Satya Darshana
ಬಿಸಿ ಬಿಸಿ ಸುದ್ದಿ
ದೇಶ-ವಿದೇಶಬಿಸಿ ಬಿಸಿ ಸುದ್ದಿ

ದೇಶದ ಅಸಹಿಷ್ಣುತೆ ಬಗ್ಗೆ ಮಾತನಾಡುವ ಖಾನ್, ಮಗನನ್ನು ಪಾರು ಮಾಡು ಎಂದು ಸತೀಶ್ ಮಾನಶಿಂದೆ ಬಳಿ ಮೊರೆ.

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ ಆರೋಪದ ಮೇರೆಗೆ ಬಂಧಿಸಲಾಗಿರುವ ಬಾಲಿವುಡ್​​ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಸದ್ಯ ಎನ್​ಸಿಬಿ ಕಸ್ಟಡಿಯಲ್ಲಿದ್ದಾರೆ. ಪುತ್ರನನ್ನ ಪ್ರಕರಣದಿಂದ ಪಾರು ಮಾಡೋದಕ್ಕೆ ಶಾರುಖ್ ಖಾನ್, ಖ್ಯಾತ ವಕೀಲ ಸತೀಶ್ ಮಾನಶಿಂಧೆ ಮೊರೆ ಹೋಗಿದ್ದಾರೆ.​

ಸದ್ಯ ಡ್ರಗ್ಸ್​ ಕೇಸಲ್ಲಿ ಅರೆಸ್ಟ್​ ಆಗಿರುವ ಆರ್ಯನ್​​ನನ್ನು ಕೋರ್ಟ್​ ಮುಂದೆ ಹಾಜರು ಪಡಿಸಲಾಗಿತ್ತು. ಈಗ ವಿಚಾರಣೆ ನಡೆಸಿದ ಕೋರ್ಟ್​ ಒಂದು ದಿನ ಎನ್​​ಸಿಬಿ ಪೊಲೀಸ್​​ ಕಸ್ಟಡಿಗೆ ನೀಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಸೇರಿ ಒಟ್ಟು 8 ಮಂದಿಯನ್ನ ಎನ್‍ಸಿಬಿ ಪೊಲೀಸರು ಬಂಧಿಸಿದ್ದಾರೆ.

ಸದ್ಯ ಡ್ರಗ್ಸ್ ಪಾರ್ಟಿಗೂ ಆರ್ಯನ್ ಖಾನ್‌ಗೂ ಯಾವುದೇ ಸಂಬಂಧವಿಲ್ಲ ಅಂತ ವಾದ ಮಂಡಿಸಿ, ಮೊದಲ ದಿನದಲ್ಲೇ ಶಾರುಖ್ ಕುಟುಂಬಕ್ಕೆ ಸತೀಶ್ ಮಾನಶಿಂಧೆ ಒಂದು ಹಂತದ ಗೆಲುವು ತಂದುಕೊಟ್ಟಿದ್ದಾರೆ. ನಿನ್ನೆ ಸಂಜೆ ನ್ಯಾಯಾಲಯಕ್ಕೆ ಶಾರುಖ್​ ಪುತ್ರನನ್ನ ಹಾಜರುಪಡಿಸಿದಾಗ, ಅವರ ವಕೀಲ ಸತೀಶ್ ಮಾನಶಿಂಧೆ ಆರ್ಯ್​ನ್​ ಖಾನ್​ ಕ್ರೂಸ್​ನಲ್ಲಿ ನಡೆದ ಪಾರ್ಟಿಗೆ ಒಬ್ಬ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು ಅವರನ್ನ ಎರಡೆರಡು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ವಾದಿಸಿದ್ದಾರೆ.

ಈ ವೇಳೆ ಪೊಲೀಸರಿಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು ಅವರ ಲಗೇಜ್ ಜೊತೆಗೆ ಸ್ನೇಹಿತರನ್ನೂ ಪರೀಕ್ಷಿಸಿದ್ದಾರೆ. ಯಾವುದೇ ಮಾದಕ ವಸ್ತುವಿನ ಕುರಿತಾಗಿ ಮಾಹಿತಿ ಲಭ್ಯವಾಗಿಲ್ಲ ಎಂದು ಮಾನಶಿಂಧೆ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

Related posts

: ಮಾರಣಬಸರಿ ಟು ಜಕ್ಕಲಿ ರಸ್ತೆ ಎರಡು ವರ್ಷವಾದರೂ ಡಾಂಬರ ಕಾಣದ ರಸ್ತೆ

satyadarshana

ಸತ್ಯದರ್ಶನ ಕನ್ನಡ ದಿನಪತ್ರಿಕೆ.08.04.2023

satyadarshana

ಉಪಚುನಾವಣೆಯಲ್ಲಿ ಗುಡುಗಿದ ಜೆಡಿಎಸ್

satyadarshana