Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿ

ಕೊಪ್ಪಳ ಜಿಲ್ಲೆ ಗಂಗಾವತಿ; ಅಂಬೇಡ್ಕರ್‌ ಮೂರ್ತಿ ಹೋಲುವ ಗಣೇಶ ಮೂರ್ತಿ, ದೂರು ದಾಖಲು

ಕೊಪ್ಪಳ ;  ಗಂಗಾವತಿಯಲ್ಲಿ  ಅಂಬೇಡ್ಕರ್ ನಗರದಲ್ಲಿ ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಡಾ. ಬಿ.ಆರ್‌. ಅಂಬೇಡ್ಕರ್ ಅವರನ್ನು ಹೋಲುವ ರೀತಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪರಿಶಿಷ್ಟ ಸಂಘಟನೆಯ ಹೋರಾಟಗಾರ ಹುಲಿಗಪ್ಪ ಮಾಗಿ ಅವರು ವಿನಾಯಕ ಸ್ನೇಹವೃಂದ ಯುವಕ ಮಂಡಳಿ (ಮಾದಿಗ ಸಮಾಜ) ಅಂಬೇಡ್ಕರ್ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅವರಿಗೆ ಅಪಮಾನ ಮಾಡಿದೆ ಎಂದು ದೂರಿದ್ದಾರೆ.

ಗಣೇಶ ಮೂರ್ತಿ ಕಾಲಿನಿಂದ ಕುತ್ತಿಗೆ ತನಕ ಅಂಬೇಡ್ಕರ್ ರೂಪ ಹೊಂದಿದ್ದು, ರುಂಡ ಮಾತ್ರ ಗಣೇಶನದ್ದಾಗಿದೆ. ಯುವಕ ಮಂಡಳಿ ಸದಸ್ಯರು ಗಲಭೆ  ಸೃಷ್ಟಿಸುವ  ಉದ್ದೇಶದಿಂದಲೇ ಈ ರೀತಿಯ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪೊಲೀಸರು ಕೂಡಲೇ ಗಣೇಶ ಯುವಕ ಮಂಡಳಿ ಸದಸ್ಯರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

Related posts

ಹಗಲು-ರಾತ್ರಿ ನಿತ್ಯ ನೂರಾರು ಟ್ರಿಪ್ ಮರಂ ಸಾಗಣೆ ಕಣ್ಣು ಮುಚ್ಚಿ ಕುಂತ ಅಧಿಕಾರಿಗಳು. ?

satyadarshana

ಹಾನಿಗೀಡಾದ ಮೆಣಸಿನಕಾಯಿ ಬೆಳೆ ಕೈಯಲ್ಲಿ ಹಿಡಿದುಕೊಂಡ ಪ್ರತಿಭಟನೆ- ಬೆಳೆ ವಿಮೆಗೆ ಆಗ್ರಹ

satyadarshana

ಜನಗಣತಿ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ

satyadarshana

Leave a Comment