ಗಜೇಂದ್ರಗಡ
*ಹೋರಾಟ ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿ, ಬಗರ್ ಹುಕ್ಕುಂ ಸಾಗುವಳಿದಾರ ರೈತರಿಂದ ಉಪವಾಸ ಸತ್ಯಾಗ್ರಹ.*
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕು ಪತ್ರ ಹಾಗೂ ಸಾಗುವಳಿದಾರರ ಚೀಟಿ ವಿತರಣೆ ಮಾಡಬೇಕು ಎಂದು ನೂರಾರು ರೈತರು ನಿನ್ನೆಯಿಂದ ಅನಿರ್ದಿಷ್ಟಾವಧಿ ಧರಣಿ ಹೋರಾಟವನ್ನು ಹಮ್ಮಿಕೊಂಡಿದ್ದು ಹೋರಾಟದ ಸ್ಥಳಕ್ಕೆ ಮಾನ್ಯ ತಹಶೀಲ್ದಾರ ರೋಣ ಶ್ರೀ ನಾಗರಾಜ ಅವರು ಭೇಟಿ ನೀಡಿ ರೈತರ ಮನವೋಲಿಸಲು ಪ್ರಯತ್ನಿಸಿದರು ಜಿಲ್ಲಾಧಿಕಾರಿ ಬರಲು ಪಟ್ಟು ಹಿಡಿದ ಹೋರಾಟಗಾರರು. 
ಎರಡನೇ ದಿನ ಹೋರಾಟ ಮುಂದುವರೆದಿದ್ದು ಇಂದು ಸುಮಾರು 15ಜನ ರೈತರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ *ಉದ್ದೇಶಿಸಿ ಮಾತನಾಡಿದ ಶ್ರೀ ಬಾಲು ರಾಠೋಡ* ಹೋರಾಟ ಪ್ರಾರಂಭವಾಗಿ ಎರಡು ದಿನಗಳು ಕಳೆದರೂ ಕೂಡ ಹೋರಾಟ ಸ್ಥಳಕ್ಕೆ ಬಾರದ ಜಿಲ್ಲಾಧಿಕಾರಿಗಳು ರೈತರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲದ ಅಧಿಕಾರ ಶಾಹಿ ವರ್ಗ ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು ಅಲ್ಲಿಯವರೆಗೂ ರೈತರ ಉಪವಾಸ ಹೋರಾಟ ನಿರಂತರವಾಗಿರುತ್ತದೆ. ರೈತರಿಗೆ ಏನೆ ತೊಂದರೆ ಆದರೂ ಕೂಡ ಅದಕ್ಕೆ ನೇರವಾಗಿ ಅಧಿಕಾರಿಗಳು ಹೋಣೆಗಾರರಾಗಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
*ರೈತ ಸಂಘದ ತಾಲೂಕಾಧ್ಯಕ್ಷ ರೋಪಲೇಶ ಮಾಳೋತ್ತರ* ಮಾತನಾಡಿ ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕು ಪತ್ರ ಸೀಗಬೇಕು , ಸಾಗುವಳಿ ಚೀಟಿ ವಿತರಣೆ ಮಾಡಬೇಕು ಎಂದು ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರು ಕೂಡ ಅಧಿಕಾರಿಗಳು ಬಗರ್ ಹುಕ್ಕುಂ ಸಮಿತಿ ಈ ವರೆಗೂ ಕೂಡ ಅರ್ಜಿ ಸಲ್ಲಿಸಿದ ರೈತರಿಗೆ ನ್ಯಾಯ ಒದಗಿಸಿಲ್ಲ, ಆದ್ದರಿಂದ ನಿನ್ನೆಯಿಂದ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು ಹೋರಾಟದ ಸ್ಥಳಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಬರಬೇಕು ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಎರಡು ದಿನದ ಹೋರಾಟಕ್ಕೆ ಸುಮಾರು 15ಜನ ರೈತರ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೆವೆ ನಾಳೆ ಹೋರಾಟದ ಸ್ವರೂಪವನ್ನು ಬದಲಾಯಿಸುತ್ತೆವೆಂದು ಹೇಳಿದರು.
ಈ ಸಂದರ್ಭದಲ್ಲಿ ರೂಪೇಶ್ ಮಾಳೋತ್ತರ, ಪೀರು ರಾಠೋಡ, ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಗಣೇಶ ರಾಠೋಡ, ಮೆಹಬೂಬ ಹವಾಲ್ದಾರ, ಗಂಗಮ್ಮ , ಶಾರವ್ವ ಲಮಾಣಿ, ಆನಂದ ರಾಠೋಡ, ಕನಕರಾಯ ಹಾದಿಮನಿ, ಅಭಿಲಾಷ್ ರಾಠೋಡ, ಗುರು ಶಾಂತಗೌಡರ,ಅನಿಲ್ ಆರ್, ಬಾಲು ರಾಠೋಡ, ಶಿವಪ್ಪ ಮಾಳೋತ್ತರ ಲೋಕಪ್ಪ ಕಾಳಪ್ಪ ರಾಠೋಡ ಈರಪ್ಪ ಕಾಳಪ್ಪ ರಾಠೋಡ
ವೀರಭದ್ರಪ್ಪ ಮಾಳೋತ್ತರ
ರತ್ನಪ್ಪ ಮಾಳೋತ್ತರ ಲೋಕಪ್ಪ ರಾಠೋಡ
ಮಾರುತಿ ರಾಠೋಡ ಚಂದ್ರು ಅಜ್ಮೀರ್ ಶಿವವ್ವ ,ದೇವಕ್ಕ,ಶಾವವ್ವ ನೂರಾರು ರೈತರು ವಿದ್ಯಾರ್ಥಿಗಳು ಯುವಕರು ಭಾಗವಹಿಸಿದ್ದರು.
