Satya Darshana
ಬಿಸಿ ಬಿಸಿ ಸುದ್ದಿ
Otherಜಿಲ್ಲೆಬಿಸಿ ಬಿಸಿ ಸುದ್ದಿರಾಜ್ಯ

ಶೈಕ್ಷಣಿಕ ಅಭಿವೃದ್ಧಿಯಲ್ಲೂ ತನ್ನ ಪಾತ್ರವನ್ನು ವಿಸ್ತರಿಸಲು ಸಾಧ್ಯ ಸಿ. ಬಿ. ಭೋವಿ

ಗುರುವಂದನಾ ಕಾರ್ಯಕ್ರಮ

ಗಜೇಂದ್ರಗಡ: ಪಾಠ ಪ್ರವಚನಗಳಷ್ಟೇ ನಡೆಯುವುದಲ್ಲ. ಕ್ರಿಯಾತ್ಮ ಚಟುವಟಿಕೆಗಳು ನಡೆದಾಗಲೇ ಶಾಲೆಯೊಂದು ಶೈಕ್ಷಣಿಕ ಅಭಿವೃದ್ಧಿಯಲ್ಲೂ ತನ್ನ ಪಾತ್ರವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಸಿ. ಬಿ. ಭೋವಿ ಹೇಳಿದರು

ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4 ರಲ್ಲಿ ಹಮ್ಮಿಕೊಂಡಿದ್ದ 2012-13 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದರು.

ಸರ್ಕಾರಿ, ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಬದುಕು, ಸಮಾಜದಲ್ಲಿ ಛಲ, ಹಿಂಜರಿಕೆಯಿಲ್ಲದೇ ಮುನ್ನಡೆಯಲು ಸಾಧ್ಯ ಎಂದರು.

ಅತಿಥಿಯಾಗಿ ಪ್ರಭು ಚವಡಿ ಮಾತನಾಡಿ ಇದು ಗೌರವಪೂರ್ಣ ಕಾರ್ಯಕ್ರಮ ನೀವು ಶಿಕ್ಷಕರ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಈ ವೇದಿಕೆಯಿಂದ ಸಾಬಿತಾಗಿದೆ ಗುರುವಿನ ಆಶಿರ್ವಾದ ಸದಾಕಾಲ ನಿಮ್ಮೆಲ್ಲರಮೇಲಿದೆ ನಿಮ್ಮ ಬದುಕಿನಲ್ಲಿ ಅವರು ತೋರಿದ ಮಾರ್ಗ ನೀವು ಮುಂದಿನ ಪಿಳಿಗೆಗೆ ಮಾರ್ಗದರ್ಶಕರಾಗಿ ಸಾಧನೆ ಮಾಡಿ ಎಂದರು.

Related posts

ರಷ್ಯಾ – ಉಕ್ರೇನ್ ಯುದ್ದ: ಮುಂಡರಗಿ ಯುವಕನ ರಕ್ಷಣೆಗೆ ಪೋಷಕರ ಆಗ್ರಹ

satyadarshana

ಹಿಜಬ್‍ಗಾಗಿ ಹೋರಾಟ ಮಾಡ್ತಿರುವವರೇ ಗಮನಿಸಿ – ಶಿಕ್ಷಣ ಇಲಾಖೆಯಿಂದ ಹೊರ ಬಿತ್ತು ಮಹತ್ವದ ಆದೇಶ

satyadarshana

ಗಣೇಶ ಮೂರ್ತಿಯ ಪ್ರತಿಷ್ಠಾಪನೆ. ಹುಬ್ಬಳ್ಳಿ ಈದ್ಗಾದಲ್ಲಿ ಚೌತಿ ಆಚರಣೆಗೆ ಹೈಕೋರ್ಟ್‌ ಅಸ್ತು ;

satyadarshana