Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ..! ಕಲಬುರಗಿಯ ಉರ್ದು ಶಾಲೆಗೆ ಗೈರಾದ ವಿದ್ಯಾರ್ಥಿನಿಯರು..!

ಕಲಬುರಗಿ: ಕಲಬುರಗಿಯಲ್ಲಿ ವಿದ್ಯಾರ್ಥಿನಿಯರ ಹಿಜಾಬ್​ ಹಠ ಮುಂದುವರೆದಿದ್ದು,  ಎರಡನೇ ದಿನವೂ  ಹಿಜಾಬ್​ ಸಮೇತ ವಿದ್ಯಾರ್ಥಿಗಳು ತರಗತಿಗೆ ಬಂದಿದ್ದಾರೆ.  ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ ಎಂದು ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ.

ಕಲಬುರಗಿಯ ಕೆಲವೆಡೆ ಹಿಜಾಬ್​ ಧರಿಸಿ  ಸ್ಟೂಡೆಂಟ್ಸ್​ ಆಗಮಿಸುತ್ತಿದ್ದು,  ಮಕ್ಕಳಿಗೆ ಹಿಜಾಬ್ ಹಾಕಿಸಿ ಶಾಲೆಗೆ ಕೆಲ ಪೊಷಕರು ಕಳಿಸುತ್ತಿದ್ದಾರೆ. ನ್ಯೂ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಗೆ  100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್​ ಧರಿಸಿ ಮಕ್ಕಳು ಆಗಮಿಸಿದ್ದಾರೆ.

ವಿದ್ಯಾರ್ಥಿಗಳು ಹಿಜಾಬ್​​ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್​​ಗೆ ಬರಲ್ಲ ಎಂದು ಹಠ ಹಿಡಿದಿದ್ದು, ಕಲಬುರಗಿ ನಗರದ ಜಗತ್ ಸರ್ಕಲ್​​​ ಬಳಿಯ ಉರ್ದು ಶಾಲೆಗೆ  ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗೈರಾಗಿದ್ದಾರೆ.  8, 9,10 ನೇ ತರಗತಿಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದು, ರಜೆ ಇಲ್ಲದೆ ಇದ್ರೂ ವಿದ್ಯಾರ್ಥಿನಿಯರು ಕ್ಲಾಸ್​ನತ್ತ ತಿರುಗಿ ನೋಡುತ್ತಿಲ್ಲ. ಉರ್ದು ಶಾಲೆಯ ಕ್ಲಾಸ್ ರೂಮ್​​​ಗಳೆಲ್ಲಾ ಖಾಲಿ ಖಾಲಿಯಾಗಿದ್ದು,  ಎಂದಿನಂತೆ ಸ್ಕೂಲ್​​ಗೆ  ಶಿಕ್ಷಕರು, ಸಿಬ್ಬಂದಿ ಬಂದಿದ್ದಾರೆ.

Related posts

ಆಳವಾದ ಅಧ್ಯಯನದಿಂದ ಯಶಸ್ಸು ಸಾಧ್ಯ: ಡಾ.ನಾಗೇಂದ್ರಪ್ಪ

satyadarshana

ವಸತಿ ಶಾಲೆಗಳ ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕೊರತೆಯಾಗದಿರಲಿ – ಸಚಿವ ಶಿವರಾಜ ತಂಗಡಗಿ

satyadarshana

ಸ್ವೀಪ್ ಸಮಿತಿ ವತಿಯಿಂದ ಟೆನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ

satyadarshana

Leave a Comment