Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಅಕ್ರಮವಾಗಿ ಮರಳು ಸಾಗಾಟ ಭೂ ವಿಜ್ಞಾನಿ ನಾಗರಾಜು ಚಾಲಕ ಸಚಿನ್‌ ಗೌರಿಪುರ ಮೇಲೆ ಹಲ್ಲೆ

 

ಕೊಪ್ಪಳ: ತಾಲ್ಲೂಕಿನ ಹಿರೇಸಿಂದೋಗಿ ಸಮೀಪದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಭೂ ವಿಜ್ಞಾನಿ ನಾಗರಾಜು ಈ. ಮತ್ತು ಅವರ ವಾಹನ ಚಾಲಕ ಸಚಿನ್‌ ಗೌರಿಪುರ ಎಂಬುವರ ಮೇಲೆ ಹಲ್ಲೆಯಾಗಿದೆ

ಹಿರೇಸಿಂದೋಗಿ ಪಕ್ಕದ ಹಿರೇಹಳ್ಳದಲ್ಲಿ ವ್ಯಾಪಕವಾಗಿ ಮರಳು ಸಾಗಣೆ ನಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದರಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಮೂವರು ಸಿಬ್ಬಂದಿ ಟ್ರ್ಯಾಕ್ಟರ್‌ ಮತ್ತು ಟಿಪ್ಪರ್‌ಗಳಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದ ದೃಶ್ಯಾವಳಿಗಳನ್ನು ಚಿತ್ರೀಕರಿಸಿ ವಶಕ್ಕೆ ಪಡೆಯಲು ಹೋದಾಗ ಪುಂಡರು ದಾಳಿ ಮಾಡಿ ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ.

‘ಮರಳು ಸಾಗಿಸುತ್ತಿದ್ದ ವಾಹನಗಳಿಗೆ ನೋಂದಣಿ ಸಂಖ್ಯೆ ಇರಲಿಲ್ಲ. ದಾಖಲೆಗಳನ್ನು ನೀಡುವಂತೆ ಕೇಳಿದರೂ ಕೊಡಲಿಲ್ಲ. ವಾಹನಗಳನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿದ್ದ ಐದು ಜನ ಸೇರಿಕೊಂಡು ಜೀವ ಬೆದರಿಕೆ ಒಡ್ಡಿ ಬಲವಂತವಾಗಿ ಟ್ರ್ಯಾಕ್ಟರ್‌ ಓಡಿಸಿಕೊಂಡು ಹೋಗಿದ್ದಾರೆ’ ಎಂದು ಭೂ ವಿಜ್ಞಾನಿ ನಾಗರಾಜು ನೀಡಿದ ದೂರಿನ ಮೇರೆಗೆ ಅಳವಂಡಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ಎಫ್‌ಐಆರ್‌ ದಾಖಲಾಗಿದೆ.

ಚಿಕ್ಕಸಿಂದೋಗಿಯ ಗುಡದಪ್ಪ ಕಾಸಲೇರ, ಶಬ್ಬೀರಸಾಬ್‌ ವಾಲಿಕಾರ, ಮಲ್ಲಪ್ಪ ಚಿಕ್ಕೇನಕೊಪ್ಪ, ವೀರಯ್ಯ ಹಿರೇಮಠ ಮತ್ತು ಚಿಕ್ಕೇನಕೊಪ್ಪದ ಯಲ್ಲಪ್ಪ ತಲ್ಲೂರ ವಿರುದ್ಧ ದೂರು ದಾಖಲಾಗಿದೆ.

Related posts

ಕರ್ನಾಟಕ ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಕೊಡಮಾಡುವ 20.22ನೇ ಸಾಲಿನ ಬಿ ಕೆ ಮಾದಿ ಪತ್ರಕರ್ತರತ್ನ ಪ್ರಶಸ್ತಿಗೆ ಆಯ್ಕೆ

satyadarshana

ದೇಶದ ಅಸಹಿಷ್ಣುತೆ ಬಗ್ಗೆ ಮಾತನಾಡುವ ಖಾನ್, ಮಗನನ್ನು ಪಾರು ಮಾಡು ಎಂದು ಸತೀಶ್ ಮಾನಶಿಂದೆ ಬಳಿ ಮೊರೆ.

satyadarshana

ಸಮರ್ಪಕ ಕುಡಿವ ನೀರು ಪೂರೈಕೆಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ನಿರ್ದೇಶನ

satyadarshana