Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ವರ್ಷಕ್ಕೊಮ್ಮೆಯಾದ್ರೂ ಗಟಾರ ಸ್ವಚ್ಛ ಮಾಡಲು ಆಗ್ರಹ

 

ಗಟಾರ ನಿರ್ಮಿಸಿ 1-2 ವರ್ಷ ಆಗಲೇ ಗಟಾರ ಗಲೀಜಿನಿಂದ ತುಂಬಿ ನೀರು ಹರಿಯದಂತಾಗಿದೆ. ಇದರಿಂದ ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದೆ.  

ಸೂಡಿ: ಸೂಡಿ ಗ್ರಾಮದ ಸೇರಿದಂತೆ ವಿವಿಧೆಡೆ ಗಟಾರಗಳು ಪ್ಲಾಸ್ಟಿಕ್ ಹಾಳೆ, ಕಸ, ಕಡ್ಡಿ, ಹುಲ್ಲುಗಳಿಂದ ತುಂಬಿದ್ದು, ಇದರಿಂದ ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದ್ದು, ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಗಟಾರ್ ಕ್ಲಿನ್ ಗೆ ಮುಂದಾಗಿ ಎಂದು ಸೂಡಿ ಗ್ರಾಮ ಪಂಚಾಯಿತಿ ಮೂರನೇ ವಾರ್ಡ್ ಹಾಗೂ ನಾಲ್ಕನೇ ವಾರ್ಡ ಜನತೆ , ಸ್ಥಳೀಯ ಗ್ರಾಮ ಪಂಚಾಯಿತಿಗೆ ಆಗ್ರಹಿಸುತ್ತಿದ್ದಾರೆ.

ನಾಲ್ಕನೇ ವಾರ್ಡಿನ ಸಂಕನೂರು ಕ್ರಾಸ್ ಹತ್ತಿರ ಇರುವ ಗಟಾರ ಕಸ, ಕಡ್ಡಿ, ಹುಲ್ಲು, ಪ್ಲಾಸ್ಟಿಕ್ ಹಾಳೆಗಳಿಂದ ತುಂಬಿದ್ದು, ಗಲೀಜು ನೀರು ಹರಿಯದೇ ನಿಂತಲ್ಲೆ ನಿಲ್ಲುತ್ತಿದೆ. ಇದರಿಂದ ಒಬ್ಬ ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದ್ದು, ಜನತೆಯನ್ನು ಕಾಯಿಲೆ ಭೀತಿ ಕಾಡುತ್ತಿದೆ.

ಜತೆಗೆ ಗಬ್ಬು ವಾಸನೆ. ನಿತ್ಯ ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಗಟಾರ ಸ್ವಚ್ಛ ಮಾಡುವಂತೆ ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ಕನಿಷ್ಠ ಪಕ್ಷ ವರ್ಷಕ್ಕೊಮ್ಮೆಯಾದರೂ ಗಟಾರ್ ಸ್ವಚ್ಛ ಮಾಡಿ ಪುಣ್ಯ ಕಟ್ಡಿಕೊಳ್ಳಿ ಎಂದು ಬೇಡಿಕೊಂಡು ಗ್ರಾಮ ಪಂಚಾಯತಿ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ ಎಂದು ಮೂರನೇ ವಾರ್ಡ್ ಜನತೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಧೋರಣೆ ಹಿಡಿಶಾಪ ಹಾಕುತ್ತಿದ್ದಾರೆ.

ಮಾದರ ಚೆನ್ನಯ್ಯ ಸಮುದಾಯ ಭವನ ಹಿಂದುಗಡೆ ಅದರ ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಸನ್ನಪುಟ್ಟ ಮಕ್ಕಳು ಸಾಂಕ್ರಾಮಿಕ ರೋಗ ತಗುಲುವ ಸಾಧ್ಯತೆ ಹೆಚ್ಚು ದೊಡ್ಡ ಗಟಾರ . ಆಗಲೇ ಗಟಾರ ಗಲೀಜಿನಿಂದ ತುಂಬಿ ನೀರು ಹರಿಯದಂತಾಗಿದೆ. ಇದರಿಂದ ಗಬ್ಬು ವಾಸನೆ, ಸೊಳ್ಳೆ ಕಾಟ ವಿಪರೀತವಾಗಿದೆ. ಸೂಡಿಲ್ಲಿ 1 2, 3, 4, ವಾರ್ಡ್ ನಲ್ಲಿರುವ ಗಟಾರ ಸ್ವಚ್ಛ ಮಾಡಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿಲ್ಲ.

ಹೀಗೆ ಸೂಡಿ 3 4 ವಾರ್ಡ್ ನಲ್ಲಿ ಗಲೀಜಿನಿಂದ ತುಂಬಿರುವ ಗಟಾರ್ ಸ್ವಚ್ಛತೆ ಕೂಡಲೇ ಗ್ರಾಮ ಪಂಚಾಯಿತಿ ಮುಂದಾಗಬೇಕು. ಮಳೆಯಾದಲ್ಲಿ ಗಟಾರ್ ತುಂಬಿ ಗಬ್ಬು ವಾಸನೆ ಬರುತ್ತಿದೆ . ಕೂಡಲೇ ಗಟಾರ್ ಸ್ವಚ್ಛ ಮಾಡುವಲ್ಲಿ ಕ್ರಮ ಕೈಗೊಳ್ಳಿದ್ದರೆ ರಸ್ತೆಗಿಳಿದು ಪ್ರತಿಭಟಿಸಲಾಗುವುದು ಎಂದು ಜನತೆ ಎಚ್ಚರಿಸಿದ್ದಾರೆ

Related posts

ಮುಂದಿನ ಐದು ದಿನ ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ.

satyadarshana

ಕೇಂದ್ರ ಸರ್ಕಾರದಿಂದ 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದ ಪ್ರಧಾನಿ ಮೋದಿ ನಿರ್ಧಾರ ಸ್ವಾಗತಾರ್ಹ.ಎಂ.ವಾಯ್ ಮುಧೋಳ

satyadarshana

ನರೇಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿಲ್ಲಾ ಲೋಕಾಯುಕ್ತ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಜನಸಂಪರ್ಕ ಸಭೆ

satyadarshana

Leave a Comment