Satya Darshana
ಬಿಸಿ ಬಿಸಿ ಸುದ್ದಿ
ಬಿಸಿ ಬಿಸಿ ಸುದ್ದಿರಾಜ್ಯ

ನಿನ್ನ ಜಾಗಕ್ಕೆ ನಾನು ಬರುತ್ತೇನೆ’ ಎಂದು ರಾಘಣ್ಣ ಕಂಬನಿ.

ಸತ್ಯದರ್ಶನ

ಬೆಂಗಳೂರು :-‘ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ನನ್ನನ್ನು ಕಳಿಸಿಕೊಟ್ಟು ಅವನನ್ನು ವಾಪಸ್​ ಕರೆಸಿಕೊಳ್ಳಿ ಪ್ಲೀಸ್. ಪುನೀತ್​ ಅವರನ್ನು ಹೂತ್ತಿಲ್ಲ, ಬಿತ್ತಿದ್ದೇವೆ. ಪುನೀತ್​ ರೀತಿ ಇರುವ ನೂರಾರು ಜನ ಹುಟ್ಟಿ ಬರುತ್ತಾರೆ. ಹುಟ್ಟುವಾಗ ನನ್ನ ತಮ್ಮನಾಗಿ ಬಂದ. ವಾಪಸ್​ ಹೋಗುವಾಗ ತಂದೆಯಾಗಿ ಹೋದ. ಹೇಗೆ ಬದುಕಬೇಕು ಎಂಬುದನ್ನು ನನಗೂ ಮತ್ತು ಶಿವಣ್ಣನಿಗೂ ತಿಳಿಸಿಕೊಟ್ಟು ಹೋದ. ದಯವಿಟ್ಟು ಬಂದುಬಿಡು ಕಂದಾ. ಇಷ್ಟು ದಿನ ಈ ನೋವನ್ನು ತಡೆದುಕೊಂಡಿದ್ದೆ.

ನಿನ್ನ ಜಾಗಕ್ಕೆ ನಾನು ಬರುತ್ತೇನೆ’ ಎಂದು ರಾಘಣ್ಣ ಕಂಬನಿ ಸುರಿಸಿದರು.

‘20 ದಿನ ಈ ನೋವನ್ನು ತಡೆದುಕೊಂಡಿದ್ದೆ. ನಾನು ಅತ್ತರೆ ಪುನೀತ್​ ಪತ್ನಿ ಮತ್ತು ಮಕ್ಕಳು ನೊಂದುಕೊಳ್ಳುತ್ತಾರೆ ಅಂತ ಸುಮ್ಮನಿದ್ದೆ. ಆದರೆ ಇಂದು ತಡೆದುಕೊಳ್ಳೋಕೆ ಆಗಲಿಲ್ಲ. ಅತ್ತು ಹಗುರಾಗುತ್ತೇನೆ. ಈ ನೋವು ಮರೆಯುವ ಶಕ್ತಿ ಕೊಡು ಅಂತ ದೇವರಲ್ಲಿ ಕೇಳಲ್ಲ. ಈ ನೋವಿನ ಜೊತೆಗೆ ಬದುಕುವ ಶಕ್ತಿ ಕೊಡು ಅಂತ ಕೇಳುತ್ತೇನೆ. ಅವನು ನನ್ನ ಎದೆಯೊಳಗೆ ಇದ್ದಾನೆ’ ಎಂದಿದ್ದಾರೆ ರಾಘವೇಂದ್ರ ರಾಜ್​ಕುಮಾರ್​.


ಅಕಾಲಿಕವಾಗಿ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಕಟಿಸಿದೆ . ಅರಮನೆ ಮೈದಾನದಲ್ಲಿ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಘೋಷಿಸಿ , ರಾಜಕುಮಾರ್ ರಂತೆ ಪುನೀತ್ ಸ್ಮಾರಕ ನಿರ್ಮಿಸಿದ್ದಾರೆ .

ಬಳಿಕ ಮಾತನಾಡಿದ ಶಿವರಾಜ್​ಕುಮಾರ್​ ಕೂಡ ಕಣ್ಣೀರು ಸುರಿಸಿದರು. ಪುನೀತ್​ಗಾಗಿ ಹಾಡು ಹೇಳಿ ಗಾನ ನಮನ ಸಲ್ಲಿಸಿಸರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​ ಮುಂತಾದ ರಾಜಕೀಯ ಗಣ್ಯರು ಆಗಮಿಸಿದ್ದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ತಮಿಳು ನಟರಾದ ವಿಶಾಲ್​, ಶರತ್​ ಕುಮಾರ್​ ಮುಂತಾದವರು ಪುನೀತ್​ಗೆ ನುಡಿ ನಮನ ಸಲ್ಲಿಸಿದರು.

Related posts

ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಸಮರ್ಪಕ ಪ್ರಮಾಣದಲ್ಲಿ ಲಭ್ಯ

satyadarshana

ಹೆಬ್ಬಾಳ ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಗೆ ಗ್ರಾಮಸ್ಥರಿಂದ ಅಭೂತಪೂರ್ವ ಸ್ವಾಗತ.

satyadarshana

ಸುಳ್ಳು ಸಂದೇಶಗಳ ರಹದಾರಿ; ವಾಟ್ಸಾಪ್ ನಿಷೇಧಿಸಬೇಕೇ? ಬೇಡವೇ?

cradmin

Leave a Comment