Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮೊರಕ್ಕೋದ ಅಂತರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಕ್ಕೆ ಕುಲಪತಿ ಪ್ರೊ. ಬಿ.ಕೆ ರವಿ ಅವರಿಗೆ ಆಹ್ವಾನ

ಕೊಪ್ಪಳ: ಆಫ್ರಿಕ ಖಂಡದ ಮೊರಕ್ಕೋ ದೇಶದ ಕಾಸಾಬ್ಲಾಂಕಾದಲ್ಲಿ ಜೂನ್ 10 ಮತ್ತು 11 ರಂದು ನಡೆಯುವ 16ನೇ ಅಂತರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿ ಅವರು ಭಾಗಿಯಾಗಲಿದ್ದಾರೆ .

“ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ” ಎಂಬ ಮಹತ್ವದ ವಿಷಯದ ಕುರಿತಾಗಿ ಹಸನ್ II ವಿಶ್ವವಿದ್ಯಾಲಯದಿಂದ ಈ ಅಂತರಾಷ್ಟ್ರೀಯ ಸಮ್ಮೇಳನ ಆಯೋಜಿಸಿದ್ದು . ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರೊ.ಬಿ. ಕೆ ರವಿ ಅವರು ಪ್ರಧಾನ ಭಾಷಣವನ್ನು ಮಾಡಲಿದ್ದಾರೆ.

ಜೂನ್ 11 ರಂದು “ಉನ್ನತ ಶಿಕ್ಷಣ ಮತ್ತು ಮಾನವೀಯ ಮೌಲ್ಯಗಳು” ಎಂಬ ವಿಷಯದ ಕುರಿತು ವಿಶೇಷ ಗೋಷ್ಠಿಯನ್ನು ಪ್ರಸ್ತುತಪಡಿಸಲಿದ್ದಾರೆ.

ಜೂನ್ ಹತ್ತು,ಹನ್ನೊಂದನೇ ತಾರೀಕುರಂದು ನಡೆಯುವ ಸಮ್ಮೇಳನವು ಜಾಗತಿಕ ಮಟ್ಟದ ಪ್ರಮುಖ ಶೈಕ್ಷಣಿಕ ತಜ್ಞರನ್ನು ಒಗ್ಗೂಡಿಸುತ್ತಿದ್ದು, ಅಮೆರಿಕ, ಜೋರ್ಡಾನ್, ಯೂರೋಪ್, ಆಫ್ರಿಕ, ಕುವೈತ್, ಕೆನಡಾ ಸೇರಿದಂತೆ 12 ರಾಷ್ಟ್ರಗಳ 254ಕ್ಕೂ ಅಧಿಕ ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಪ್ರೊ. ಬಿ.ಕೆ. ರವಿ ಅವರ ಈ ಭಾಗವಹಿಸುವಿಕೆ ಕೊಪ್ಪಳ ವಿಶ್ವವಿದ್ಯಾಲಯದ ಖ್ಯಾತಿಗೆ ಮತ್ತಷ್ಟು ಗರಿಮೆ ತಂದುಕೊಡಲಿದ್ದು, ವಿಶ್ವ ಮಟ್ಟದಲ್ಲಿ ಶೈಕ್ಷಣಿಕ ವಿನಿಮಯಕ್ಕೆ ದಾರಿ ಮಾಡಿಕೊಡಲಿದೆ.

 

Related posts

ಸತ್ಯದರ್ಶನ ಕನ್ನಡ ದಿನಪತ್ರಿಕೆ.26.04.2023

satyadarshana

ನರೇಗಾ ಬದಲು ಜುಲೈ 1 ರಿಂದ ವಿಬಿ-ಜಿ ರಾಮ್ (ಜಿ) ಯೋಜನೆ ಜಾರಿ.

satyadarshana

ಡಾ.ಎಮ್.ಸಿ. ಸುಧಾಕರ್ ಪಾಲಿಟೆಕ್ನಿಕ್ ಅತಿಥಿ ಉಪನ್ಯಾಸಕರ ಪಾಲಿನ ದೇವರು :ಯಶವಂತ.

satyadarshana

Leave a Comment