬಾಬಾ ಸಾಹೇಬರು ಹದಿನೆಂಟು ಸಾವಿರ ಪುಸ್ತಕಗಳನ್ನು ತಂದಿರುವುದನ್ನು ಸ್ಮರಿಸಿದರು ಅಲ್ಲದೆ ಜಗತ್ತಿನ ಬಹುತೇಕ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಾಸಿಸಿ 18 ರಾಷ್ಟ್ರಗಳ ಸಂವಿಧಾನವನ್ನು ಕ್ರೂಡೀಕರಿಸಿ ಭಾರತದ ಬೃಹತ್ ಸಂವಿಧಾನವನ್ನು ನೀಡುವ ಮೂಲಕ ಸಂವಿಧಾನದ ಶಿಲ್ಪಿ ಎನಿಸಿದರು ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಎನ್ ಎಸ್ ಕಲ್ಕೇರಿ ಎ ಬಿ ಸಂ ಕನೂರ್ ಅಂಬೇಡ್ಕರ್ ಜೀವನ ಕುರಿತು ಮಾತನಾಡಿ ಡಾ ಬಿ ಕೆ ಮಾದಿ ರಚಿಸಿರುವ ಅಂಬೇಡ್ಕರ ರವರ ರ್ಕ್ರಾಂತಿಕಾರಿ ವಿಚಾರಗಳು ಕೃತಿಯನ್ನು ನೆನಪು ಮಾಡಿಕೊಂಡರು

ಆನಂದ,ಸುನಿಲ, ಕೊಪ್ಪಳ, ಸೇರಿದಂತೆ ಕಾಲೇಜಿನ ಸರ್ವಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

ಕಾರ್ಯಕ್ರಮವನ್ನು ಶ್ರೀ ವಿಘ್ನೇಶ್ವರ ವಿದ್ಯಾವರ್ಧಕ ಸಂಘ ಪದವಿಪೂರ್ವ ಕಾಲೇಜ್, ಬಸವರಾಜ ಕೊಟಗಿ ಚಾರ್ಟೇಬಲ್ ಟ್ರಸ್ಟ್,

ಶ್ರೀಮತಿ ಸುಮಂಗಲ ಮತ್ತಿಕಟ್ಟೆ ಐಟಿಐ ಕಾಲೇಜ್ ಸಂಯುಕ್ತವಾಗಿ ಸಂಘಟಿಸಿದವು ಕೊನೆಯಲ್ಲಿ ಅತಿಥಿಗಳಿಗೆ ಅಂಬೇಡ್ಕರ್ ವಿಚಾರಧಾರೆ ಕೃತಿಗಳನ್ನು ನೀಡಿ ಗೌರವಿಸಲಾಯಿತು.

Related posts

2023ರ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ದಲಿತರಿಗೆ ಸಿಎಂ ಸ್ಥಾನ ಒಲಿಯಬಹುದೆಂಬ ಕನಸು ಮೂಡಿದೆಯಂತೆ..?

satyadarshana

ರೈತರಿಗೆ ಹನಿ ನೀರಾವರಿ ಸೌಲಭ್ಯಗಳು

satyadarshana

ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ: ಐಜಿಪಿ ಸಂದೀಪ್ ಪಾಟೀಲ್

satyadarshana

Leave a Comment