Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಫೋಟೋಬಿಸಿ ಬಿಸಿ ಸುದ್ದಿರಾಜ್ಯ

ರಸ್ತೆ ಸುರಕ್ಷತಾ ಸಪ್ತಾಹ ಉತ್ತಮ ಹಾಗೂ ಸುರಕ್ಷಿತ ಚಾಲನೆ ಮಾಡುವ ಜವಾಬ್ದಾರಿ ಚಾಲಕರದು…

 

ಗದಗ (ಸತ್ಯದರ್ಶನ ). ಜನೇವರಿ 13: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗದ ಗದಗ ಘಟಕದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವು ಗುರುವಾರ ಸಾಯಂಕಾಲ ಜರುಗಿತು.

ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ರಸ್ತೆ ಸುರಕ್ಷತಾ ಸಪ್ತಾಹ ಕೇವಲ ಕಾರ್ಯಕ್ರಮವಾಗದೇ ಇದನ್ನು ದಿನ ನಿತ್ಯದ ತಮ್ಮ ಕರ್ತವ್ಯದಲ್ಲಿ ಅಳವಡಿಸಿಕೊಂಡು ಉತ್ತಮ ಹಾಗೂ ಸುರಕ್ಷಿತ ಚಾಲನೆ ಮಾಡುವ ಜವಾಬ್ದಾರಿ ತಮ್ಮ ಮೇಲೆ ಇರುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸಿ.ಪಿ.ಐ ಬಿ.ಜಿ. ಸುಬ್ಬಾಪೂರಮಠ ಮಾತನಾಡಿ ರಸ್ತೆಯ ಸ್ಥಿತಿಗತಿ ಅರಿತುಕೊಂಡು ಅತೀ ಜಾಗರೂಕತೆಯಿಂದ ವಾಹನ ಚಲಾಯಿಸುವದು ಒಬ್ಬ ಚಾಲಕನ ಕರ್ತವ್ಯವಾಗಿದೆ ಎಂದು ನುಡಿದ ಅವರು ಅಪಘಾತಗಳಿಂದಾಗುವ ಅನಾನುಕೂಲತೆಗಳ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಮೋಟಾರು ವಾಹನ ನಿರೀಕ್ಷಕರಾದ ಬಾಲಚಂದ್ರ ತೊದಲಬಾಗಿ, ಕೇಂದ್ರ ಕಛೇರಿ ಹುಬ್ಬಳ್ಳಿ ಮುಖ್ಯ ತಾಂತ್ರಿಕ ಶಿಲ್ಪಿಗಳಾದ ಎಚ್.ಎಂ.ರಮೇಶ, ಸಂಚಾರ ಪೋಲಿಸ್ ಠಾಣೆಯ ಪಿ.ಎಸ್.ಐ ಸವಿತಾ ಮುನಿಯಾಳ, ವಿಭಾಗೀಯ ಸಂಚಾರ ಅಧಿಕಾರಿಗಳಾದ ಜಿ.ಐ.ಬಸವಂತಪೂರ, ವಿಭಾಗೀಯ ತಾಂತ್ರಿಕ ಶಿಲ್ಪಿಗಳಾದ ಪಿ.ವೈ.ಗಡೇದ, ಬಿ.ಎಲ್.ಗೆಣ್ಣೂರ, ಗದಗ ಘಟಕದ ಉಸ್ತುವಾರಿ ಅಧಿಕಾರಿ ಎಸ್.ಎಂ.ವಾಲಿ, ಘಟಕ ವ್ಯವಸ್ಥಾಪಕರು, ವಿಭಾಗದ ಎಲ್ಲಾ ಅಧಿಕಾರಿ ವರ್ಗದವರು, ಗದಗ ಘಟಕದ ಸಮಸ್ತ ಚಾಲನಾ, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿಭಾಗೀಯ ಕಛೇರಿ ಸಂಚಾರ ನಿರೀಕ್ಷಕ ರಾಜಶೇಖರ ಮಸಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Related posts

ವರ್ಷಕ್ಕೊಮ್ಮೆಯಾದ್ರೂ ಗಟಾರ ಸ್ವಚ್ಛ ಮಾಡಲು ಆಗ್ರಹ

satyadarshana

ರೋಣ ಸರ್ಕಾರಿ ಮಾದರಿ ಶಾಲೆಯ ನಿವೃತ್ತ ಶಿಕ್ಷಕರಿಗೆ ಮಾಜಿ ವಿದ್ಯಾರ್ಥಿಗಳಿಂದ ನೆನಪಿನ ಗೌರವ

satyadarshana

ಎರಡು ದಿನಗಳ ಸ್ವಕ್ಷೇತ್ರದ ಪ್ರವಾಸದಲ್ಲಿ ಬಾದಾಮಿ ಜನರನ್ನ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಸಿದ್ದರಾಮಯ್ಯ.

satyadarshana

Leave a Comment