Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಬೆಳ್ಳಂಬೆಳಗ್ಗೆ ಗದಗ, ಹಡಗಲಿ, ಹಾವೇರಿ ಸೇರಿ 6 ಕಡೆಗಳಲ್ಲಿ ದಾಳಿ

ಗದಗ: ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಹನುಂತರಾಯ ನೇತೃತ್ವದಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಕಚೇರಿ, ಮನೆ ಸೇರಿ 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಶನಿವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರಿಗೆ ಸೇರಿದ ಗದಗ, ಹಡಗಲಿ, ಹಾವೇರಿ ಸೇರಿ ಮನೆ, ಕಚೇರಿ ಹಾಗೂ ನಗರದ ನಿರ್ಮಿತಿ ಕೇಂದ್ರ ಕಚೇರಿ ಸೇರಿ 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಚಿನ್ಮಾಭರಣ, ಬೆಳ್ಳಿ ಆಭರಣ, ಬೆಲೆ ಬಾಳುವ ವಾಹನಗಳು ಹಾಗೂ ಆಸ್ತಿಪತ್ರಗಳು ದೊರೆತಿವೆ ಎನ್ನಲಾಗಿದೆ.

ಲೋಕಾಯುಕ್ತ ಎಸ್ಪಿ ಹನುಂತರಾಯ ನೇತೃತ್ವದಲ್ಲಿ ರಾಯಚೂರು, ಕೊಪ್ಪಳ, ಹೊಸಪೇಟೆಯ ಲೋಕಯುಕ್ತ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದು, ಅಕ್ರಮ ಆಸ್ತಿ ಕುರಿತ ದಾಖಲೆಗಳ ಪರಿಶೀಲನೆ‌ ನಡೆಸಿದ್ದಾರೆ

Related posts

ಮಗು ಮನುಕುಲದ ಆಸ್ತಿಯಾಗಬೇಕು – ಗೌರವಾನ್ವಿತ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ್

satyadarshana

ಅಕ್ರಮವಾಗಿ ಮರಳು ಸಾಗಾಟ ಭೂ ವಿಜ್ಞಾನಿ ನಾಗರಾಜು ಚಾಲಕ ಸಚಿನ್‌ ಗೌರಿಪುರ ಮೇಲೆ ಹಲ್ಲೆ

satyadarshana

ಜೆಜೆಎಂ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕ ನೀರು ಒದಗಿಸಿ> ಸಂಸದ  ಶಿವಕುಮಾರ ಉದಾಸಿ

satyadarshana

Leave a Comment