ಗಜೇಂದ್ರಗಡ :ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಜನಪರ ಆಡಳಿತ ಮೆಚ್ಚಿ ಹಾಗೂ ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ನಿರಂತರವಾಗಿ ರೋಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಗ್ರಾಮಗಳಿಂದ ಅನೇಕರು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಸೇರ್ಪಡೆ
ದಿನಾಂಕ 24.04.2023 ರಂದು ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕ ಜೆಡಿಎಸ್ ಅಧ್ಯಕ್ಷರು ಹಾಗೂ ರೋಣ ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿಗಳಾದ ಮಕ್ತುಮ್ ಸಾಬ್ ವಾಯ್ ಮುಧೋಳ (ಸಾಗರ್) ಅವರ ನೇತೃತ್ವದಲ್ಲಿ
ಗಜೇಂದ್ರಗಡ ನಗರದ ವಿವಿಧ ವಾರ್ಡುಗಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಮುದ್ದು ಕಲಾಲ್, ಫಜಲ್ ಹುನಗುಂದ, ಮೈಬು ಹೊಸಪೇಟೆ, ಹೈದರ್ ಚಾಮಲಾಪುರ, ಶಾಹೀಲ್ ಕಾತರಕಿ, ಸಂತು ಪಾಟೀಲ್, ಶಕೀಲ್ ಅಹ್ಮದ್ ಬೋಡ್ಕೆ ಹಾಗೂ ಗೋಗೇರಿ ಗ್ರಾಮದ ಹುಚ್ಚುಸಾಬ್ ನದಾಫ್ ಅವರು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಹಾಗೂ ಕುಮಾರಣ್ಣನವರ ದಕ್ಷ ಆಡಳಿತ ಮತ್ತು ಜನಪರ ಯೋಜನೆಗಳನ್ನು ನೆನೆದು ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಲಕ್ಷ್ಮಣ್ ತಳವಾರ, ಸಂಗಪ್ಪ ಯಲಬುಣಚಿ, ಬಾದಶಾ ಬಾಗವಾನ, ರವಿ ಮೋಹಿತೆ, ಶ್ರೀ ಸೋಹಿಲ್ ಮುಧೋಳ, ರಾಜು ಪವಾರ್, ಸಾಂಗ್ಲೀಕಾರ್ ಅವರು ಉಪಸ್ಥಿತರಿದ್ದರು
