Satya Darshana
ಬಿಸಿ ಬಿಸಿ ಸುದ್ದಿ
ಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಮಗು ಮನುಕುಲದ ಆಸ್ತಿಯಾಗಬೇಕು – ಗೌರವಾನ್ವಿತ ರಾಜ್ಯಪಾಲರಾದ ಚಂದ್ರಶೇಖರ ಹೆಚ್. ವಿಜಯಶಂಕರ್

ಕೊಪ್ಪಳ :ಫೆಬ್ರವರಿ 24. ಮಗುವನ್ನು ಮನುಕುಲದ ಆಸ್ತಿಯನ್ನಾಗಿ ಮಾಡುವ ಬಹುದೊಡ್ಡ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಮೇಘಾಲಯ ರಾಜ್ಯದ ರಾಜ್ಯಪಾಲರಾದ ಗೌರವಾನ್ವಿತ ಚಂದ್ರಶೇಖರ ಹೆಚ್. ವಿಜಯಶಂಕರ್ ಹೇಳಿದರು.

ಅವರು ಶನಿವಾರ ದಿವ್ಯಾಂಗ ಮಕ್ಕಳ ಶಾಲೆ, ಹಿಂದು ಸೇವಾ ಪ್ರತಿಷ್ಠಾನ ಮತ್ತು ಮಹಾತ್ಮಗಾಂಧಿ ಅನಾಥ ಸೇವಾ ಟ್ರಸ್ಟ್ ಸಹಯೋಗದಲ್ಲಿ ಕೊಪ್ಪಳ ನಗರದಲ್ಲಿ ನಡೆಸುತ್ತಿರುವ ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಗೆ ಭೇಟಿ ನೀಡಿದ ನಂತರ ಮಾತನಾಡಿದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಅವರಿಗೆ ಪೌಷ್ಟಿಕ ಆಹಾರ ಸಿಗಬೇಕು. 4 ರಿಂದ 14 ವರ್ಷದಲ್ಲಿ ಮಕ್ಕಳ ಶಾರೀರಿಕ ಬೆಳೆವಣಿಗೆ ಜೊತೆಗೆ ಅವರ ಮಾನಸಿಕ ಬೆಳವಣಿಗೆ ಸಹ ಆಗುತ್ತದೆ. ಕೆಲವೊಂದು ಮಕ್ಕಳ ಶಾರೀರಿಕ ಅಂಗವೈಕಲ್ಯ ಅನುವಂಶೀಕವಾಗಿ ಬರುತ್ತದೆ. ಅವರಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸುವ ಕೆಲಸ ಮಾಡಬೇಕು ಎಂದರು.

ಸಂಬಂಧಿಸಿದ ಇಲಾಖೆಯ ಮೂಲಕ ಇಂತಹ ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವ ಕೆಲಸ ಆಗಬೇಕು. ಮೈಸೂರಿನಲ್ಲಿ ಸ್ಪೀಚ್ ಆ್ಯಂಡ ಹಿಯರಿಂಗ್ ಸಂಸ್ಥೆ ಇದೆ. ಇದು ಮೈಸೂರು ಮಹಾರಾಜರು ಪ್ರಾರಂಭಿಸಿದರು. ಈ ಸಂಸ್ಥೆ ಇಂತಹ ವಿಶೇಷ ಚೇತನ ಮಕ್ಕಳ ಸರ್ವೆಯನ್ನು ಆಗಾಗ ನಡೆಸುತ್ತಾರೆ. ನಮ್ಮ ಮಕ್ಕಳು ಆರೋಗ್ಯ ಪೂರ್ಣವಾಗಿ ಬದುಕಬೇಕು. ಸತ್ಯಸಾಯಿ ಟ್ರಸ್ಟಿನ ಮಧುಸುಧನ್ ಭಾಬಾ ಅವರು ಇಂತಹ ವಿಶೇಷ ಚೇತನ ಮಕ್ಕಳಿಗೆ ಉಚಿತ ಸೇವೆ ನೀಡುತ್ತಾರೆ. ಅವರಿಗೆ ಇಲ್ಲಿಗೆ ಬರಲು ತಿಳಿಸುತ್ತೇನೆ ಎಂದು ಹೇಳಿದರು.

ಇದೊಂದು ಒಳ್ಳೆ ಪುಣ್ಯದ ಕಾರ್ಯ ಮಾಡುತ್ತಿದ್ದಿರಾ ಇದನ್ನು ಮಾಡುವ ಮನಸ್ಸು ಬೇಕಲ್ಲ. ಅದನ್ನು ನೀವು ಮಾಡಿ ತೋರಿಸಿದ್ದಿರಾ. ನಾನು ಬದುಕುವದರ ಜೊತೆಗೆ ಸಮಾಜವೂ ಬದುಕಬೇಕು. ನಾನೊಬ್ಬನೆ ಬದುಕಿದರೆ ಸಾಲದು. ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆ ಒಳ್ಳೆಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಹಿಂದು ಸೇವಾ ಪ್ರತಿಷ್ಠಾನ ಸಂಸ್ಥೆಯ ಎಂ.ಡಿ ಮಿಲಿಂದ್, ಸಂಚಾಲಕ ಸುಧಾಕರ್, ಮಹೇಶ ನಾಲ್ವಾಡ್, ರಾಜೇಂದ್ರ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಅರುಣ ಚೇತನ ದಿವ್ಯಾಂಗ ಮಕ್ಕಳ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ತಾಳೆ ಎಣ್ಣೆ ತುಟ್ಟಿ: ಭಾರತದಲ್ಲಿ ಏ.28ರ ನಂತರ ಪಾಮ್ ಆಯಿಲ್ ಏರಿಕೆ.

satyadarshana

ಕರ ಪತ್ರ, ಬ್ಯಾನರ್, ಪೋಸ್ಟರ್ ಮುದ್ರಿಸಲು ಆರ್‌ಓ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿಗಳು

satyadarshana

ಭಕ್ತರ ಗಸೋಗಿನಲ್ಲಿ ಬಂದು, ಚಾಕು ಇರಿದು ಕೊಲೆ ಮಾಡಿ ಹಂತಕರು ಪರಾರಿ

satyadarshana

Leave a Comment