Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್(84) ವಿಧಿವಶ…

ಬೆಂಗಳೂರು: ಹಿರಿಯ ನಟಿ, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್(84) ವಿಧಿವಶರಾಗಿದ್ಧಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಾರ್ಗವಿ ನಾರಾಯಣ್ ಅವರು ಇಂದು ಸಂಜೆ 7.30 ಕ್ಕೆ ಮೃತಪಟ್ಟಿದ್ದಾರೆ.

ಅವರ ಮಕ್ಕಳಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ, ಮೊಮ್ಮಗಳು ಸಂಯುಕ್ತ ಬೆಳವಾಡಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಭಾರ್ಗವಿ ನಾರಾಯಣ್ ಅವರು 20 ಕ್ಕೂ ಪಲ್ಲವಿ,  ಕಾಡ ಬೆಳದಿಂಗಳು, ರಾಜಕುಮಾರ ಸೇರಿದಂತೆ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಭಾರ್ಗವಿ ನಾರಾಯಣ್ ಅವರ ಆತ್ಮಕಥೆ ‘ನಾನು ಭಾರ್ಗವಿ’ 2012 ರಲ್ಲಿ ಬಿಡುಗಡೆಯಾಗಿತ್ತು. ಅವರಿಗೆ ಅತ್ಯುತ್ತಮ ಪೋಷಕ ನಟಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

 

 

 

Related posts

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವ ವಿಷಯ ಕುರಿತು ‘ ಬಿಜೆಪಿ ಮುಖಂಡರ ಗೋಪ್ಯ ಸಭೆ

satyadarshana

ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂಧಿಸುವ ಮೂಲಕ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಬೇಕು.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.

satyadarshana

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮತದಾರರ ಜಾಗೃತಿಗಾಗಿ ಬೈಕ್ ಏರಿದ ಹಿರಿಯ ಅಧಿಕಾರಿಗಳು

satyadarshana

Leave a Comment