ಪಟ್ಟಣದಲ್ಲಿ ಮೇ 11ಕ್ಕೆ ಭವ್ಯ ನಾಟಕ
‘ಧರ್ಮದ ನುಡಿ ಬೆಂಕಿಯ ಕಿಡಿ’ ಪ್ರದರ್ಶನ
ನರೇಗಲ್ಲ: ಪಟ್ಟಣದ ಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಕಟ್ಟಿಬಸವೇಶ್ವರ ನಾಟ್ಯ ಸಂಘದ ವತಿಯಿಂದ ಹಜರತ್ ರಹಿಮಾನ್ ಶಾವಲಿ ಶರಣರ ಉರುಸಿನ ಅಂಗವಾಗಿ ಬೃಹತ್ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಮೇ 11 ರ ಸೋಮವಾರ ರಾತ್ರಿ 10:00 ಗಂಟೆಗೆ ಹಿರೇಬೂದಿಹಾಳದ ಡಿ.ಆರ್. ಪೂಜಾರ ವಿರಚಿತ “ಧರ್ಮದ ನುಡಿ ಬೆಂಕಿಯ ಕಿಡಿ” (ಅರ್ಥಾತ್: ಅನಾಥ ಕಟ್ಟಿದ ಅರಿಶಿಣದ ತಾಳಿ) ಎಂಬ ಸಾಮಾಜಿಕ ಕ್ರಾಂತಿಕಾರಿ ಹಾಗೂ ಹಾಸ್ಯಭರಿತ ನಾಟಕವು ಅತ್ಯಂತ ವೈಭವದಿಂದ ಜರುಗಲಿದೆ.
ದಿವ್ಯ ಸಾನಿಧ್ಯ ನರೇಗಲ್ಲಿನ ಹಿರೇಮಠದ ಷ.ಬ್ರ.ಮಲ್ಲಿಕಾರ್ಜುನ ಶಿವಾಚಾರ್ಯರು ಮತ್ತು ಹಜರತ್ ಮಂಜೂರ ಹುಸೇನ ಶಾವಲಿ ದರ್ಗಾದ ಶರಣರು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಮಲ್ಲನಗೌಡ ನಿಂ.ಪಾಯಪ್ಪಗೌಡ್ರ ಇವರು ವಹಿಸುವರು.
ಸಂಗೀತ ಗುರು ಪುಟ್ಟರಾಜ ಮೆಲೋಡೀಸ್ ಮತ್ತು ಶಬ್ಬರ ನಾಯಕ ಬಾದಾಮಿ ತಂಡದಿಂದ ಸುಶ್ರಾವ್ಯ ಸಂಗೀತ ಹಾಗೂ ಗಾಯನವಿರಲಿದೆ.
ವಿಶೇಷ ಆಕರ್ಷಣೆ:
ಆಧುನಿಕ ವಿದ್ಯುತ್ ದೀಪಾಲಂಕಾರ ಮತ್ತು ಭವ್ಯ ರಂಗಸಜ್ಜಿಕೆಯೊಂದಿಗೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಪ್ರತಿಭಾನ್ವಿತ ಕಲಾವಿದರು ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಮಾಲೀಕರಾದ ಮಲ್ಲನಗೌಡ ಪಾಯಪ್ಪಗೌಡರ ಮತ್ತು ಪರಪ್ಪ ಬೆಡಗಲ್ಲ ಅವರ ಮಾರ್ಗದರ್ಶನದಲ್ಲಿ ಈ ಕಲಾ ಸೇವೆ ನಡೆಯಲಿದೆ.
ನಾಟಕದ ಯಶಸ್ಸಿಗಾಗಿ ಕಟ್ಟಿಬಸವೇಶ್ವರ ಓಣಿಯ ಸಮಸ್ತ ಗುರು-ಹಿರಿಯರು, ಯುವ ಮಿತ್ರರು ಹಾಗೂ ನರೇಗಲ್ಲ ಗ್ರಾಮಸ್ಥರು ಸಜ್ಜಾಗಿದ್ದಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
