Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮಾಜಿ ದೇವದಾಸಿ ಮಹಿಳೆಯರ ಬದುಕಿಗೆ ವಿಶೇಷ ಸ್ಪರ್ಶ ನೀಡಿ: ಸರ್ಕಾರಕ್ಕೆ ರೋಣ ತಹಶೀಲ್ದಾರ್ ಮೂಲಕ ಮನವಿ

 

ರೋಣ :ಎ 17:ದಶಕಗಳ ಕಾಲ ಸಾಮಾಜಿಕ ಶೋಷಣೆಗೆ ಒಳಗಾಗಿ, ಇಂದಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಹೋರಾಡುತ್ತಿರುವ ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ಮಾಜಿ ದೇವದಾಸಿ ಮಹಿಳೆಯರನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸರ್ಕಾರಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಇಂದು ಬೃಹತ್ ಮನವಿ ಸಲ್ಲಿಸಲಾಯಿತು.

ವಿಮುಕ್ತಿ ವಿಮುಕ್ತ ದೇವದಾಸಿ ಮಹಿಳಾ ಕರ್ನಾಟಕ ವೇದಿಕೆಯ ವತಿಯಿಂದ ಪಟ್ಟಣದ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ನೂರಾರು ಮಹಿಳೆಯರು, ಕೆ. ನಾಗರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಿ ತಮ್ಮ ಅಳಲನ್ನು ತೋಡಿಕೊಂಡರು.

ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಅಭಿಷೇಕ್ ಕೊಪ್ಪದ್ ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕೆಂಬ ಹಂಬಲ ಹೊಂದಿರುವ ಈ ಸಮುದಾಯದ ಮಹಿಳೆಯರು ಇಂದಿಗೂ ಅತ್ಯಂತ ಬಡತನ ಮತ್ತು ಅಸಮಾನತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇವರನ್ನು ಕೇವಲ ಫಲಾನುಭವಿಗಳನ್ನಾಗಿ ನೋಡದೆ, ಇವರ ಸಾಮಾಜಿಕ ಹಿನ್ನೆಲೆಯನ್ನು ಗಮನಿಸಿ ವಿಶೇಷ ಘಟಕ ಯೋಜನೆ’ (SCP) ಅಡಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಮನೆ ಇಲ್ಲದ ಮಾಜಿ ದೇವದಾಸಿ ಮಹಿಳೆಯರಿಗೆ ಸರ್ಕಾರಿ ಜಮೀನು ಗುರುತಿಸಿ ತಕ್ಷಣವೇ ಹಕ್ಕುಪತ್ರ ನೀಡಬೇಕು ಹಾಗೂ ಬಿಪಿಎಲ್ ಕಾರ್ಡ್ ಮತ್ತು ಮಾಸಾಶನ ವಿಳಂಬವಿಲ್ಲದೆ ತಲುಪಿಸಬೇಕು. ಮಾಜಿ ದೇವದಾಸಿ ಮಹಿಳೆಯರ ಮಕ್ಕಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲಾತಿ ನೀಡಬೇಕು. ಸರ್ಕಾರಿ ನಿಗಮಗಳ ಮೂಲಕ ದೊರೆಯುವ ಸ್ವಯಂ ಉದ್ಯೋಗ ಸಾಲಗಳಲ್ಲಿ ಶೇ. 100 ರಷ್ಟು ಆದ್ಯತೆ ನೀಡಬೇಕು. ದೇವದಾಸಿ ಸಮುದಾಯದಿಂದ ಬರುವ ಅರ್ಜಿಗಳನ್ನು ಸಾಮಾನ್ಯ ಅರ್ಜಿಗಳಂತೆ ಪರಿಗಣಿಸದೆ, ವಿಶೇಷ ಆದ್ಯತೆಯ ಮೇಲೆ ವಿಲೇವಾರಿ ಮಾಡಲು ಜಿಲ್ಲಾಡಳಿತ ಸೂಚನೆ ನೀಡಬೇಕು.

ಇದೆ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಗೌರವ ಹಿರೇಮನಿ, ಸಿದ್ದವ್ವ ಮಾದರ, ಮಂಜುಳಾ ತೆಗೀಮನಿ, ಯಲ್ಲವ್ವ ತಗ್ಗಿನಮಣಿ, ಮುದುಕವ್ವ ಕೊತಬಾಳ, ಎಲ್ಲಮ್ಮ ಚಲವಾದಿ, ರೇವಪ್ಪ ಕೆಂಗರ ಸೇರಿದಂತೆ ರೋಣ ಮತ್ತು ಗಜೇಂದ್ರಗಡ ತಾಲ್ಲೂಕಿನ ನೂರಾರು ಮಹಿಳೆಯರು ಭಾಗವಹಿಸಿದ್ದರು.

Related posts

ಅಚಲ ಆತ್ಮವಿಶ್ವಾಸಕ್ಕೆ ಅತಿಥಿ  ಆಡಿ ತಪ್ಪುವೆನೆಂದು ಎಂದು  ಆಡುವುದು ಬಿಡಲಿಲ್ಲ.

satyadarshana

ರಾಜ್ಯದ ಕಾನೂನು ಬಾಹಿರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಮಾರಾಟ ಗಮನಕ್ಕೆ ಬಂದರೆ ಕಾನೂನು ಕ್ರಮ. ಅಬಕಾರಿ ಸಚಿವ ಕೆ.ಗೋಪಾಲಯ್ಯ

satyadarshana

ಯಲಬುರ್ಗಾ.ಜಿಲ್ಲಾಡಳಿತ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ತೆರೆಯುವುದಕ್ಕೆ ಪಾಲಕರು ತೀವ್ರ ವಿರೋಧ..

satyadarshana

Leave a Comment